ಶಿವಮೊಗ್ಗ ಗಾಂಧಿ ಪಾರ್ಕ್ ಬಳಿ ಮ್ಯಾಂಗೋ ಜ್ಯೂಸ್ ಮಕ್ಕಳಿಗೆ ಮೃತ್ಯುವಾಯ್ತು!
ಮಾವಿನ ಹಣ್ಣಿನ ಜ್ಯೂಸ್ ಪ್ರಾಣಕ್ಕೆ ಸಂಚಕಾರ ತಂತು?/ ಭದ್ರಾವತಿಯ ಮಕ್ಕಳ ದಾರುಣ ಸಾವು/ ಶಿವಮೊಗ್ಗದ ಗಾಂಧಿ ಪಾರ್ಕ್ ಬಳಿ ಜ್ಯೂಸ್ ಸೇವಿಸಿದ್ದರು
ಶಿವಮೊಗ್ಗ(ಜ. 05) ಮಾವಿನ ಹಣ್ಣಿನ ಜ್ಯೂಸ್ ಕುಡಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಭದ್ರಾವತಿಯ ಗೀತಾ ಎಂಬುವವರ ಮಕ್ಕಳಾದ ಆಕಾಂಕ್ಷಾ ಯಾನೆ ಹಲಿನಾ(5) ಮತ್ತು ಅಶ್ವಿನ್ ಯಾನೆ ಅಲೆಕ್ಸ್ (8) ದಾರುಣ ಅಂತ್ಯ ಕಂಡಿದ್ದಾರೆ.
ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಸುರಗಿ ತೋಪ್ ಬಡಾವಣೆಯ ಗೀತಾ ಎಂಬುವವರು ತಮ್ಮ ಇಬ್ಬರು ಮಕ್ಕಳನ್ನು ಕರೆದುಕೊಂಡು ಸೋಮವಾರ ಶಿವಮೊಗ್ಗ ಗಾಂಧಿ ಪಾರ್ಕಿಗೆ ಬಂದಿದ್ದಾರೆ. ಇಲ್ಲಿ ಮಕ್ಕಳಿಗೆ ಮಾವಿನ ಹಣ್ಣಿನ ಜ್ಯೂಸ್ ಕುಡಿಸಿ ತಾವೂ ಕುಡಿದಿದ್ದಾಾರೆ.
ಪತ್ನಿಗೆ ಸೆಕ್ಸ್ ಟಿಪ್ಸ್ ಕೊಟ್ಟವ ಕೊಲೆಯಾಗಿ ಹೋದ
ಕುಡಿದ ಸ್ವಲ್ಪ ಹೊತ್ತಿನಲ್ಲಿಯೇ ಇಬ್ಬರು ಮಕ್ಕಳೂ ಅಸ್ವಸ್ಥಗೊಂಡಿವೆ. ತಕ್ಷಣವೇ ಅವರನ್ನು ಸರ್ಜಿ ಆಸ್ಪತ್ರೆೆಗೆ ಸೇರಿಸಲಾಯಿತಾದರೂ ಚಿಕಿತ್ಸೆೆ ವಿಫಲವಾಗಿ ಮಂಗಳವಾರ ಬೆಳಗಿನ ಜಾವ ಮೃತಪಟ್ಟಿವೆ.
ತಾಯಿ ಗೀತಾ ಈ ಸಂಬಂಧ ಪೊಲೀಸರಿಗೆ ದೂರು ದಾಖಲಿಸಿದ್ದು, ಕೋಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಕ್ಕಳ ಶವದ ಮರಣೋತ್ತರ ಪರೀಕ್ಷೆೆ ನಡೆಯುತ್ತಿಿದ್ದು, ಸಾವಿಗೆ ಸರಿಯಾದ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬೇರೆ ಬೇರೆ ಆಯಾಮಗಳ ಕುರಿತು ತನಿಖೆ ಆರಂಭಿಸಿದ್ದಾರೆ.