Asianet Suvarna News Asianet Suvarna News

Bengaluru: ಯುವತಿಗೆ ಮೆಸೇಜ್‌ ಕಳಿಸಿ ಕಿರುಕುಳ ನೀಡುತ್ತಿದ್ದವಗೆ ಇರಿತ: ನಾಲ್ವರ ಬಂಧನ

*   ಬಾಗಲೂರು ಠಾಣೆ ಪೊಲೀಸರಿಂದ ನಾಲ್ವರು ಆರೋಪಿಗಳ ಬಂಧನ
*  ಸುರೇಂದ್ರ​ ಎಂಬಾ​ತನಿಗೆ ಚಾಕು​ವಿ​ನಿಂದ ಇರಿದು ಕೊಲ್ಲಲು ಯತ್ನ
*  ಯುವ​ತಿಗೆ ವಾಟ್ಸ್‌ಆ್ಯಪ್‌ ಸಂದೇಶ ಕಳು​ಹಿಸಿ ಕಿರು​ಕುಳ

Four Accused Arrested For Attempt to Murder Case in Bengaluru grg
Author
Bengaluru, First Published Feb 6, 2022, 5:48 AM IST | Last Updated Feb 6, 2022, 5:48 AM IST

ಬೆಂಗಳೂರು(ಫೆ.06): ಯುವತಿಗೆ(Girl) ಸಂದೇಶ ಕಳುಹಿಸಿ ಕಿರಿಕಿರಿ ಉಂಟು ಮಾಡುತ್ತಿದ್ದ ಸಹೋದ್ಯೋಗಿಯೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆಗೆ(Murder) ಯತ್ನಿಸಿದ್ದ ಬಾಗಲೂರು ಠಾಣೆ ಪೊಲೀಸರು(Police) ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಹೊಸ​ಕೋಟೆ ತಾಲೂ​ಕಿನ ಮೋಹ​ನ್‌​ (21), ಯಲ​ಹಂಕದ ರಾಕೇ​ಶ್‌​ (20), ಸೂರ​ಜ್‌ ​(20) ದೇವ​ನ​ಹ​ಳ್ಳಿ​ಯ ವರುಣ್‌ ಕುಮಾ​ರ್‌(21) ಬಂಧಿ​ತರು(Arrest). ಆರೋಪಿಗಳಿಂದ(Accused) ಎರಡು ಬೈಕ್‌, ಕೃತ್ಯಕ್ಕೆ ಬಳಸಿದ್ದ ಚಾಕು ಜಪ್ತಿ ಮಾಡಲಾಗಿದೆ.

ಆರೋ​ಪಿ​ಗಳು ಜ.31ರಂದು ಬಾಗ​ಲೂ​ರಿನ ಕೆಐ​ಎ​ಡಿಬಿ ಪ್ರದೇ​ಶ​ದ​ಲ್ಲಿ​ರುವ ಅಮೆ​ಜಾನ್‌ ಕಂಪ​ನಿ​ಯಲ್ಲಿ ಕೆಲ​ಸ ಮಾಡು​ತ್ತಿ​ರುವ ಸುರೇಂದ್ರ​(23) ಎಂಬಾ​ತನಿಗೆ ಚಾಕು​ವಿ​ನಿಂದ ಇರಿದು ಕೊಲ್ಲಲು ಯತ್ನಿ​ಸಿ​ದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋ​ಪಿ​ಗ​ಳನ್ನು ಬಂಧಿ​ಸ​ಲಾ​ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Karnataka Hijab Row ಹಿಜಾಬ್‌ VS ಕೇಸರಿ ಪ್ರತಿಭಟನೆ, ಮಾರಕಾಸ್ತ್ರ ತಂದ ಇಬ್ಬರ ಬಂಧನ!

