Kolar: ವಿದ್ಯುತ್ ತಂತಿ ತಗುಲಿ ಅಣ್ಣ ತಮ್ಮಂದಿರ ಸಾವು
ವಿದ್ಯುತ್ ಸ್ಪರ್ಶದಿಂದ ಒಂದೇ ಕುಟುಂಬದ ಅಣ್ಣತಮ್ಮಂದಿರು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಅಂಡ್ರಸನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೋಲಾರ (ನ.03): ವಿದ್ಯುತ್ ಸ್ಪರ್ಶದಿಂದ ಒಂದೇ ಕುಟುಂಬದ ಅಣ್ಣತಮ್ಮಂದಿರು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಅಂಡ್ರಸನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮಿಸಾಗರ ಗ್ರಾಮದ ರೈತ ಬಾಲರೆಡ್ಡಿ ಮಕ್ಕಳಾದ ರಮೇಶ್ (30), ಮುರಳಿ (28) ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ದುರ್ದೈವಿಗಳು.
ಲಕ್ಷ್ಮಿಸಾಗರ ಗ್ರಾಮದ ಬಾಲರೆಡ್ಡಿ ಕಾಡು ಹಂದಿಗಳಿಂದ ಬೆಳೆ ರಕ್ಷಿಸುವ ಸಲುವಾಗಿ ಸೋಲರ್ ತಂತಿ ಬೇಲಿ ಅಳವಡಿಸಿದ್ದರು ಬಾಲರೆಡ್ಡಿ ಜಮೀನಿನ ಪಕ್ಕದಲ್ಲೇ ಟ್ರಾನ್ಸ್ ಫಾರ್ಮಾರ್‌ನಿಂದ ಕೊಳವೆ ಬಾವಿಗೆ ವಿದ್ಯುತ್ ಸಂರ್ಪಕ ಪಡೆದಿದ್ದರು, ಟ್ರಾನ್ಸ್‌ಫಾರ್ಮಾರ್‌ಗೆ ಅಳವಡಿಸಿದ್ದ ವಿದ್ಯುತ್ ತಂತಿ ತುಂಡಾಗಿ ಸೋಲಾರ್ ತಂತಿ ಬೇಲಿಯ ಮೆಲೆ ಬಿದ್ದಿರುವುದು ತಿಳಿಯದೆ ಕೊಳವೆ ಬಾವಿ ಕಡೆ ಅಣ್ಣ ತಮ್ಮಂದಿರು ಇಬ್ಬರು ಹೋಗಿದ್ದಾರೆ.
Tumakuru ಅವಳಿ ಶಿಶು ಧಾರುಣ ಸಾವು ಪ್ರಕರಣ: ಸಚಿವರ ರಾಜೀನಾಮೆಗೆ ಎಚ್‌ಡಿಕೆ ಆಗ್ರಹ
ಸೋಲಾರ್ ತಂತಿಯ ಮೇಲೆ ಟ್ರಾನ್ಸ್‌ಫಾರ್ಮರ್‌ನಿಂದ ತುಂಡಾಗಿದ್ದ ವಿದ್ಯುತ್ ತಂತಿ ಬಿದ್ದ ಹಿನ್ನಲೆಯಲ್ಲಿ ಸೋಲಾರ್ ತಂತಿಯಲ್ಲಿ ವಿದ್ಯುತ್ ಹರಿದು ಇಬ್ಬರು ಮೇಲೆ ಸ್ಪರ್ಶವಾಗಿದೆ. ತಕ್ಷಣ ಅಣ್ಣನನ್ನು ರಕ್ಷಿಸಲು ತೆರಳಿದ ತಮ್ಮನಿಗೂ ವಿದ್ಯುತ್ ಸ್ಪರ್ಶ್ವವಾಗಿ ಸ್ಥಳದಲ್ಲೇ ಇಬ್ಬರು ರೈತನ ಮಕ್ಕಳು ಮೃತಪಟ್ಟಿದ್ದಾರೆ. ಆಂಡ್ರಸನ್‌ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಧಾಮಿಸಿದ್ದರು ಘಟನೆ ಹಬ್ಬುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ಸಾರ್ವಜನಿಕರು ಆಗಮಿಸಿದರು ಮೃತ ಸಹೋದರರ ಕುಟುಂಬದ ಅಂಕ್ರದನ ಮುಗಿಲು ಮುಟ್ಟಿತ್ತು.
