ಕಣ್ಣಾ ಮುಚ್ಚಾಲೆ ಆಟ ಆಡುವಾಗ ಐಸ್ ಕ್ರೀಮ್ ಬಾಕ್ಸ್‌ಗೆ ಕೂತ ಬಾಲಕಿಯರು ಬಾಕ್ಸ್ ಬಾಗಿಲು ತೆರೆಯಲಾಗದೆ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಮಸಗೆ ಗ್ರಾಮದಲ್ಲಿ ನಡೆದಿದೆ. 

ಮೈಸೂರು (ಏ.27): ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾಗ ಮಕ್ಕಳಿಬ್ಬರು ಐಸ್‌ಕ್ರೀಮ್‌ ಪೆಟ್ಟಿಗೆಯಲ್ಲಿ ಬಚ್ಚಿಟ್ಟುಕೊಳ್ಳಲು ಹೋಗಿ ಉಸಿ​ರು​ಗಟ್ಟಿಮೃತಪಟ್ಟಿರುವ ಘಟನೆ ತಾಲೂಕಿನ ಮಸಗೆ ಗ್ರಾಮದಲ್ಲಿ ಬುಧ​ವಾರ ನಡೆದಿದೆ. ಗ್ರಾಮದ ನಾಗರಾಜ ನಾಯ್ಕ, ಚಿಕ್ಕ​ದೇ​ವಮ್ಮ ದಂಪತಿ ಪುತ್ರಿ ಭಾಗ್ಯ(11) ಹಾಗೂ ರಾಜನಾಯ್ಕ ಮತ್ತು ಗೌರಮ್ಮ ದಂಪ​ತಿ ಪುತ್ರಿ ಕಾವ್ಯಾ (7) ಮೃತರು. ತಗಡೂರು ಗ್ರಾಮದ ಹನುಮಂತ ನಾಯ್ಕ ಮಸಗಿ ಗ್ರಾಮದಲ್ಲಿ ಐಸ್‌ ಕ್ರೀಂ ಮಾರಾಟ ವ್ಯವ​ಹಾ​ರ​ದಲ್ಲಿ ತೊಡ​ಗಿ​ದ್ದ​ರು. 

ಐಸ್‌ಕ್ರೀಂ ಪೆಟ್ಟಿ​ಗೆಯೊಂದನ್ನು ನಾಗರಾಜನಾಯ್ಕ ಅವರ ಮನೆ ಮುಂಭಾಗ ಇರಿಸಿ ಹೋಗಿದ್ದರು. ಬೆಳಗ್ಗೆ 10.30ರ ವೇಳೆ ಮಕ್ಕಳು ಕಣ್ಣಾ ​ಮು​ಚ್ಚಾಲೆ ಆಟ​ವಾ​ಡು​ತ್ತಿದ್ದು ಈ ವೇಳೆ ಭಾಗ್ಯ ಹಾಗೂ ಕಾವ್ಯ ಇಬ್ಬರೂ ಐಸ್‌ಕ್ರೀಮ್‌ ಬಾಕ್ಸ್‌ನೊಳಗೆ ಬಚ್ಚಿಟ್ಟುಕೊಂಡಿದ್ದಾರೆ. ಈ ವೇಳೆ ಐಸ್‌ಕ್ರೀಮ್‌ ಬಾಕ್ಸ್‌ ಬಾಗಿಲು ಆಕಸ್ಮಿಕವಾಗಿ ಮುಚ್ಚಿಕೊಂಡು ಲಾಕ್‌ ಆದ ಪರಿಣಾಮ ಇಬ್ಬರೂ ಪೆಟ್ಟಿಗೆಯೊಳಗೆ ಉಸಿ​ರು​ಗ​ಟ್ಟಿ ಮೃತಪಟ್ಟಿದ್ದಾರೆ. ಸುಮಾರು ಎರಡು ಗಂಟೆ​ಯಾ​ದರೂ ಮಕ್ಕಳು ಪತ್ತೆ​ಯಾ​ಗದ ಕಾರಣ ಐಸ್‌ಕ್ರೀಂ ಬಾಕ್ಸ್‌ ಬಾಗಿಲು ತೆರೆದು ನೋಡಿ​ದಾಗ ಪ್ರಕರಣ ಬೆಳಕಿಗೆ ಬಂದಿದೆ.

