ಗಂಡನಿಗೆ ಮೋಸ, ಗದ್ದೆಯಲ್ಲಿ ಬಾಯ್‌ಫ್ರೆಂಡ್ ಜತೆ ಚಕ್ಕಂದ: ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಹೆಂಡತಿ
Extramarital Affair News: ವಿವಾಹೇತರ ಸಂಬಂಧಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಅದರಲ್ಲೂ ಹೆಂಡತಿಗೆ ಮೋಸ ಮಾಡಿ ಸಿಕ್ಕಿ ಬೀಳುವ ಗಂಡ, ಗಂಡನಿಗೆ ಮೋಸ ಮಾಡಿ ಸಿಕ್ಕಿ ಬೀಳುವ ಹೆಂಡತಿ, ಈ ತರದ ಕತೆಗಳು ಸಾಮಾನ್ಯ. ಅದೇ ರೀತಿಯ ಇನ್ನೊಂದು ಘಟನೆ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ.
ಕೊಲ್ಕತ್ತಾ: ಮದುವೆಯಾಚೆಗಿನ ಅಕ್ರಮ ಸಂಬಂಧಗಳಲ್ಲಿ (Extramarital Affair News) ಬಹುತೇಕವು ಅಂತ್ಯವಾಗುವುದು ಕೆಟ್ಟ ಘಟನೆಗಳಿಂದಲೇ. ಇದೇ ರೀತಿಯ ಒಂದು ಘಟನೆಯೊಂದು ಇತ್ತೀಚೆಗೆ ಬೆಳಕಿಗೆ ಬಂದಿದೆ. ವಿವಾಹಿತ ಮಹಿಳೆ ಮತ್ತೊಂದು ಹುಡುಗನ ಜತೆ ಸಂಬಂಧ ಹೊಂದಿದ್ದಳು. ಸ್ಥಳೀಯರಿಗೆ ಅನುಮಾನ ಬಂದು ನೋಡಿದಾಗ, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾಳೆ. ಅಂದ ಹಾಗೆ ಈ ಘಟನೆ ನಡೆದಿರುವುದು ಪಶ್ಚಿಮ ಬಂಗಾಳದ ಮಧ್ಯ ಕೃಷ್ಣಾಪುರ್ ಹಳ್ಳಿಯಲ್ಲಿ.
ಇದೇ ತಿಂಗಳ ಏಪ್ರಿಲ್ 16ರಂದು ಘಟನೆ ನಡೆದಿದ್ದು, ಸ್ಥಳೀಯರು ಆಕೆಯನ್ನು ಥಳಿಸಿದ್ದಾರೆ. ಬಾಯ್‌ಫ್ರೆಂಡ್ ಜತೆಗೆ ಸಿಕ್ಕಿಬಿದ್ದ ನಂತರ ಮಹಿಳೆ ಪರಿಪರಿಯಾಗಿ ಬೇಡಿಕೊಂಡಿದ್ದಾರೆ, ಆದರೆ ಅಲ್ಲಿದ್ದ ಸ್ಥಳೀಯರು ಆಕೆಯ ಮೇಲೆ ಕರುಣೆ ತೋರದೆ ಆಕೆಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಗುಂಪು ಥಳಿತದಲ್ಲಿ ಯುವತಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ. ಆಕೆಯ ಮೇಲೆ ಹಲ್ಲೆ ಮಾಡಿದ ಸ್ಥಳೀಯರು ಗಂಡನನ್ನು ಬಿಟ್ಟು ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯ ಜತೆಗೇ ಮದುವೆ ಮಾಡಿಕೊಳ್ಳುವಂತೆ ವತ್ತಾಯಿಸಿದ್ದಾರೆ. ಆದರೆ ಮಹಿಳೆಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಆಕೆ ಮಾತನಾಡುವ ಸ್ಥಿತಿಯಲ್ಲೂ ಇರಲಿಲ್ಲ. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯ ಪೊಲೀಸ್ ಠಾಣೆಗೆ ಇದುವರೆಗೂ ಯಾವುದೇ ಲಿಖಿತ ದೂರು ದಾಖಲಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಪ್ರೆಸ್ ಟ್ರಸ್ಟ್ ಜತೆಗೆ ಮಾತನಾಡಿದ ತೆಲಿಯಾಮುರ ಉಪ ವಿಭಾಗ ಪೊಲೀಸ್ ಅಧಿಕಾರಿ ಸೋನಾಚರಣ್ ಜಮಾತಿಯಾ, ತಂಡವೊಂದನ್ನು ಹಳ್ಳಿಗೆ ಕಳಿಸಿ ಪ್ರಕರಣ ಸಂಬಂಧ ತನಿಖೆ ಮಾಡಲಾಗುವುದು ಎಂದಿದ್ದಾರೆ.
ಸ್ಥಳೀಯ ಮಾಧ್ಯಮವೊಂದಕ್ಕೆ ಸಂತ್ರಸ್ಥ ಮಹಿಳೆ ಹೇಳಿಕೆ ನೀಡಿದ್ದು, ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಸುಮಾರು 15ಕ್ಕೂ ಹೆಚ್ಚು ಸ್ಥಳೀಯರ ಜತೆಗೆ ಬತ್ತದ ಗದ್ದೆ ಸಂತ್ರಸ್ಥೆಯ ಗಂಡ ಬಂದನಂತೆ. ಅದಾದ ನಂತರ ಅಕ್ರಮ ಸಂಬಂಧದ ಆರೋಪ ಹೊರಿಸಿ, ಸೀದಾ ಆಕೆಯ ಮೇಲೆ ಹಲ್ಲೆಮಾಡಲಾಯಿತಂತೆ. ಆ ವೇಳೆ ಮಹಿಳೆ ಜ್ಞಾನ ತಪ್ಪಿ ಬಿದ್ದಳಂತೆ. ಈ ರೀತಿಯಾಗಿ ಆಕೆ ಘಟನೆಯನ್ನು ವಿವರಿಸಿದ್ದಾರೆ. ಆಕೆಯ ಜತೆಗೆ ವಿವಾಹೇತರ ಸಂಬಂಧ ಹೊಂದಿದ್ದ ಎನ್ನಲಾದ ವ್ಯಕ್ತಿಯ ಮೇಲೂ ಈ ಗುಂಪು ಹಲ್ಲೆ ಮಾಡಿದೆ ಎನ್ನಲಾಗಿದೆ. ಇಡೀ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಗಂಡ ನಿತ್ರಾಣಳಾದ ಹೆಂಡತಿಗೆ ಹಣೆಗೆ ಕುಂಕುಮವಿಟ್ಟು, ಆಕೆಯ ಪ್ರಿಯಕರನೊಂದಿಗೆ ಮದುವೆಯಾಗುವಂತೆ ಒತ್ತಾಯಿಸುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: ಸಮಯ ನೀಡದ ಗಂಡ, ಮಾಜಿ ಲವರ್ ಜೊತೆ ಒಂದಾದ ಹೆಂಡತಿ
ಜತೆಗೆ ಮಹಿಳೆ ಮತ್ತು ಯುವಕ ಇಬ್ಬರ ಕೈಗೂ ಬಲವಂತವಾಗಿ ಹಾರಗಳನ್ನು ಕೊಟ್ಟು ಮದುವೆಯಾಗುವಂತೆ ಸ್ಥಳೀಯರು ಮತ್ತು ಗಂಡ ಒತ್ತಾಯ ಹೇರುತ್ತಿರುವ ದೃಶ್ಯಗಳೂ ವೈರಲ್ ಆಗಿವೆ.
ಸದ್ಯ ಪ್ರಕರಣ ಸಂಬಂಧ ಮಾಹಿತಿ ಪಡೆಯಲು ಪೊಲೀಸರು ತಂಡ ರಚಿಸಿದ್ದು, ವಿವಾಹೇತರ ಸಂಬಂಧ ನಿಜವಾಗಲೂ ಇತ್ತಾ, ಅಥವಾ ಗಂಡನ ಶಂಕೆಯಿಂದಲೇ ಈ ದುರಂತ ನಡೆಯಿತಾ ಎಂಬುದು ತಿಳಿಯಬೇಕಿದೆ. ಜತೆಗೆ ಮಹಿಳೆ ಮತ್ತು ಆಕೆಯ ಜತೆ ಸಂಬಂಧ ಹೊಂದಿದ್ದ ಎನ್ನಲಾದ ಪ್ರಿಯಕರನ ಮೇಲೆ ಹಲ್ಲೆ ಮಾಡಿದ ಗಂಡ ಮತ್ತು ಆತನ ಸಹಚರರ ವಿರುದ್ಧವೂ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ಭಾವಿ ಹೆಂಡತಿಯ ವಿಚಿತ್ರ ಬೇಡಿಕೆ, ಅಪ್ಪ-ಅಮ್ಮನಿಗೂ ಹೇಳೋಕಾಗ್ತಿಲ್ಲ ಅಂತಿದ್ದಾನೆ ಹುಡುಗ !
ಗಂಡ ಮತ್ತು ಹೆಂಡತಿ ಇಬ್ಬರ ನಡುವೆ ಪರಸ್ಪರ ಪ್ರೀತಿ, ಗೌರವ ಮತ್ತು ಅದಕ್ಕಿಂತ ಹೆಚ್ಚಿನದಾಗಿ ನಂಬಿಕೆ ಇರಬೇಕು. ಎಲ್ಲಿ ಗಂಡ ಹೆಂಡತಿಯನ್ನು ಹೆಂಡತಿ ಗಂಡನ್ನು ಶಂಕಿಸುತ್ತಾಳೋ ಆಗ ಎಲ್ಲಾ ನಡೆಗಳೂ ಅನುಮಾನಾಸ್ಪದವಾಗಿಯೇ ಕಾಣುತ್ತದೆ. ಈ ಪ್ರಕರಣದಲ್ಲೂ ಅದೇ ಕಾರಣವಿರಬಹುದು, ಆದರೆ ದುಡುಕಿ ಸಿಟ್ಟಿನ ಕೈಯಲ್ಲಿ ಬುದ್ದಿ ಕೊಟ್ಟರೆ ಸಂಬಂಧ ಮುರಿದುಹೋಗುವುದಲ್ಲದೇ, ಜೈಲಿಗೂ ಹೋಗಬೇಕಾದ ಸಂದರ್ಭ ಸೃಷ್ಟಿಯಾಗಬಹುದು.