ಈ ಎಲ್ಲ ಮೂವರು ಹದಿಹರೆಯದವರು ಒಂದೇ ಶಾಲೆಯಲ್ಲಿ ಓದುತ್ತಿದ್ದರು ಮತ್ತು ಒಬ್ಬರಿಗೊಬ್ಬರಿಗೆ ಪರಿಚಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಆರೋಪಿ ಹುಡುಗರು ಆಗಾಗ್ಗೆ ಬಾಂದ್ರಾ (ಪೂರ್ವ) ದಲ್ಲಿರುವ ಸಂತ್ರಸ್ತೆ ನಿವಾಸಕ್ಕೆ ಭೇಟಿ ನೀಡುತ್ತಿದ್ದರು ಎಂದೂ ವರದಿಯಾಗಿದೆ.

ಮುಂಬೈ (ಜುಲೈ 16, 2023): 14 ವರ್ಷದ ಬಾಲಕಿಯ ಮೇಲೆ ಆಕೆಯ ಮನೆಯಲ್ಲಿ ಅನೇಕ ಬಾರಿ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಧರಿಸುವಂತೆ ಮಾಡಿದ ಆರೋಪದ ಮೇಲೆ 17 ವರ್ಷದ ಇಬ್ಬರು ಅಪ್ರಾಪ್ತ ಬಾಲಕರನ್ನು ಖೇರ್ವಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರೂ ಆರೋಪಿಗಳು ಅಪ್ರಾಪ್ತರಾದ ಕಾರಣ ಇವರನ್ನು ಮಕ್ಕಳ ಕರೆಕ್ಷನ್‌ ಹೋಮ್‌ಗೆ ಸೇರಿಸಲಾಗಿದೆ.

ಈ ಎಲ್ಲ ಮೂವರು ಹದಿಹರೆಯದವರು ಒಂದೇ ಶಾಲೆಯಲ್ಲಿ ಓದುತ್ತಿದ್ದರು ಮತ್ತು ಒಬ್ಬರಿಗೊಬ್ಬರಿಗೆ ಪರಿಚಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಆರೋಪಿ ಹುಡುಗರು ಆಗಾಗ್ಗೆ ಬಾಂದ್ರಾ (ಪೂರ್ವ) ದಲ್ಲಿರುವ ಸಂತ್ರಸ್ತೆ ನಿವಾಸಕ್ಕೆ ಭೇಟಿ ನೀಡುತ್ತಿದ್ದರು ಎಂದೂ ವರದಿಯಾಗಿದೆ.

ಇದನ್ನು ಓದಿ: ಬಿಜೆಪಿ ಮುಖಂಡನ ಪುತ್ರ ಸೇರಿ ನಾಲ್ವರಿಂದ ಗ್ಯಾಂಗ್‌ ರೇಪ್‌, ಅಪ್ರಾಪ್ತೆ ಸಹೋದರಿ ಮೇಲೂ ಲೈಂಗಿಕ ದೌರ್ಜನ್ಯ!

ಇತ್ತೀಚೆಗೆ, ಬಾಲಕಿ ವೈದ್ಯಕೀಯ ತೊಂದರೆಗಳ ಬಗ್ಗೆ ದೂರು ನೀಡಿದಾಗ, ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆ ಗರ್ಭಿಣಿ ಎಂದು ಪೋಷಕರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ, ಖೇರ್ವಾಡಿ ಪೊಲೀಸರು ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಅದರ ಆಧಾರದ ಮೇಲೆ ಬುಧವಾರ ಎಫ್‌ಐಆರ್ ದಾಖಲಿಸಲಾಗಿದೆ. ಈ ವರ್ಷದ ಫೆಬ್ರವರಿ 1 ಮತ್ತು ಮಾರ್ಚ್ 31 ರ ನಡುವೆ, ಇಬ್ಬರು ಹುಡುಗರು ತನ್ನ ಕುಟುಂಬ ಸದಸ್ಯರು ಮನೆಯಲ್ಲಿದ್ದಾಗಲೂ ಅನೇಕ ಸಂದರ್ಭಗಳಲ್ಲಿ ತನ್ನ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಾಲಕಿಯ ತಾಯಿಯ ದೂರಿನ ಮೇರೆಗೆ ಪೊಲೀಸರು ಇಬ್ಬರು ಅಪ್ರಾಪ್ತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(1), 376(2)(n), ಮತ್ತು 376 (3) ಮತ್ತು 4, 6, 8, ಮತ್ತು 12 ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯಿದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. 