25,000ಕ್ಕೆ ನವಜಾತ ಶಿಶು ಮಾರಾಟ: ಹಣದ ಆಸೆಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಶಿಶು ಮಾರಾಟ ಮಾಡಿದ ಆರೋಪದಡಿ ಐವರನ್ನು ಪೊಲೀಸರು ಬಂಧಿಸಿದ ಘಟನೆ ಸೋಮವಾರ ಸಂಜೆ ವರದಿಯಾಗಿದೆ. ತಟ್ಟಿಗೇರಿ ಗ್ರಾಪಂನ ಗೌಳಿವಾಡದ ಸಂತ್ರಸ್ತೆ ಸಾವಿತ್ರಿ 6 ದಿನದ ಹಿಂದೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. 

ಗಂಡನಿಗೆ ಮೋಸ, ಗದ್ದೆಯಲ್ಲಿ ಬಾಯ್‌ಫ್ರೆಂಡ್‌ ಜತೆ ಚಕ್ಕಂದ: ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಹೆಂಡತಿ

ಹಣದಾಸೆಗಾಗಿ ಅವಳ ಸ್ವಂತ ಸಹೋದರ ಭಯ್ಯಾ ಪಟಕಾರೆ (30), ಆಶಾ ಕಾರ್ಯಕರ್ತೆ ರೋಜಿ ದಬಾಲಿ (35), ಅಗಸಲಕಟ್ಟಾಗ್ರಾಮದ ಮಮತಾಜ ಹಳಬ (30) ಅವರು ಸೇರಿ ತಾಯಿಯನ್ನು ಪುಸಲಾಯಿಸಿ ಮಗುವನ್ನು ಕೇವಲ 25 ಸಾವಿರಕ್ಕೆ ಯಲ್ಲಾಪೂರ ತಾಲೂಕಿನ ಕಿರವತ್ತಿಯ ದಂಪತಿ ಅಬ್ದುಲ್‌ ರೆಹಮಾನ್‌ ಪಟೇಲ್‌, ರಾಹತ್‌ ಪಟೇಲ್‌ (38) ದಂಪತಿಗಳಿಗೆ ಮಾರಾಟ ಮಾಡಿದ್ದರು. 

ಈ ಕುರಿತು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಿಡಿಪಿಒ ಡಾ. ಲಕ್ಷ್ಮಿದೇವಿ ಅವರು, ಪಿಎಸ್‌ಐ ಶಿವಾನಂದ ನಾವದಗಿ, ಪಿಡಿಒ ಮಹಾಂತೇಶ ಹುರಕಡ್ಲಿ, ವಲಯ ಮೇಲ್ವಿಚಾರಕಿ ರಾಜೇಶ್ವರಿ ಕಟ್ಟಿಮನಿ, ಪೊಲೀಸ್‌ ಕಾನ್‌ಸ್ಟೇಬಲ್‌ ರಮ್ಯಾ ಅವರ ಜೊತೆ ಸೋಮವಾರ ಸಂಜೆ ಅರಣ್ಯದ ಅಂಚಿನಲ್ಲಿರುವ ತಟ್ಟಿಗೇರಿ ಗೌಳಿವಾಡಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಪರಿಶೀಲಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದರು.

Hubballi Riots: ಹುಬ್ಬಳ್ಳಿ ಗಲಭೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಪೊಲೀಸರು..!

ಕಾರವಾರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರು ಮಂಗಳವಾರ ಯಲ್ಲಾಪೂರದ ಕಿರವತ್ತಿಯ ದಂಪತಿ ಮನೆಗೆ ತೆರಳಿ ಶಿಶುವನ್ನು ರಕ್ಷಿಸಿದ್ದಾರೆ. ಬಳಿಕ ಶಿರಸಿಯ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿದರು. ಈ ಬಗ್ಗೆ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.