Crime News; ಪೊಲೀಸ್ ವಿಚಾರಣೆ, ಮರ್ಯಾದೆಗೆ ಅಂಜಿ ಕೋಲಾರದ ಕುಟುಂಬ ಸುಸೈಡ್ ಯತ್ನ
* ಕೌಟುಂಬಿಕ ಕಲಹ ಹಿನ್ನೆಲೆ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಯತ್ನ
* ಕೋಲಾರ ನಗರದ ಕಾರಂಜಿಕಟ್ಟೆ ಬಡಾವಣೆಯ 4ನೇ ಕ್ರಾಸ್ ನಲ್ಲಿ ಘಟನೆ
* ವಿಷ ಕುಡಿದ ಮುನಿಯಪ್ಪ ಎಂಬುವರ ಕುಟುಂಬ
* ತಂದೆ-ತಾಯಿ, ಮಗಳು, ಅಳಿಯ ಹಾಗೂ ಮೊಮ್ಮಗಳು ವಿಷ ಕುಡಿದು ಆತ್ಮಹತ್ಯೆಗೆ ಯತ್ನ
ಕೋಲಾರ(ನ. 07) ಪೊಲೀಸ್ (Karnataka Police) ವಿಚಾರಣೆ ಮತ್ತು ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ (Suicide))ಯತ್ನಿಸಿರುವ ಪ್ರಕರಣ ವರದಿಯಾಗಿದೆ. ಕೋಲಾರ (Kolar) ನಗರದ ಕಾರಂಜಿಕಟ್ಟೆ ಬಡಾವಣೆಯ 4ನೇ ಕ್ರಾಸ್ ನಲ್ಲಿ ಘಟನೆ ನಡೆದಿದೆ. ಮುನಿಯಪ್ಪ ಎಂಬುವರ ಕುಟುಂಬ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದೆ.
ತಂದೆ-ತಾಯಿ, ಮಗಳು, ಅಳಿಯ ಹಾಗೂ ಮೊಮ್ಮಗಳು ವಿಷ ಕುಡಿದು ಆತ್ಮಹತ್ಯೆಗೆ ಯತ್ನ ನಡೆಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಐವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮುನೇಶಪ್ಪ(75) ನಾರಾಯಣಮ್ಮ (70), ಬಾಬು(45) ಪುಷ್ಪ(33) ಗಂಗೋತ್ರಿ (17) ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಐವರು. ಮುನೇಶಪ್ಪ ಪುತ್ರಿ ಪುಷ್ಪ ಬೇರೆಯೊಬ್ಬರ ಗಂಡು ಮಗುವನ್ನು ಮಾರಾಟ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದರು. ಮಹಿಳಾ ಠಾಣೆ ಪೋಲಿಸರು ಈ ಬಗ್ಗೆ ವಿಚಾರಣೆ ನಡೆಸಿದ್ದರು. ಕೇಸ್ ದಾಖಲು ಹಾಗೂ ಮಾನಕ್ಕೆ ಅಂಜಿ ತಂದೆತಾಯಿ, ಮಗಳು, ಅಳಿಯ ಹಾಗೂ ಮೊಮ್ಮಗಳು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಮಾಸ್ ಸುಸೈಡ್ ಪ್ರಕರಣ; ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಪುಟ್ಟ ಮಗುವೊಂದು ಪವಾಡದ ರೀತಿ ಬದುಕಿಬಂದಿತ್ತು. ಆತ್ಮಹತ್ಯೆ ಮಾಡಿಕೊಂಡ ನಾಲ್ಕು ದಿನದ ನಂತರ ಪ್ರಕರಣ ಬೆಳಕಿಗೆ ಬಂದಿತ್ತು. ಭವ್ಯ ಬಂಗಲೆಯಲ್ಲಿ ಎಲ್ಲರೂ ನೇಣಿಗೆ ಶರಣಾಗಿದ್ದರು.
ಬೆಂಗಳೂರಿನ(Bengaluru) ಬ್ಯಾಡರಹಳ್ಳಿ ಸಾಮೂಹಿಕ ಆತ್ಮಹತ್ಯೆ(Mass Suicide) ಪ್ರಕರಣದಲ್ಲಿ ಮನೆ ಮಾಲೀಕ ಶಂಕರ್ ಮತ್ತು ಅಳಿಯನನ್ನು ಪೊಲೀಸರು(Bengaluru Police) ವಶಕ್ಕೆ ಪಡೆದುಕೊಂಡದ್ದರು. ಆತ್ಮಹತ್ಯೆ ಮಾಡಿಕೊಂಡವರು ಡೆತ್ ನೋಟ್ ನಲ್ಲಿ ತಂದೆಯ ಕಿರುಕುಳದ ಬಗ್ಗೆ ಹೇಳಿದ್ದರು.
ನಟಿ ಸೌಜನ್ಯ ಮೊಬೈಲ್ ಸಿಕ್ಕಿಲ್ಲ? ಮತ್ತೊಂದಷ್ಟು ಅನುಮಾನಗಳು
ಶಂಕರ್ ಆಸ್ತಿ ಸಂಪಾದನೆ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿತ್ತು. ಮನೆಯಲ್ಲಿ ಮತ್ತು ತವರು ಮನೆಯಲ್ಲಿಯೂ ನಮಗೆ ಕಿರುಕುಳ ಆಗುತ್ತಿದೆ ಎಂದು ಆತ್ಮಹತ್ಯೆ ಮಾಡಿಕೊಂಡವರು ಡೆತ್ ನೋಟ್ ನಲ್ಲಿ ಬರೆದಿದ್ದರು.
ಪುನೀತ್ ರಾಜ್ ಕುಮಾರ್ ಅಗಲಿಕೆ ನೋವು: ಪುನೀತ್ ರಾಜ್ ಕುಮಾರ್ ಅಕಾಲಿಕ ಅಗಲಿಕೆಯಿಂದ ನೊಂದ ಅಭಿಮಾನಿಗಳು ಆತ್ಮಹತ್ಯೆ ದಾರಿ ಹಿಡಿದಿದ್ದರು. ಯಾರೂ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಶಿವರಾಜ್ ಕುಮಾರ್ ಮನವಿ ಮಾಡಿಕೊಂಡಿದ್ದರು.
ಚನ್ನಪಟ್ಟಣದ ಎಲೆಕೇರೆಯ ಅಭಿಮಾನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ರಾಘವೇಂದ್ರ ರಾಜ್ ಕುಮಾರ್ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಅಭಿಮಾನಿ ವೆಂಕಟೇಶ್ (25) ಆತ್ಮಹತ್ಯೆ ಮಾಡಿಕೊಂಡಿದ್ದರು. ಕ್ಷೌರಿಕ ವೃತ್ತಿ ಮಾಡ್ತಿದ್ದ ವೆಂಕಟೇಶ್ ಪುನೀತ್ ನಿಧನದ ಬಳಿಕ ಸಂಪೂರ್ಣ ಖಿನ್ನತೆಗೆ ಒಳಗಾಗಿದ್ದರು.