ಇದನ್ನೂ ಓದಿ: 10 ಸೆಕೆಂಡ್‌ಗೂ ಕಡಿಮೆ ಸಮಯ ವಿದ್ಯಾರ್ಥಿನಿಯ ಖಾಸಗಿ ಅಂಗ ಮುಟ್ಟಿದ್ದು ದೌರ್ಜನ್ಯವಲ್ಲ: ಇಟಲಿ ಕೋರ್ಟ್‌ ತೀರ್ಪು

ಖೇರ್ವಾಡಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ರಾಜೇಂದ್ರ ಮುಲಿಕ್ ಈ ಘಟನೆಯನ್ನು ಖಚಿತಪಡಿಸಿದ್ದಾರೆ. ಆರೋಪಿಗಳಿಬ್ಬರನ್ನೂ ಬಂಧಿಸಿ ಮಕ್ಕಳ ಕರೆಕ್ಷನ್‌ ಹೋಮ್‌ಗಳಿಗೆ ಕಳುಹಿಸಲಾಗಿದೆ ಎಂದರು. ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಮತ್ತು ಕುಟುಂಬವು ದೂರವಿರುವಾಗ ಅವರ ಚಟುವಟಿಕೆಗಳ ಬಗ್ಗೆ ಎಚ್ಚರವಾಗಿರಬೇಕು, ವಿಶೇಷವಾಗಿ ಅವರು ಚಿಕ್ಕವರಾಗಿರುವಾಗ ಎಂದೂ ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ. 

ಮಧ್ಯ ಪ್ರದೇಶದಲ್ಲಿ ಗ್ಯಾಂಗ್‌ರೇಪ್‌
ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಅಪ್ರಾಪ್ತ ಸಹೋದರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ವರದಿಯಾಗಿದೆ. ಅಲ್ಲದೆ, ಈ ಗ್ಯಾಂಗ್‌ರೇಪ್‌ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಮಧ್ಯಪ್ರದೇಶ ಬಿಜೆಪಿ ನಾಯಕನ ಪುತ್ರನೂ ಸೇರಿದ್ದಾನೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಬಾಯ್‌ಫ್ರೆಂಡ್‌ ಜತೆಗಿದ್ದ ಯುವತಿಯ ವಿಡಿಯೋ ರೆಕಾರ್ಡ್‌: ಪೊಲೀಸ್‌ ಎಂದು ಬ್ಲ್ಯಾಕ್‌ಮೇಲ್‌ ಮಾಡಿ, ರೇಪ್‌ ಮಾಡಿದ ಪಾಪಿ!

ಈ ಹಿನ್ನೆಲೆ ಸಂತ್ರಸ್ತರ ಸಂಬಂಧಿಕರು ಮತ್ತು ಸ್ಥಳೀಯರು ಆರೋಪಿಗಳ ವಿರುದ್ಧ ಕ್ರಮಕ್ಕಾಗಿ ಒತ್ತಾಯಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು, ನಂತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು, ಅತ್ಯಾಚಾರ ನಡೆದ ಪ್ರದೇಶವು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ತವರು ಕ್ಷೇತ್ರವಾದ್ದು, ಅವರು ದಾತಿಯಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.

ಇದನ್ನೂ ಓದಿ: ಮುಂಬೈನಲ್ಲಿ ಆಟೋದಲ್ಲೇ ಮಹಿಳೆಗೆ ರೇಪ್‌, ಬೆದರಿಕೆ: ಪಾಪಿ ಆಟೋರಿಕ್ಷಾ ಚಾಲಕ ಅಂದರ್‌