* ಮದ್ಯದ ನಶೆಯಲ್ಲಿ ಕುಡುಕನ ಕಿತಾಪತಿ* ರೈಲ್ವೆ  ಹಳಿ ಮೇಲೆ ದ್ವಿಚಕ್ರ ವಾಹನ ಎಸೆದ*  17 ಕಿಮೀ ದೂರ ರೈಲಿನ ಅಡಿಯಲ್ಲಿ ಸಿಕ್ಕು ನುಜ್ಜುಗುಜ್ಜಾದ ಬೈಕ್* ಪುಣೆಯಿಂದ ಕುಡುಕನ ಅವಾಂತರದ ಘಟನೆ ವರದಿ

ಕೋರ್ಬಾ( ಜು. 21) ಮದ್ಯದ ಅಮಲಿನಲ್ಲಿ ಕೆಲವರು ಮಾಡುವ ಕೆಲಸ ದೊಡ್ಡ ಅವಘಡಕ್ಕೂ ಕಾರಣವಾಗಿರುವ ಹಲವು ಉದಾಹರಣೆಗಳಿವೆ. ಪುಣೆಯ ಈ ಕುಡುಕ ಸಹ ಅಂಥದ್ದೇ ಒಂದು ಕೆಲಸ ಮಾಡಿದ್ದ. ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.

Add Asianetnews Kannada as a Preferred SourcegooglePreferred

ಅನಾಥ ಶವಕ್ಕೆ ಗೌರವದ ವಿದಾಯ ಸಲ್ಲಿಸಿದ ರೈಲ್ವೆ ಪೊಲೀಸ್‌ಗೊಂದು ಸೆಲ್ಯೂಟ್

ಪುಣೆಯ ಪಟಾಸ್ ಖುತ್‌ಬಾವ್ ರೈಲ್ವೆ ನಿಲ್ದಾಣದಲ್ಲಿ 35 ವರ್ಷದ ವ್ಯಕ್ತಿ ಮದ್ಯದ ಅಮಲಿನಲ್ಲಿ ದ್ವಿಚಕ್ರ ವಾಹನವನ್ನು ರೈಲ್ವೆ ಹಳಿ ಮೇಲೆ ಎಸೆದಿದ್ದಾನೆ. ಈ ವಾಹನವು ಪುಣೆ ದಾನಪುರ ಎಕ್ಸ್‌ಪ್ರೆಸ್ ರೈಲಿನ ಎಂಜಿನ್‌ನ ಅಡಿಯಲ್ಲಿ ಸಿಕ್ಕು ಸುಮಾರು 17 ಕಿ.ಮೀ. ದೂರ ರೈಲಿನ ಅಡಿಯಲ್ಲಿ ಎಳೆದುಕೊಂಡು ಬಂದಿದೆ. ರೈಲ್ವೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದಾರೆ.

ರೈಲ್ವೆ ಹಳಿ ಸುತ್ತ ಎಚ್ಚರಿಕೆ ಫಲಕ ಅಳವಡಿಕೆ ಮಾಡಿರಲಾಗುತ್ತದೆ. ಆದರೆ ಮದ್ಯದ ನಶೆಯಲ್ಲಿದ್ದ ವ್ಯಕ್ತಿ ಮಾಡಿದ ಕೆಲಸ ದೊಡ್ಡ ಅವಘಡಕ್ಕೆ ಕಾರಣವಾಗಬಹುದಿತ್ತು.