ಭೋಪಾಲ್ (ಡಿ.​ 31)  ತನ್ನ ಹೆಂಡತಿಗೆ ಲೈಂಗಿಕ ಸಲಹೆ ನೀಡಿದ ಎಂಬ ಕಾರಣಕ್ಕೆ ಪಕ್ಕದ ಮನೆಯವನನ್ನು ಗಂಡ ಹತ್ಯೆ ಮಾಡಿದ್ದಾನೆ. ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ರಾಮ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 45 ವರ್ಷದ ನೆರೆಯವನನ್ನು ಕೊಲೆ  ಮಾಡಿದ್ದಾನೆ.

ಮಂಗಳವಾರ ತಡರಾತ್ರಿ  ಇದೇ ವಿಚಾರಕ್ಕೆ ಸಂಬಂಧಿಸಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಸಜ್ಜು ಕೋಲ್  ಎಂಬಾತ ನೆರೆ ಮನೆಯ ಮಹೇಶ್ ಪಟೇಲ್ ನನ್ನು ಹತ್ಯೆ ಮಾಡಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆಂಟಿ ಹಿಂದೆ  ಹೋದ ಯುವಕ.. ಹರಿಹರದ ಮಾರ್ಕೆಟ್ ನಲ್ಲಿ ಹೆಣ

ಮಹೇಶ್ ಪಟೇಲ್  ಗೆ ತನ್ನ ಮನೆಗೆ ಬರದಂತೆ ಸಜ್ಜು ಅನೇಕ ಸಾರಿ ಎಚ್ಚರಿಕೆ ನೀಡಿದ್ದ.  ಆದರೂ ಸಜ್ಜು ಮನೆಯಿಂದ ಹೊರ ಹೋದ ನಂತರದಲ್ಲಿ ಮಹೇಶ್  ಬಂದು ಆತನ ಹೆಂಡತಿ ಜತೆ ಮಾತನಾಡಲು ಆರಂಭಿಸಿದ್ದಾನೆ.  

ಇದೇ ವೇಳೆ ಅಲ್ಲಿಗೆ ಬಂದ ಸಜ್ಜು ಕೊಡಲಿಯಿಂದ ಹಲ್ಲೆ ಮಾಡಿದ್ದು ಮಹೇಶದ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಒಂದು ಗೋಣಿ ಚೀಲದಲ್ಲಿ ತುಂಬಿ ಆತನನ್ನು ಹೊರಗೆ ಎಸೆದಿದ್ದು ಪೊಲೀಸರು ಪತ್ತೆ ಮಾಡಿದ್ದಾರೆ..