ಬೆಂಗಳೂರು(ಡಿ.03):  ಡಾರ್ಕ್ ನೆಟ್‌ ಮೂಲಕ ಡ್ರಗ್ಸ್‌ ದಂಧೆ ನಡೆಸುತ್ತಿದ್ದ ಮತ್ತಿಬ್ಬರು ಪೆಡ್ಲರ್‌ಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

ಬನಶಂಕರಿಯ ರಾಹುಲ್‌ ಹಾಗೂ ದರ್ಶನ್‌ ಬಂಧಿತರು. ಆರೋಪಿಗಳಿಂದ 50 ಲಕ್ಷ ಮೌಲ್ಯದ 1,000 ಎಲ್‌ಎಸ್‌ಡಿ ಪೇಪರ್‌ ಸ್ಟ್ರಿಫ್ಸ್‌ ಗಳು, ಎರಡು ಮೊಬೈಲ್‌ಗಳು ಹಾಗೂ 16,000 ವಶಪಡಿಸಿಕೊಳ್ಳಲಾಗಿದೆ. ಡಾರ್ಕ್ ನೆಟ್‌ ಬಳಸಿ ವಿದೇಶಗಳಿಂದ ಡ್ರಗ್ಸ್‌ಗಳನ್ನು ತಂದು ನಗರದಲ್ಲಿ ರಾಹುಲ್‌ ಹಾಗೂ ಆತನ ಸಹಚರ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಟ್ರಾವೆಲ್ಸ್‌ ಏಜೆನ್ಸಿ ಸೋಗಲ್ಲಿ ಡ್ರಗ್ಸ್‌ ಮಾಫಿಯಾ: 32 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ

ರಾಹುಲ್‌ ವೃತ್ತಿಪರ ಪೆಡ್ಲರ್‌ ಆಗಿದ್ದು, ಆತನ ಮೇಲೆ ಚನ್ನಮ್ಮನಕೆರೆ ಅಚ್ಚುಕಟ್ಟು ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಸಿಸಿಬಿ ಪೊಲೀಸರೇ ಆತನನ್ನು ಸೆರೆ ಹಿಡಿದು ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಹೊರ ಬಂದು ಮತ್ತೆ ತನ್ನ ದಂಧೆಯಲ್ಲಿ ಆತ ನಿರತರಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.