ವಿದ್ಯುತ್ ಸ್ಪರ್ಶ ರೈತ ಸಾವು: ತಾನು ಸಾಕಿದ್ದ ಆಡುಗಳಿಗೆ ಜೋಳದ ಕಡ್ಡಿ ಕುಯ್ದು ತರೋಕೆ ಅಂತ ತೋಟದ ಬಳಿ ಹೋದಾಗ ವಿದ್ಯುತ್ ತಂತಿ ತುಳಿದು ಮೃತಪಟ್ಟಿರುವ ಘಟನೆ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತೋಟನಹಳ್ಳಿ ಗ್ರಾಮದ ರೈತ ಸಿದ್ದಪ್ಪ (70) ಮೃತಪಟ್ಟದುರ್ದೈವಿ. ರೈತ ಸಿದ್ದಪ್ಪ ನ.1ರಂದು ಸಂಜೆ ಮೇಕೆಗಳಿಗೆ ಜೋಳದ ಕಡ್ಡಿ ತರಲು ಹೋದಾಗ ತೋಟದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ವಿದ್ಯುತ್ ಸ್ಪರ್ಶಸಿ ನೆಲಕ್ಕೆ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣವೇ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ಯವ ವೇಳೆ ರೈತ ಸಿದ್ದಪ್ಪನವರ ಪ್ರಾಣಪಕ್ಷಿ ಹಾರಿ ಹೋಗಿದೆ.
ಶವವಿಟ್ಟು ಪ್ರತಿಭಟನೆ : ಈ ಹಿಂದೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು ಸರಿಪಡಿಸುವಂತೆ ಸಾಕಷ್ಟುಬಾರಿ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಹಳೆಯ ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಾಯಿಸುವ ವೇಳೆ ಮತ್ತು ಲೈನ್‌ಗಳನ್ನು ಬದಲಾಯಿಸುವ ವೇಳೆ ಬೆಸ್ಕಾಂ ಅಧಿಕಾರಿಗಳು ಮಾಡುವ ಯಡವಟ್ಟಿನಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೆಲಮಂಗಲದ ಬೆಸ್ಕಾಂ ಕಚೇರಿ ಮುಂದೆ ಶವವಿಟ್ಟು ಪ್ರತಿಭಟಿಸಿದರು.
ಅಪ್ರಾಪ್ತ ಬಾಲಕಿಯ ರೇಪ್ & ಮರ್ಡರ್: ಬೆಚ್ಚಿಬಿದ್ದ ಕಲಬುರಗಿ
ತಕ್ಷಣವೇ ನೆಲಮಂಗಲ ನಗರ ಠಾಣೆ ಪೊಲೀಸರು ಪ್ರತಿಭಟನಾ ಸ್ಥಳಕ್ಕಾಗಮಿಸಿ ಪ್ರತಿಭಟನಾನಿರತರ ಮನವೊಲಿಸಲು ಪ್ರಯತ್ನಿಸಿದರು ವಿಫಲರಾದರು. ಬಳಿಕ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ನಂತರ ಸ್ಥಳಕ್ಕೆ ಎಇಇ ರಮೇಶ್ ಆಗಮಿಸಿ ಕರ್ತವ್ಯಲೋಪ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಮೃತನ ಕುಟುಂಬದವರಿಗೆ ಪರಿಹಾರ ನೀಡಲಾಗುವುದು ಎಂದು ಮನವಿ ಮಾಡಿಕೊಂಡ ನಂತರ ಪ್ರತಿಭಟನೆ ಹಿಂಪಡೆದು ಅಂತ್ಯಸಂಸ್ಕಾರಕ್ಕೆ ತೆರಳಿದರು.