*  11.45 ಲಕ್ಷ ಮೌಲ್ಯದ 20 ದ್ವಿಚಕ್ರ ವಾಹನ ಜಪ್ತಿ *  ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿದ ಪೊಲೀಸರು*  ಸುಲಭವಾಗಿ ಹಣ ಸಂಪಾದನೆಗೆ ಕಳ್ಳತನಕ್ಕಿಳಿದಿದ್ದ ಆರೋಪಿಗಳು  

ಬೆಂಗಳೂರು(ಫೆ.09):  ಮನೆ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕಳವು(Bike Theft) ಮಾಡುತ್ತಿದ್ದ ಇಬ್ಬರು ಮೆಕ್ಯಾನಿಕ್‌ಗಳನ್ನು ಚಾಮರಾಜಪೇಟೆ ಠಾಣೆ ಪೊಲೀಸರು(Police) ಬಂಧಿಸಿ, 20 ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ.
ಮೈಸೂರು(Mysuru) ರಸ್ತೆಯ ಟಿ.ಆರ್‌.ಮಿಲ್‌ ಸಮೀಪದ ನಿವಾಸಿಗಳಾದ ರಾಮದಾಸ್‌ ಹಾಗೂ ಶರವಣ್‌ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) 11.45 ಲಕ್ಷ ಮೌಲ್ಯದ 20 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಚಾಮರಾಜ ಠಾಣಾ ವ್ಯಾಪ್ತಿಯಲ್ಲಿ ಪಲ್ಸರ್‌ ಬೈಕ್‌ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ(CCTV) ಕ್ಯಾಮೆರಾ ದೃಶ್ಯಾವಳಿ ಆಧರಿಸಿ ತನಿಖೆ(Investigation) ನಡೆಸಿದಾಗ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಇಬ್ಬರ ಬಂಧನದಿಂದ ಚಾಮರಾಜಪೇಟೆ, ಹನುಮಂತ ನಗರ, ಚಂದ್ರಾ ಲೇಔಟ್‌, ಕುಮಾರಸ್ವಾಮಿ ಹಾಗೂ ಕೆಂಪೇಗೌಡ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮದುವೆ ಉಡುಗೆಯೇ ಕಳ್ಳತನ: ತಮ್ಮದೇ ಮದುವೆ ದಿನ ಅಂದರ್‌ ಆದ ಜೋಡಿ

ಮೈಸೂರು ರಸ್ತೆ ಸಮೀಪ ಗ್ಯಾರೇಜ್‌ ನಡೆಸುತ್ತಿದ್ದ ಈ ಇಬ್ಬರು ಆರೋಪಿಗಳು, ಸುಲಭವಾಗಿ ಹಣ ಸಂಪಾದನೆಗೆ ದ್ವಿಚಕ್ರ ವಾಹನಗಳ ಕಳ್ಳತನಕ್ಕಿಳಿದಿದ್ದರು. ರಾತ್ರಿ ವೇಳೆ ಮನೆ ಮುಂದೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಡ್ರಗ್ಸ್‌ ಅಮಲಿನಲ್ಲಿ ಜನರಿಗೆ ನಿಂದಿಸುತ್ತಿದ್ದವನ ಬಂಧನ

ಬೆಂಗಳೂರು: ಮಾದಕವಸ್ತುವಿನ(Drugs) ಅಮಲಿನಲ್ಲಿ ರಸ್ತೆಯಲ್ಲಿ ನಿಂತು ಸಾರ್ವಜನಿಕರನ್ನು ಅವಾಚ್ಯವಾಗಿ ನಿಂದಿಸುತ್ತಿದ್ದ(Abuse) ವ್ಯಕ್ತಿಯನ್ನು ಚಂದ್ರಾಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಯಂಡಹಳ್ಳಿಯ ಗಣಿ ಹೈದರ್‌ (27) ಬಂಧಿತ. ಭಾನುವಾರ ಸಂಜೆ ಏಳು ಗಂಟೆ ಸುಮಾರಿಗೆ ಗಂಗೊಂಡನಹಳ್ಳಿಯ ಈಶ್ವರ ದೇವಸ್ಥಾನದ ಬಳಿ ಮಾದಕವಸ್ತು ಸೇವಿಸಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ವಿನಾಕಾರಣ ಅವಾಚ್ಯಶಬ್ಧಗಳಿಂದ ನಿಂದಿಸುತ್ತಿರುವ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿಯು ಗಾಂಜಾ(Marijuana) ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀಗಂಧ ಕಳವು: ಮೂವರ ಬಂಧನ

ಮಂಗಳೂರು(Mangaluru): ಶ್ರೀಗಂಧ(Sandalwood) ಮರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದು, ಸುಮಾರು 25 ಸಾವಿರ ರು. ಮೌಲ್ಯದ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ. 

Bengaluru: ಯುವತಿಗೆ ಮೆಸೇಜ್‌ ಕಳಿಸಿ ಕಿರುಕುಳ ನೀಡುತ್ತಿದ್ದವಗೆ ಇರಿತ: ನಾಲ್ವರ ಬಂಧನ

ಬೆಳುವಾಯಿ ನಿವಾಸಿ ಪ್ರಸ್ತುತ ಕೆ.ಸಿ. ನಗರದಲ್ಲಿ ವಾಸವಿರುವ ಮಜೀದ್‌ ಯಾನೆ ನವಾಝ…, ಬಂಟ್ವಾಳದ ಶರೀಫ್‌ ಯಾನೆ ದುನಿಯಾ ಶರೀಫ್‌ ಹಾಗೂ ವರ್ಕಾಡಿಯ ಲಕ್ಷ್ಮಣ ಶೆಟ್ಟಿಬಂಧಿತರು. ಇವರನ್ನು ಮಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಫೆ.4ರಂದು ರಾತ್ರಿ ಬಂಧಿಸಲಾಗಿದೆ. 41.1 ಕೆಜಿ ತೂಕದ 14 ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಕೆ.ಸಿ. ರೋಡ್‌ನ ಹಸೈನಾರ್‌ ಎಂಬವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಟಿ ರು. ಬೆಲೆಬಾಳುವ ತಿಮಿಂಗಿಲ ವಾಂತಿ ವಶ, ಆರು ಮಂದಿ ಬಂಧನ

ಉಳ್ಳಾಲ(Ullal: ಒಂದು ಕೋಟಿ ರು. ಬೆಲೆಬಾಳುವ ತಿಮಿಂಗಿಲದ ವಾಂತಿಯನ್ನು ವಶಕ್ಕೆ ಪಡೆದುಕೊಂಡ ಕೊಣಾಜೆ ಪೊಲೀಸರು ಸಾಗಾಟ ನಡೆಸುತ್ತಿದ್ದ ಆರು ಮಂದಿಯನ್ನು ಬಂಧಿಸಿದ್ದಾರೆ. ನಾಗರಾಜ್‌, ಸತ್ಯರಾಜ್‌, ರಾಜೇಶ್‌ ಸಹಿತ ಆರು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳೆಲ್ಲರೂ ತಮಿಳುನಾಡಿನಿಂದ ತಂದ ತಿಮಿಂಗಿಲದ ವಾಂತಿಯನ್ನು ವಿದೇಶಕ್ಕೆ ಸಾಗಾಟ ನಡೆಸಲು ಯತ್ನಿಸುವ ಸಂದರ್ಭ ಮುಡಿಪು ಸಮೀಪ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.