ಮುಂಬೈನಲ್ಲಿ ಆಟೋದಲ್ಲೇ ಮಹಿಳೆಗೆ ರೇಪ್‌, ಬೆದರಿಕೆ: ಪಾಪಿ ಆಟೋರಿಕ್ಷಾ ಚಾಲಕ ಅಂದರ್‌

ಮಹಿಳೆಯು ಆರೋಪಿಯ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾನೆ. ಹಾಗೂ, ಈ ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

24 year old rickshaw driver arrested in up for raping threatening woman in goregaon s aarey colony ash

ಮುಂಬೈ (ಜುಲೈ 11, 2023): ಮಹಾರಾಷ್ಟ್ರದ ಮುಂಬೈನ ಗೋರೆಗಾಂವ್‌ನ ಆರೆ ಕಾಲೋನಿಯಲ್ಲಿ ಮಹಿಳೆಗೆ ಅತ್ಯಾಚಾರ, ಬೆದರಿಕೆ ಹಾಕಿದ್ದಕ್ಕಾಗಿ ಉತ್ತರಪ್ರದೇಶದಲ್ಲಿ 24 ವರ್ಷದ ರಿಕ್ಷಾ ಚಾಲಕನನ್ನು ಬಂಧಿಸಲಾಗಿದೆ. ಆರೋಪಿಯನ್ನು ಇಂದ್ರಜಿತ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ಐಪಿಸಿ ಕಾಯ್ದೆಯ ಸೆಕ್ಷನ್ 376 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಹಿಳೆಯು ಆರೋಪಿಯ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾನೆ. ಹಾಗೂ, ಈ ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಇದನ್ನು ಓದಿ: ಮಹಿಳೆಯೊಂದಿಗೆ ಕ್ರೈಸ್ತ ಪಾದ್ರಿ ನೃತ್ಯ: ವಿಡಿಯೋ ಪೋಸ್ಟ್‌ ಮಾಡಿದ ಕಾಲಿವುಡ್ ನಟ ಅರೆಸ್ಟ್‌; ನೆಟ್ಟಿಗರ ವಿರೋಧ

ಸಂತ್ರಸ್ತೆಯ ಕುಟುಂಬದಿಂದ ಪ್ರಕರಣ ದಾಖಲು
ಕೆಲವು ದಿನಗಳ ನಂತರ, ಮಹಿಳೆ ರಕ್ತಸ್ರಾವವನ್ನು ಅನುಭವಿಸಲು ಪ್ರಾರಂಭಿಸಿದ ಕಾರಣ ಆಕೆಯ ಕುಟುಂಬವು ಅವಳನ್ನು ಆಸ್ಪತ್ರೆಗೆ ಕರೆದೊಯ್ಯಿತು. ಪರೀಕ್ಷೆಯ ಸಮಯದಲ್ಲಿ, ಗಾಯದ ಕೆಲವು ಗುರುತುಗಳು ಕಂಡುಬಂದಿರುವುದನ್ನು ವೈದ್ಯರು ಕಂಡುಕೊಂಡ ನಂತರ ಘಟನೆಯ ವಿವರಗಳನ್ನು ತನ್ನ ಕುಟುಂಬ ಮತ್ತು ವೈದ್ಯರಿಗೆ ಮಹಿಳೆ ಬಹಿರಂಗಪಡಿಸಿದ್ದಾಳೆ ಎಂದು ತಿಳಿದುಬಂದಿದೆ. ನಂತರ ಆಕೆಯ ಕುಟುಂಬದವರು ಗೋರೆಗಾಂವ್‌ನ ಆರೆ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇನ್ನು, ‘’ಅತ್ಯಾಚಾರ ನಡೆದ ನಂತರ ಮಹಿಳೆ ಮಾನಸಿಕ ಆಘಾತ ಮತ್ತು ಖಿನ್ನತೆಯ ಅಡಿಯಲ್ಲಿ ವಾಸಿಸುತ್ತಿದ್ದಳು. ಆಕೆಯ ಮನೆಯವರು ಮತ್ತು ಸಂಬಂಧಿಕರು ಯಾವುದೇ ಸಮಸ್ಯೆಗಳ ಬಗ್ಗೆ ಕೇಳಿದಾಗ, ಆಟೋ ಚಾಲಕ ತನಗೆ ಕಿರುಕುಳ ನೀಡಿದ್ದಾನೆ ಎಂದು ಆರಂಭದಲ್ಲಿ ತಿಳಿಸಿದ್ದಾಳೆ. ಪೊಲೀಸ್ ಠಾಣೆಯಲ್ಲಿ, ಮಹಿಳಾ ಅಧಿಕಾರಿಯೊಬ್ಬರು ಆಕೆಗೆ ಕೌನ್ಸೆಲಿಂಗ್ ಮಾಡಿದಾಗ, ತನ್ನ ಮೇಲೆ ಹೇಗೆ ಅತ್ಯಾಚಾರವೆಸಗಿದೆ ಎಂದು ವಿವರಿಸಿದ್ದಾಳೆ’’ ಎಂದೂ ಮತ್ತೊಬ್ಬ ಅಧಿಕಾರಿ ಘಟನೆಯ ಬಗ್ಗೆ ವಿವರಿಸಿದ್ದಾರೆ.

