ಪಟ್ಟಣದಲ್ಲಿ ಪಡ್ಡೆ ಯುವಕರ ಬೈಕ್‌ ಸ್ಟಂಟ್‌ಗಳು ಜೋರಾಗಿದ್ದು, ಭಾನುವಾರ ಕೂಡ್ಲಿಗಿ ರಸ್ತೆಯಲ್ಲಿ ಯುವಕರಿಬ್ಬರು ಬೈಕ್‌ ವ್ಹೀಲಿಂಗ್‌ ಮಾಡುವಾಗ ಮಗುಚಿ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ.

ಹಗರಿಬೊಮ್ಮನಹಳ್ಳಿ (ಜೂ.5) ಪಟ್ಟಣದಲ್ಲಿ ಪಡ್ಡೆ ಯುವಕರ ಬೈಕ್‌ ಸ್ಟಂಟ್‌ಗಳು ಜೋರಾಗಿದ್ದು, ಭಾನುವಾರ ಕೂಡ್ಲಿಗಿ ರಸ್ತೆಯಲ್ಲಿ ಯುವಕರಿಬ್ಬರು ಬೈಕ್‌ ವ್ಹೀಲಿಂಗ್‌ ಮಾಡುವಾಗ ಮಗುಚಿ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ.

ಸಣ್ಣಪುಟ್ಟಗಾಯಗೊಂಡಿದ್ದರೂ ತಕ್ಷಣವೇ ಯುವಕರು ಅಲ್ಲಿಂದ ಎದ್ದು ಪರಾರಿಯಾಗಿದ್ದಾರೆ. ಹೀಗಾಗಿ ಈ ಯುವಕರು ಯಾರು ಎಂಬುದು ಗೊತ್ತಾಗಿಲ್ಲ.

ಯುವಕರು ತಮ್ಮ ಬೈಕಿನ ಮುಂದಿನ ಗಾಲಿಯನ್ನು ಮೇಲಕ್ಕೆ ಎತ್ತಿ, ಹಿಂದಿನ ಗಾಲಿಯಿಂದ ಬೈಕ್‌ ಓಡಿಸುವ ಸಾಹಸ ಫ್ಯಾಷನ್‌ ಆಗಿದೆ. ಕೆಲ ಯುವಕರು ಜನಸಂದಣಿ ಪ್ರದೇಶದಲ್ಲಿ ಬೈಕ್‌ ನಿಂತಲ್ಲೇ ತಿರುಗಿಸಿ ಗಮನ ಸೆಳೆಯುತ್ತಾರೆ. ಇನ್ನು ಕೆಲ ಬೈಕ್‌ ಇಲ್ಲದ ಯುವಕರು ಸೈಕಲ್‌ಗಳಲ್ಲಿಯೇ ಸ್ಪಂಟ್‌ ಮಾಡುವುದನ್ನು ಅಭ್ಯಾಸ ಮಾಡುತ್ತಾರೆ. ಇವರು ಕೂಡ ಸೈಕಲ್‌ನ ಮುಂದಿನ ಗಾಲಿಯನ್ನು ಮೇಲಕ್ಕೆ ಎತ್ತಿ, ಹಿಂದಿನ ಗಾಲಿಯಲ್ಲಿಯೇ ಬಹುದೂರದವರೆಗೆ ಚಲಿಸುವ ಪ್ರಯತ್ನ ಮಾಡುತ್ತಾರೆ. ಯುವಕರು ಮುಖ್ಯರಸ್ತೆಯಲ್ಲಿಯೇ ಇಂತಹ ಸಾಹಸಗಳನ್ನು ಮಾಡುತ್ತಿದ್ದ ದಾರಿಹೋಕರಿಗೆ ಕಿರಿಕಿರಿ ಆಗುತ್ತಿದೆ.

YouTube video player

ಕೈಯಲ್ಲಿ ಲಾಂಗ್‌ ಹಿಡಿದು ಬೆಂಗಳೂರು ಹೈವೇಯಲ್ಲಿ ಪುಂಡರ ವ್ಹೀಲಿಂಗ್‌: ಪೊಲೀಸರೇ ಇದಕ್ಕೆ ಬ್ರೇಕ್‌ ಯಾವಾಗ?

