Asianet Suvarna News Asianet Suvarna News

ಖಾಸಗಿ ಫೋಟೋ ಇದೆ ಎಂದು ಬ್ಲ್ಯಾಕ್‌ಮೇಲ್‌: ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್‌ ಯುವತಿಯರ ಸೆರೆ

ಬ್ಲಾಕ್‌ ಮೇಲ್‌ ಮಾಡಿ 15 ಲಕ್ಷ ರು.ಗೆ ಡಿಮ್ಯಾಂಡ್‌ ಮಾಡಿದ್ದರು. ಹಣ ಕೊಡದಿದ್ದರೆ ನಿಮ್ಮ ಮನೆಯವರಿಗೆ ಹೇಳುವುದಾಗಿ ಬೆದರಿಸಿ, 1.20 ಲಕ್ಷ ರು. ಪಡೆದಿದ್ದ ಯುವತಿಯರು  

Two Women Arrested For Blackmail Case in Davanagere grg
Author
Bengaluru, First Published Aug 16, 2022, 1:17 PM IST

ದಾವಣಗೆರೆ(ಆ.16):  ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವತಿಯೊಂದಿಗೆ ಹೋಂ ಸ್ಟೇನಲ್ಲಿ ಇದ್ದಾಗ ಸೆರೆ ಹಿಡಿದ ಖಾಸಗಿ ಫೋಟೋ ಇದೆಯೆಂದು ಯುವತಿಯರೊಂದಿಗೆ ಸೇರಿ, ರಕ್ಷಣಾ ವೇದಿಕೆ ಹೆಸರು ಹೇಳಿ 15 ಲಕ್ಷ ರು.ಗೆ ಬೇಡಿಕೆ ಇಟ್ಟು ಬೆದರಿಸಿ, ಹಣ ವಸೂಲು ಮಾಡುತ್ತಿದ್ದ ಇಬ್ಬರು ಯುವತಿಯರೂ ಸೇರಿದಂತೆ ನಾಲ್ವರನ್ನು ಬಂಧಿಸಿ, 6 ಮೊಬೈಲ್‌ ಫೋನ್‌ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಿದ್ಯಾನಗರ ಪೊಲೀಸರು ಜಪ್ತಿ ಮಾಡಿದ್ದಾರೆ.

ಹುಬ್ಬಳ್ಳಿಯ ಶಿವರಾಜ ಚಂದ್ರಪಟ್ಟಣ (29 ವರ್ಷ), ಹಾಸನದ ರಮ್ಯಾ ಅಲಿಯಾಸ್‌ ಭೂಮಿಕಾ ಅಲಿಯಾಸ್‌ ಸಹನಾ (26), ತುಮಕೂರು ಜಿಲ್ಲೆಯ ಪವಿತ್ರಾ (24) ಹಾಗೂ ಚಿಕ್ಕಮಗಳೂರಿನ ಸುರೇಶಕುಮಾರ ಬಂಧಿತರು ಎಂದು ಪೊಲೀಸರು ತಿಳಿ​ಸಿ​ದ್ದಾರೆ.

CCB ಪಾಲಿಗೆ ಕಗ್ಗಂಟಾದ ಶಂಕಿತ ಉಗ್ರ ಅಖ್ತರ್: ಟೆಕ್ನಿಕಲ್‌ ಎವಿಡೆನ್ಸ್ ಕಲೆಹಾಕಲು ಹರಸಾಹಸ

ಸೋಷಿಯಲ್‌ ಮೀಡಿಯಾದಲ್ಲಿ ತಮಗೆ ಪರಿಚಯವಾಗಿದ್ದ ಯುವತಿ ಜೊತೆಗೆ ಹೋಂ ಸ್ಟೇನಲ್ಲಿ ಇರುವಾಗ ನಾಲ್ವರು ವ್ಯಕ್ತಿಗಳು ಖಾಸಗಿ ಫೋಟೋ ಸೆರೆ ಹಿಡಿದಿರುವುದಾಗಿ ಹೇಳಿ, ಬ್ಲಾಕ್‌ ಮೇಲ್‌ ಮಾಡಿ 15 ಲಕ್ಷ ರು.ಗೆ ಡಿಮ್ಯಾಂಡ್‌ ಮಾಡಿದ್ದರು. ಹಣ ಕೊಡದಿದ್ದರೆ ನಿಮ್ಮ ಮನೆಯವರಿಗೆ ಹೇಳುವುದಾಗಿ ಬೆದರಿಸಿ, 1.20 ಲಕ್ಷ ರು.ಗಳನ್ನು ಪಡೆದಿದ್ದರು. ಉಳಿದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂಬುದಾಗಿ ಫಿರ್ಯಾದಿ ಇಲ್ಲಿನ ವಿದ್ಯಾನಗರ ಪೊಲೀಸ್‌ ಠಾಣೆಗೆ ದೂರು ನೀಡಿ​ದ್ದರು.

ದೂರುದಾರನ ಸಂಬಂಧಿಗಳಿಂದ ಚೀತಾ ಗಸ್ತಿನಲ್ಲಿದ್ದ ಪೊಲೀಸ್‌ ಸಿಬ್ಬಂದಿ ನಾಗರಾಜ​ಗೆ ಜೆನ್‌ ಕಾರ್‌ ಸಮೇತ ನಾಲ್ವರು ಆರೋಪಿ ಮಾಹಿ​ತಿ ದೊರೆತಿದೆ. ತಕ್ಷಣವೇ ಕಾರ್ಯೋನ್ಮುಖರಾದ ಪೊಲೀಸರು ಆರೋಪಿಗಳನ್ನು ಬಂಧಿ​ಸಿದ್ದಾರೆ.​ ಡಿವೈಎಸ್ಪಿ ನರಸಿಂಹ ವಿ.ತಾಮ್ರಧ್ವಜ, ಕೆಟಿಜೆ ನಗರ ಸಿಪಿಐ ಯು.ಜಿ.ಶಶಿಧರ್‌, ವಿದ್ಯಾ ನಗರ ಎಸ್‌ಐ ಕಾಂತರಾಜ, ಎಎಸ್‌ಐ ಎಸ್‌. ನಾಗರಾಜ, ನಾಗರಾಜ ಕೊಲೆರ, ಟಿ.ಮಂಜಪ್ಪ, ಬುಡೇನ್‌ ವಲಿ, ಗಿರಿಧರ್‌, ಬಸವರಾಜ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ತಂಡದ ಕಾರ್ಯಕ್ಕೆ ಎಸ್ಪಿ ಸಿ.ಬಿ.ರಿಷ್ಯಂತ್‌, ಎಎಸ್ಪಿ ಆರ್‌.ಬಿ.ಬಸರಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Follow Us:
Download App:
  • android
  • ios