ಬಂಧಿತ ನಾಲ್ವರು ಆರೋಪಿಗಳ ಪೈಕಿ ರಾಕೇಶ್‌ ಮತ್ತು ವರುಣ್‌ಕುಮಾರ್‌ ಅಮೆ​ಜಾನ್‌(Amazon) ಕಂಪ​ನಿ​ಯಲ್ಲಿ ಕೆಲಸ ಮಾಡು​ತ್ತಿದ್ದರು. ಅದೇ ಕಂಪ​ನಿ​ಯಲ್ಲಿ ತಮಿ​ಳು​ನಾಡು ಮೂಲದ ಸುರೇಂದ್ರ ಕೂಡ ಕೆಲಸ ಮಾಡು​ತ್ತಿದ್ದ. ಈ ನಡುವೆ ಕೆಲಸದ ವಿಚಾರವಾಗಿ ರಾಕೇಶ್‌, ವರುಣ್‌ಕುಮಾರ್‌ ಮತ್ತು ಸುರೇಂದ್ರ ನಡುವೆ ನಾಲ್ಕೈದು ಬಾರಿ ಗಲಾ​ಟೆ​ಯಾ​ಗಿತ್ತು. ಇದರ ಜೊತೆಗೆ ಈ ಸುರೇಂದ್ರ ತನ್ನ ಸಹೋ​ದ್ಯೋಗಿ ಯುವ​ತಿಗೆ ವಾಟ್ಸ್‌ಆ್ಯಪ್‌(WhatsApp) ಸಂದೇಶ(Message) ಕಳು​ಹಿಸಿ ಕಿರು​ಕುಳ(Harrashment) ನೀಡು​ತ್ತಿದ್ದ. ಈ ಸಂಬಂಧ ಆ ಯುವತಿ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ವ್ಯವ​ಸ್ಥಾ​ಪ​ಕ​ರಿಗೆ ದೂರು ನೀಡಿದ್ದಳು. ಜ.31ರಂದು ಸುರೇಂದ್ರ ಸಂಜೆ 6.30ರ ಸುಮಾರಿಗೆ ರಾತ್ರಿ ಪಾಳಿ ಕೆಲಸಕ್ಕೆ ಕಂಪನಿಗೆ ಬಂದಿದ್ದಾನೆ. ಈ ವೇಳೆ ಎಚ್‌ಆರ್‌ ವಿಭಾಗದ ಆಡಳಿತಾಧಿಕಾರಿ ಸುರೇಂದ್ರನನ್ನು ಕರೆದು, ನಿನ್ನ ವಿರುದ್ಧ ಯುವತಿಯೊಬ್ಬಳು ದೂರು(Complaint) ನೀಡಿದ್ದಾಳೆ. ಹೀಗಾಗಿ ನೀನು ಸದ್ಯಕ್ಕೆ ಕೆಲಸ ಬರುವುದು ಬೇಡ ಎಂದು ಹೇಳಿ ಕಳುಹಿಸಿದ್ದರು.

ಸಂಚು ರೂಪಿಸಿ ಕೊಲೆಗೆ ಯತ್ನ:

ಈ ನಡುವೆ ಆರೋಪಿಗಳಾದ ರಾಕೇಶ್‌ ಮತ್ತು ವರು​ಣ್‌, ಸುರೇಂದ್ರನ ಬಗ್ಗೆ ಆಕ್ರೋಶಗೊಂಡಿದ್ದರು. ನೆರೆ ರಾಜ್ಯ​ದಿಂದ ಬಂದು ಸ್ಥಳೀಯ ಹೆಣ್ಣು ಮಕ್ಕ​ಳನ್ನೇ ಪೀಡಿ​ಸು​ತ್ತಿ​ದ್ದಾನೆ ಎಂದು ಕೋಪಗೊಂಡಿದ್ದರು. ಜೊತೆಗೆ ಕೆಲಸದ ವಿಚಾರವಾಗಿ ಈ ಹಿಂದೆ ಆತನೊಂದಿಗೆ ಗಲಾಟೆಯಾಗಿದ್ದರಿಂದ ದ್ವೇಷ ಸಾಧಿಸುತ್ತಿದ್ದರು. ಹೀಗಾಗಿ ಆರೋಪಿಗಳಾದ ಮೋಹನ್‌ ಮತ್ತು ಸೂರಜ್‌ ಜತೆ ಸೇರಿ ಸುರೇಂದ್ರ ಮೇಲೆ ಹಲ್ಲೆಗೆ ಸಂಚು ರೂಪಿಸಿದ್ದರು.