ಬೈಕ್‌ ಮುಖಾಮುಖಿ ಡಿಕ್ಕಿ: ಮೂವರಿಗೆ ಗಾಯ

ಮಳವಳ್ಳಿ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಗಾಯಗೊಂಡಿರುವ ಘಟನೆ ತಾಲೂಕಿನ ಗೌಡಗೆರೆ ಗೇಚ್‌ ಬಳಿ ನಡೆದಿದೆ. ತಾಲೂಕಿನ ಕಂದೇಗಾಲ ಗ್ರಾಮದ ಚನ್ನಿಗರಾಮು, ಲಕ್ಷ್ಮಿ ಹಾಗೂ ಗೌಡಗೆರೆ ಗ್ರಾಮದ ಪ್ರಭುಸ್ವಾಮಿ ಗಾಯಗೊಂಡವವರು. ಕಂದೇಗಾಲ ಗ್ರಾಮದಿಂದ ಚನ್ನಿಗರಾಮು ಹಾಗೂ ಲಕ್ಷ್ಮಿ ಕಬ್ಬಾಕಮ್ಮ ದೇವಸ್ಥಾನಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಗೌಡಗೆರೆ ಕಡೆಯಿಂದ ಬಂದ ಮತ್ತೊಂದು ಬೈಕ್‌ ಡಿಕ್ಕಿಯಾಗಿ ಘಟನೆ ನಡೆದಿದೆ. ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ… ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾತ್ರಿ ಪಾರ್ಟಿ ಮುಗಿಸಿ ಮಲಗಿದವನು ಬೆಳಗ್ಗೆ ಶವವಾಗಿ ಪತ್ತೆ

ಬೇಲೂರು: ಪಾರ್ಟಿ ಮುಗಿಸಿ ಕಾರಿನಲ್ಲಿ ಮಲಗಿದ್ದ ಯುವಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಮೃತಪಟಿದ್ದು, ಸ್ನೇಹಿತರೇ ಸೇರಿ ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಬೇಲೂರು ತಾಲೂಕಿನ ಕೊನೆರ್ಲು ಗ್ರಾಮದ ಚೇತನ್‌ (24) ಅನುಮಾನಾಸ್ಪದವಾಗಿ ಮೃತಪಟ್ಟಯುವಕ. ಪಟ್ಟಣದ ಮೊಬೈಲ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚೇತನ್‌ ಶನಿವಾರ ರಾತ್ರಿ ಮೊಬೈಲ್‌ ಅಂಗಡಿ ಎದುರು ಬೈಕ್‌ ನಿಲ್ಲಿಸಿ ಸ್ನೇಹಿತರಾದ ಗೌತಮ್‌, ದರ್ಶನ್‌, ಮಿಥುನ್‌ ಜೊತೆ ಪಾರ್ಟಿಗೆ ತೆರಳಿದ್ದಾನೆ. ರಾತ್ರಿ 12ರವರೆಗೆ ಗೌತಮ್‌ ರೂಂ ಪಕ್ಕದಲ್ಲಿ ಎಲ್ಲರೂ ಸೇರಿ ಪಾರ್ಟಿ ಮಾಡಿದ್ದಾರೆ. ನಂತರ ಎಲ್ಲರೂ ಮನೆಗೆ ತೆರಳಿದ್ದು, ಚೇತನ್‌ ಮಾತ್ರ ಸ್ನೇಹಿತರ ಕಾರಿನಲ್ಲೇ ಮಲಗಿದ್ದಾನೆ. ಬೆಳಗ್ಗೆ 10 ಗಂಟೆಗೆ ಗೌತಮ್‌ ಬಂದು ನೋಡಿದಾಗ ಹಿಂಬದಿ ಸೀಟ್‌ನಲ್ಲಿ ಚೇತನ್‌ ರಕ್ತ ವಾಂತಿ ಮಾಡಿಕೊಂಡು ಮಲಗಿದ್ದ.

ವ್ಹೀಲಿಂಗ್ ಪುಂಡರ ಹಾವಳಿಗೆ ಬ್ರೇಕ್ ಯಾವಾಗ?: ಜೀವ ಕೈಯಲ್ಲಿ ಹಿಡಿದು ಇತರ ವಾಹನ ಸವಾರರ ಪ್ರಯಾಣ

ಕೂಡಲೇ ಇತರರಿಗೆ ಕರೆ ಮಾಡಿ ಕರೆ ಮಾಡಿ ತಿಳಿಸಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ದರ್ಶನ್‌, ಮಿಥುನ್‌ ಫೋನ್‌ ಸ್ವಿಚ್‌ ಆಫ್‌ ಮಾಡಿದ್ದಾರೆ. ಚೇತನ್‌ ಪೋಷಕರು, ಆರೋಪಿಗಳನ್ನು ಬಂ​ಧಿಸುವಂತೆ ಆಗ್ರಹಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು.