ಪೀರಸಾಬ್ ಹಾಗೂ ಶಾರದಾ ಇಬ್ಬರಿಗೂ ಬೇರೆ ಬೇರೆ ಮದುವೆ ಆಗಿತ್ತು. ಆದ್ರೂ ಕೂಡ ಇಬ್ಬರೂ ಅನೈತಿಕ ಸಂಬಂಧ ಹೊಂದಿದ್ದರು. 

ಕೊಪ್ಪಳ(ಮೇ.31): ಅನೈತಿಕ ಸಂಬಂಧಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ. ಮೃತರನ್ನ ಪೀರಸಾಬ್ ನದಾಫ್ (33), ಶಾರದಾ ಶರಣಪ್ಪ ಬಸಾಪೂರ (30) ಅಂತ ಗುರುತಿಸಲಾಗಿದೆ. 

Add Asianetnews Kannada as a Preferred SourcegooglePreferred

ಪೀರಸಾಬ್ ಹಾಗೂ ಶಾರದಾ ಇಬ್ಬರಿಗೂ ಬೇರೆ ಬೇರೆ ಮದುವೆ ಆಗಿತ್ತು. ಆದ್ರೂ ಕೂಡ ಇಬ್ಬರೂ ಅನೈತಿಕ ಸಂಬಂಧ ಹೊಂದಿದ್ದರು. ಅನೈತಿಕ ಸಂಬಂಧ ತಿಳಿದ ಪೀರಸಾಬನ ಪತ್ನಿ ಮೃತ ಶಾರದಾಳ ಜೊತೆ ಜಗಳವಾಡಿದ್ದಳು. ನನ್ನ ಗಂಡನ ಸಹವಾಸ ಬಿಡು ಅಂತ ಶಾರದಾ ಜೊತೆ ಆಗಾಗ ಜಗಳ ಮಾಡ್ತಿದ್ದಳು ಅಂತ ತಿಳಿದು ಬಂದಿದೆ. 

ಮದುವೆ ಸಿದ್ಧತೆಯಲ್ಲಿದ್ದ ಮದುಮಗ ಶವವಾಗಿ ಪತ್ತೆ: ಮದುವೆಯಾಗಿಲ್ಲವೆಂದು ಅಂಗವಿಕಲ ಆತ್ಮಹತ್ಯೆ

ದೂರ ಆಗುವುದಾದರೇ ಇಬ್ಬರು ಜಗತ್ತಿನಿಂದ ದೂರ ಆಗುತ್ತೇವೆ ಅಂತ ಪೀರಸಾಬ್ ಹಾಗೂ ಶಾರದಾ ಅಂದಿದ್ದರಂತೆ. ಊರ ಹಿರಿಯರು ಇಬ್ಬರಿಗೂ ತಿಳುವಳಿಕೆ ಹೇಳಿದ್ದರು. ಆದರೂ ಕೂಡ ಪೀರಸಾಬ್ ಹಾಗೂ ಶಾರದಾ ಯಾರ ಮಾತು ಕೇಳಿರಲಿಲ್ಲ. 

ಇಂದು ಜಮೀನಿಗೆ ತೆರಳಿ ಇಬ್ಬರು ಒಟ್ಟಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಹನಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹನಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.