Crime News ಲಗ್ನ ಪತ್ರಿಕೆ ಪ್ರಿಂಟ್, ಪೊಲೀಸಪ್ಪನಿಂದ ಲವ್ ಸೆಕ್ಸ್ ದೋಖಾ

ಅದರಂತೆ ಜ.31ರಂದು ರಾತ್ರಿ 8ರ ಸುಮಾರಿಗೆ ಕಂಪನಿಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ನಡೆದು ಹೋಗುತ್ತಿದ್ದ ಸುರೇಂದ್ರನನ್ನು ತಡೆದ ಆರೋಪಿಗಳು, ಏಕಾಏಕಿ ಹಲ್ಲೆ ನಡೆಸಿ ಚಾಕುವಿನಿಂದ ಹೊಟ್ಟೆಗೆ ಇರಿದು ಪರಾರಿಯಾಗಿದ್ದರು. ಈ ವೇಳೆ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ಸುರೇಂದ್ರನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಹೀಗಾಗಿ ಸುರೇಂದ್ರ ಪ್ರಾಣಾಪಾಯದಿಂದ ಪಾರಾಗಿದ್ದ.

‘ಅದೃಷ್ಟದ ಚೊಂಬು’ ತೋರಿಸಿ ಕೋಟಿಗಟ್ಟಲೇ ಟೋಪಿ..!

ಜಪಾನ್‌ ದೇಶದ ವೈಮಾನಿಕ ಮತ್ತು ಅಂತರಿಕ್ಷ ಸಂಶೋಧನಾ(JAXA) ಸಂಸ್ಥೆ ಖರೀದಿಸಲಿರುವ ‘ಅದೃಷ್ಟದ ಚೊಂಬು’ ಎಂದು ತೋರಿಸಿ ಸಿನಿಮೀಯ ಶೈಲಿಯಲ್ಲಿ ಖಾಸಗಿ ಕಂಪನಿ ಉದ್ಯೋಗಿಗಳಿಂದ 78.89 ಲಕ್ಷ ಪಡೆದು ಟೋಪಿ ಹಾಕಿದ್ದ ಇಬ್ಬರು ಚಾಲಾಕಿಗಳು ಬ್ಯಾಟರಾಯನಪುರ ಠಾಣೆ ಪೊಲೀಸರ(Police) ಬಲೆಗೆ ಬಿದ್ದಿದ್ದಾರೆ.

ನಾಗರಬಾವಿಯ ವಿಘ್ನೇಶ್‌ ಹಾಗೂ ಕೋಲಾರ(Kolar) ಜಿಲ್ಲೆ ಮುಳಬಾಗಿಲು ತಾಲೂಕಿನ ನಾಗರಾಜ್‌ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) 15 ಲಕ್ಷ ಜಪ್ತಿ ಮಾಡಿದ್ದಾರೆ. ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಸುರೇಶ್‌, ಸಂತೋಷ್‌ಗೌಡ ಹಾಗೂ ವೆಂಕಟೇಶ್‌ ಪತ್ತೆಗೆ ತನಿಖೆ ನಡೆದಿದೆ. ಕೆಲ ತಿಂಗಳ ಹಿಂದೆ ಹಣ ಹೂಡಿಕೆ ನೆಪದಲ್ಲಿ ಖಾಸಗಿ ಕಂಪನಿ ಉದ್ಯೋಗಿಗಳಾದ ನಿತಿನ್‌ರಾಜ್‌ ಮತ್ತು ಗೋಪಿ ಕಾರ್ತಿಕ್‌ ಅವರನ್ನು ಪರಿಚಯಿಸಿಕೊಂಡು ಆರೋಪಿಗಳು ವಂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios