ಬೆಂಗಳೂರು(ಮೇ. 06)  ಉದ್ಯಮಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಲೋನ್ ಕೊಡಿಸುವುದಾಗಿ ವಂಚನೆ ಮಾಡುತ್ತಿದ್ದ  ಇಬ್ಬರನ್ನು ಬಂಧಿಸಲಾಗಿದೆ. ತಮಿಳುನಾಡಿನ ತಿರುನಲ್ ವೇಲಿ ಮೂಲದ ಹರಿ ನಾಡರ್ ಅಲಿಯಾಸ್ ಹರಿ ಗೋಪಲಕೃಷ್ಣ  ಮತ್ತು ರಂಜಿತ್ ಪಣಿಕ್ಕರ್ ಬಂಧಿತರು. 

ಬೆಂಗಳೂರಿನಾ ವೆಂಕಟರಮಣಿ ಶಾಸ್ತ್ರಿ ಎಂಬುವರಿಗೆ 360 ಕೋಟಿ ಸಾಲವನ್ನು ಕೊಡಿಸುವುದಾಗಿ ವಂಚನೆ ಮಾಡಿದ ಆರೋಪವಿದೆ. ಕೇರಳದ ಹೋಟೇಲ್ ಮಿಟಿಂಗ್ ಮಾಡಿ 360 ಕೋಟಿ ನಕಲಿ ಡಿಡಿ ತೋರಿಸಿ ವಂಚನೆ ಮಾಡಿದ್ದಾನೆ. ಲೋನ್ ಗೆ ಸರ್ವಿಸ್ ಚಾರ್ಜ್ 7 .20 ಕೋಟಿ ಹಣ ಪಡೆದಿದ್ದ ಆರೋಪಿ ವೆಂಕಟರಮಣಿ ಶಾಸ್ತ್ರಿ ಕಂಪನಿಯ ಅಕೌಂಟ್ ನಿಂದ ಹಣ  ವರ್ಗಾಯಿಸಿಕೊಂಡಿದ್ದ.

ಮ್ಯಾಟ್ರಿಮೋನಿಯಲ್ಲಿ ಈ ರೀತಿಯೂ ವಂಚನೆ ಮಾಡ್ತಾರೆ ಹುಷಾರ್

ವಿಧಾನಸೌಧ ಪೊಲೀಸ್ ಠಾಣೆಗೆ ಉದ್ಯಮಿ ವೆಂಕಟರಮಣಿ ಶಾಸ್ತ್ರಿ  ದೂರು ನೀಡಿದ್ದರು. ಈ ಪ್ರಕರಣ ಸಿಸಿಬ ಗೆ ವರ್ಗಾವಣೆ ಮಾಡಿದ ಕಮಿಷಿನರ್ ಆದೇಶ ನೀಡಿದ್ದರು. ಕೇರಳ ಕೋವಲಂ ನಲ್ಲಿ ಆರೋಪಿ ಹರಿ ನಾಡರ್ ಬಂಧಿಸಿ ಕರೆತರಲಾಗಿದೆ.

ಆರೋಪಿಯಿಂದ 2 ಕೋಟಿ ಮೌಲ್ಯದ 3,893 ಗ್ರಾಂ ಚಿನ್ನಭಾರಣ , 8,76,916 ಲಕ್ಷ ನಗದು , ಇನೋವಾ ಕ್ರಿಸ್ಟಾ ಕಾರ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಮತ್ತೋಬ್ಬ ಆರೋಪಿ ರಂಜಿತ್ ಪಣಿಕ್ಕರ್ 10 ಲಕ್ಷ ಮೌಲ್ಯದ 140 ಗ್ರಾ ಚಿನ್ನಭಾರಣ ,ವಜ್ರದ ಉಂಗುರ ವಶಕ್ಕೆ  ಪಡೆದುಕೊಳ್ಳಲಾಗಿದೆ. ಆರೋಪಿಗಳು ಕರ್ನಾಟಕ, ಆಂಧ್ರಪ್ರದೇಶದ, ತೆಲಗಾಂಣ ,ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಉದ್ಯಮಿಗಳ ನ್ನು ಟಾರ್ಗೆಟ್ ಮಾಡುತ್ತಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.