Asianet Suvarna News

ಅತಿದೊಡ್ಡ ಬೇಟೆ, 126 ಕೋಟಿ ಮೊತ್ತದ ಹೆರಾಯಿನ್ ವಶ

* ದೆಹಲಿ ಅಧಿಕಾರಿಗಳ ಅತಿದೊಡ್ಡ ಕಾರ್ಯಾಚರಣೆ
* 126 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ
* ದಕ್ಷಿಣ ಆಫ್ರಿಕಾದಿಂದ ತಂದಿದ್ದರು

Two South African nationals arrested with Rs 126 cr heroin at Delhi airport mah
Author
Bengaluru, First Published Jun 29, 2021, 9:08 PM IST
  • Facebook
  • Twitter
  • Whatsapp

ನವದೆಹಲಿ ( ಜೂ. 29) ದಕ್ಷಿಣ ಆಫ್ರಿಕಾ ಮೂಲದ ಇಬ್ಬರನ್ನು ಬಂಧಿಸಿರುವ ಅಧಿಕಾರಿಗಳು 126 ಕೋಟಿ ರೂ.ಗಳ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ದೇಶದ ಒಳಕ್ಕೆ  ಇದನ್ನು ಕಳ್ಳಸಾಗಾಟ ಮಾಡಲು ಮುಂದಾಗಿದ್ದರು.

ಜೋಹಾನ್ಸ್‌ಬರ್ಗ್‌ನಿಂದ ದೋಹಾ ಮೂಲಕ  ಬಂದವರನ್ನು ಖಚಿತ ಮಾಹಿತಿ ಮೇರೆಗೆ ಸೆರೆ ಹಿಡಿಯಲಾಗಿದೆ. ಅಧಿಕಾರಿಗಳು ಬ್ಯಾಗ್ ಪರಿಶೀಲನೆ ಮಾಡಿದ್ದಾರೆ.  ಆಗ ಬಿಳಿ ಬಣ್ಣದ ಪೌಡರ್ ತುಂಬಿದ ಬ್ಯಾಗ್ ಪತ್ತೆಯಾಗಿದೆ. ಒಬ್ಬ ಪ್ಯಾಸೆಂಜರ್ ನಿಂದ  8 ಕೆಜಿ, ಇನ್ನೊಬ್ಬನಿಂದ  10 ಕೆಜಿ ಹೆರಾಯಿನ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಬಿಗ್ ಬಾಸ್ ನಟಿ

ಇಬ್ಬರು ಮೊದಲೆ ಮಾತನಾಡಿಕೊಂಡು ಬಂದಿದ್ದರು ಎಂಬುದು ತನಿಖೆಯಿಂದ  ಗೊತ್ತಾಗಿದೆ. ಹದಿನೆಂಟು ಕೆಜಿ ಹೆರಾಯಿನ್ ಗೆ  126 ಕೋಟಿ ರೂ. ಆಗುವುದು ಎನ್ನುವುದು ಲೆಕ್ಕಾಚಾರ.  ತಮ್ಮ ಚೆಕ್-ಇನ್ ಟ್ರಾಲಿ ಬ್ಯಾಗ್‌ ಒಳಕ್ಕೆ ಚಾಲಾಕಿ ತನದಿಂದ ತುಂಬಿದ್ದರು. ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಭದ್ರತೆಯನ್ನು ನಿಯೋಜನೆ ಮಾಡಲಾಗಿದ್ದು ಡ್ರಗ್ಸ್ ಜಾಲದ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. 

Follow Us:
Download App:
  • android
  • ios