ಬೆಂಗಳೂರು(ಜೂ.16) ಕಾರ್ಯಾಚರಣೆ ನಡೆಸಿದ  ಮಹಾಲಕ್ಷ್ಮೀ ಲೇಔಟ್ ಪೊಲೀಸರು  ಕುಖ್ಯಾತ ಮನೆಗಳ್ಳನನ್ನು ಬಂಧಿಸಿದ್ದಾರೆ.  ಆಂಧ್ರ ಪ್ರದೇಶ ಮೂಲದ ವೆಂಕಯ್ಯ,ಬಂಧಿತ ಆರೋಪಿ.

30 ಅಧಿಕ ಮನೆ ಕಳ್ಳತನ ಮಾಡಿದ್ದ. ಖಾಲಿ ಮನೆ ವಾಚ್ ಮಾಡಿ ಕಳ್ಳತನ ಮಾಡುತ್ತಿದ್ದವ ಪೊಲೀಸರ ಬಲೆಗೆ ಬಿದ್ದಿದ್ದಾನೆ.  ಪೀಣ್ಯ ಹಾಗೂ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ.

ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಂದೇ ಬಿಟ್ಟ

ಕಳೆದ ಎರಡು ತಿಂಗಳಿಂದ ವಾಚ್ ಮಾಡಿದ ಪರಿಣಾಮ ಸಿಕ್ಕಿಬಿದ್ದಿದ್ದಾನೆ.  ಆಂದ್ರದಿಂದ ಬಂದು ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗುತ್ತಿದ್ದ ಖದೀಮನಿಗೆ ಈಗ ಪೊಲೀಸರು ಆತಿಥ್ಯ ನೀಡುತ್ತಿದ್ದಾರೆ. 

ಲಾಕ್ ಡೌನ್ ಕಾರಣಕ್ಕೆ ಅನೇಕರು ಬೆಂಗಳೂರಿನ ಬಾಡಿಗೆ ಮನೆ ತೊರೆದು ಊರಿಗೆ ತೆರಳಿದ್ದರು. ಸರಣಿ ಕಳ್ಳತನ ಪ್ರಕರಣಗಳು ವರದಿಯಾಗಿದ್ದವು. ಆಭರಣದ ಅಂಗಡಿಗೂ ಕನ್ನ ಹಾಕಲಾಗಿದ್ದು.  ಮದ್ಯ ಮಾರಾಟ ಬಂದ್ ಆಗಿದ್ದ ಕಾರಣಕ್ಕೆ ಮೊದಲು ವೈನ್ ಶಾಪ್ ಗಳ ದರೋಡೆ ಮಾಡಿ ಎಣ್ಣೆ ಹೊತ್ತೊಯ್ದಿದ್ದು ದೊಡ್ಡ ಸುದ್ದಿಯಾಗಿತ್ತು.