ಇದನ್ನೂ ಓದಿ: ಅಮಿತ್ ಶಾ ಸಚಿವಾಲಯದ ಅಧಿಕಾರಿ ಎಂದು ಪ್ರಮುಖ ಸರ್ಕಾರಿ ಹುದ್ದೆಗೆ ಸೇರಲು ಯತ್ನಿಸಿದ ನಿರುದ್ಯೋಗಿ!

ಘಟನೆಯ ವಿವರ
ಸಂತ್ರಸ್ತೆ ಸಿಬಿಡಿ ಬೇಲಾಪುರದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಹೋಗಿದ್ದಳು ಮತ್ತು ಬೇಲಾಪುರದಿಂದ ಗೋರೆಗಾಂವ್‌ಗೆ ಹಿಂತಿರುಗಲು ರಿಕ್ಷಾವನ್ನು ಬುಕ್ ಮಾಡಿದ್ದಳು. ರಿಕ್ಷಾ ಆರೆ ಕಾಲೋನಿ ತಲುಪಿದಾಗ ರಿಕ್ಷಾ ಚಾಲಕ ರಿಕ್ಷಾವನ್ನು ನಿರ್ಜನ ಸ್ಥಳಕ್ಕೆ ಕೊಂಡೊಯ್ದ. ಅಲ್ಲಿ ಆತ ದೈಹಿಕವಾಗಿ ಹಲ್ಲೆ ನಡೆಸಿ, ಅತ್ಯಾಚಾರವೆಸಗಿದ್ದಾನೆ ಮತ್ತು ಘಟನೆಯನ್ನು ಬಹಿರಂಗಪಡಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ, ಅಪರಾಧದ ನಂತರ ಆರೋಪಿ ಉತ್ತರ ಪ್ರದೇಶಕ್ಕೆ ಪರಾರಿಯಾಗಿದ್ದ ಎಂದೂ ವರದಿಯಾಗಿದೆ.

ಈ ಮಧ್ಯೆ, ಪೊಲೀಸರು ರಿಕ್ಷಾ ಮಾಲೀಕನ ಮಾಹಿತಿ ಪಡೆದು ವಿಚಾರಣೆ ನಡೆಸಿದ್ದಾರೆ. ಘಟನೆಯ ಮರುದಿನ ಬೇರೆ ಚಾಲಕ ಆ ರಿಕ್ಷಾವನ್ನು ಓಡಿಸಿದ್ದಾನೆ ಎಂದು ತಿಳಿದುಬಂದಿದ್ದು, ಬಳಿಕ ಆತನನ್ನು ವಿಚಾರಿಸಿದಾಗ ಅತ್ಯಾಚಾರ ಮಾಡಿದ ಆರೋಪಿ ಉತ್ತರ ಪ್ರದೇಶದವನು ಎಂದು ತಿಳಿದುಬಂದಿದೆ. ನಂತರ, ಗೋರೆಗಾಂವ್‌ನ ಆರೆ ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿ ಜುಲೈ 9 ರಂದು ಆತನನ್ನು ಬಂಧಿಸಿದ್ದಾರೆ. ಇನ್ನು, ಈ ಘಟನೆ ಮೇ ತಿಂಗಳಿನಲ್ಲಿ ನಡೆದಿದ್ದರೂ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದ್ದು, ಆದರೂ ಪೊಲೀಸರು ಆರೋಪಿಯನ್ನು ಉತ್ತರ ಪ್ರದೇಶ ರಾಜ್ಯಕ್ಕೆ ಹೋಗಿ ಕೆಲ ದಿನಗಳಲ್ಲೇ ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅತ್ಯಾಚಾರ, ಹಲ್ಲೆ ಮತ್ತು ಬೆದರಿಕೆ ಆರೋಪ ಹೊರಿಸಲಾಗಿದೆ. ಹಾಗೂ, ಆತನನ್ನು ಸೋಮವಾರ ಕೋರ್ಟ್‌ ಎದುರು ಹಾಜರುಪಡಿಸಲಾಗಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಮುದ್ದು ಕಂದಮ್ಮನ ಮೇಲೆ ಕಾರು ಹತ್ತಿಸಿ ಮಗಳ ಸಾವಿಗೆ ಕಾರಣವಾದ ತಾಯಿ: ಜರ್ಝರಿತವಾದ ಕುಟುಂಬ

Latest Videos
Follow Us:
Download App:
  • android
  • ios