ಬೆಂಗಳೂರು (ಜು. 05)  ತಾನು ಕೊರೋನಾ ಆಫಿಸರ್ ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ  54  ಸಾವಿರ ರೂ. ದರೋಡೆ ಮಾಡಿದ ರೌಡಿ ಶೀಟರ್ ಬಂಧನವಾಗಿದೆ. ಮುಂಬೈನ ಚೆಂಬುರ್ ಏರಿಯಾದದಲ್ಲಿ ದರೋಡೆ ಮಾಡಿದ್ದ ವ್ಯಕ್ತಿ ಬಂಧನವಾಗಿದೆ.

ಜೂನ್   30  ರಂದು ಅಬ್ದುಲ್ ಶೇಕ್ ಎನ್ನುವವರು ರೈಲ್ವೆ ನಿಲ್ದಾಣದ ಕಡೆ ತೆರಳುತ್ತಿದ್ದರು. ಈ ವೇಳೆ ಎದುರಾದ  ಸೋಹನ್ ವಾಗ್ಮೋರೆ ಎಂಬ ವ್ಯಕ್ತಿ ತಾನು ಕೋವಿಡ್ ಆಫಿಸರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಈಯನ ಜತೆಗೆ ಇನ್ನೊಬ್ಬ ಸಹ ಇದ್ದ.

ಬೆಂಗಳೂರಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದ ಕಳ್ಳನ ವಾಚಿಂಗ್ ಸ್ಟೋರಿ

ಇದಾದ ಮೇಲೆ ಇಬ್ಬರು ಸೇರಿ ಅಬ್ದುಲ್ ಅವರ ಬ್ಯಾಗ್ ಸರ್ಚ್ ಮಾಡಿದ್ದಾರೆ.  ಎಟಿಎಂ ಕಾರ್ಡ್ ಪಡೆದಕೊಂಡು ಪಿನ್ ಸಹ ತೆಗೆದುಕೊಂಡು ಎಟಿಎಂಗೆ ತೆರಳಿ ಹಣ ಡ್ರಾ ಮಾಡಿದ್ದಾರೆ. 

ಇದಾದ ಮೇಲೆ ಅಬ್ದುಲ್ ದೂರು ನೀಡಿದ ನಂತರ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಚುನ್ನಾಬಟ್ಟಿಯ ಮನೆಯಲ್ಲಿ ಬೆಚ್ಚಗೆ ಕುಳಿತಿದ್ದ ವಾಗ್ಮೋರೆಯನ್ನು ಬಂಧಿಸಲಾಗಿದೆ. ಆತನ ಸಹಚರ ತಪ್ಪಿಸಿಕೊಂಡಿದ್ದು ಪತ್ತೆ ಹಚ್ಚಲಾಗುತ್ತಿದೆ. ಕೊರೋನಾ ಹೆಸರಿನಲ್ಲಿ ನಡೆದ ಮೊದಲ ದರೋಡೆ ಎಂದು ಪೊಲೀಸರು ತಿಳಿಸಿದ್ದಾರೆ.