ಮದುವೆ ಸಿದ್ಧತೆಯಲ್ಲಿದ್ದ ಮದುಮಗ ಶವವಾಗಿ ಪತ್ತೆ: ಮದುವೆಯಾಗಿಲ್ಲವೆಂದು ಅಂಗವಿಕಲ ಆತ್ಮಹತ್ಯೆ

ಮುಂದಿನ ತಿಂಗಳಲ್ಲಿ ಮದುವೆ ದಿನಾಂಕ ನಿಗದಿಯಾಗಿದ್ದ ಯುವಕನೋರ್ವ ಗ್ರಾಮದ ಹೊರಭಾಗದಲ್ಲಿರುವ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಧಾರವಾಡ ತಾಲೂಕಿನ ನಾಗಲಾವಿ ಗ್ರಾಮದಲ್ಲಿ ನಡೆದಿದೆ. 

Dharwad Groom body found in lake disabled person self death because not married sat

ಧಾರವಾಡ (ಮೇ 30): ಮುಂದಿನ ತಿಂಗಳಲ್ಲಿ ಮದುವೆ ದಿನಾಂಕ ನಿಗದಿಯಾಗಿದ್ದ ಯುವಕನೋರ್ವ ಗ್ರಾಮದ ಹೊರಭಾಗದಲ್ಲಿರುವ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಧಾರವಾಡ ತಾಲೂಕಿನ ನಾಗಲಾವಿ ಗ್ರಾಮದಲ್ಲಿ ನಡೆದಿದೆ. 

ಮದುವೆ ನಿಗದಿಯಾಗಿದ್ದ ಯುವಕ ತುಂಬಾ ಖುಷಿಯಲ್ಲಿದ್ದನು. ಮುಂದಿನ ತಿಂಗಳೇ ಮದುವೆ ಇದ್ದುದರಿಂದ ಇಡೀ ಕುಟುಂಬ ಸದಸ್ಯರು ಸೇರಿದಂತೆ ಮದುಮಗ ಯುವಕನೂ ಕೂಡ ಸಂತಸದಿಂದಲೇ ಮದುವೆಗೆ ಬೇಕಾದ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದರು. ಆದರೆ, ಮದುವೆ ಸಿದ್ಧತೆಯಲ್ಲಿದ್ದ ಯುವಕ ಏಕಾಏಕಿ ಕಾಣೆಯಾಗಿದ್ದನು. ಇದರಿಂದ ಭಯಭೀತರಾದ ಮನೆ ನಿವಾಸಿಗಳು ಎಲ್ಲೆಡೆ ಹುಡುಕಾಡಿದ್ದಾರೆ. ಆದರೆ, ಗ್ರಾಮದ ಹೊರಗಿದ್ದ ಕೆರೆಯ ದಂಡೆಯಲ್ಲಿ ಯುವಕನ ಬಟ್ಟೆ ಮತ್ತು ಚಪ್ಪಲಿಗಳು ಲಭ್ಯವಾಗಿವೆ. ನಂತರ, ಕೆರೆಯಲ್ಲಿ ಮುಳುಗಿದ ಬಗ್ಗೆ ಅನುಮಾನ ಬಂದಿದ್ದು, ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಯುವಕನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೋಟ್ ಮೂಲಕ ಕಾರ್ಯಾಚರಣೆ ನಡೆಸಿದ್ದರು. ಸುಮಾರು ಹೊತ್ತಿನ ನಂತರ ಈಗಷ್ಟೇ ಮದುಮಗ ಶವವಾಗಿ ಸಿಕ್ಕಿದ್ದಾನೆ. 

ಅಕ್ರಮ ಸಂಬಂಧ ಗೊತ್ತಿದ್ರೂ ಸುಮ್ಮನಿದ್ದ ಗಂಡನನ್ನೇ ಕೊಲ್ಲಿಸಿದ ಪತ್ನಿ: ಜಾನಪದ ಕಲಾವಿದನ ಮಕ್ಕಳು ಅನಾಥ

ಜೂನ್‌ 18ಕ್ಕೆ ಮದುವೆ ಆಗಬೇಕಿದ್ದವ ಶವವಾಗಿ ಪತ್ತೆ: ಮೃತ ಯುವಕನನ್ನು ಧಾರವಾಡದ ಕಂಠಿಗಲ್ಲಿಯ ಮಲ್ಲಿಕ್ (30) ಎಂದು ಗುರುತಿಸಲಾಗಿದೆ. ಈತನ ಮದುವೆ ಜೂನ್ 18 ರಂದು ನಿಗದಿಯಾಗಿತ್ತು. ಆದರೆ, ಇದೇ ಸಮಯದಲ್ಲಿ ಇಂತಹ ಘಟನೆ ನಡೆದಿದ್ದು ಕುಟುಂಬಸ್ಥರು ತೀವ್ರ ದುಃಖದಲ್ಲಿದ್ದಾರೆ. ಇನ್ನು ಯುವಕ ಮಲ್ಲಿಕ್ ಜೊತೆ ಕೆರೆಯ ಬಳಿ ಯಾರಾರು ಹೋಗಿದ್ದರು ಎಂಬುದರ ಬಗ್ಗೆಯೂ ಯಾವುದೇ ಮಾಹಿತಿ ಲಭಿಸಿಲ್ಲ. ಈ ಘಟನೆಯ ಬಗ್ಗೆ ಹಲವು ರೀತಿಯಲ್ಲಿ ಸಂಶಯ ಉಂಟಾಗಿದ್ದು, ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ. 

ಮತ್ತೊಂದೆಡೆ ಆತ್ಮಹತ್ಯೆಗೆ ಶರಣಾದ ಅಂಗವಿಕಲ:  ಅಂಗವೈಕಲ್ಯದಿಂದ ಮನನೊಂದು ವ್ಯಕ್ತಿಯೋರ್ವ ಹೊಲದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ತಾಲೂಕಿನ ಕ್ಯಾರಕೋಪ್ಪ ಗ್ರಾಮದಲ್ಲಿ ನಡೆದಿದೆ. ನನಗೆ ಯಾರು ಇಲ್ಲ, ಮದುವೆಯೂ ಆಗಿಲ್ಲ ಎಂದು ಮನನೊಂದ ಕ್ಯಾರಕೋಪ್ಪ ಗ್ರಾಮದ ವಿಶೇಷ ಚೇತನ ಫಕ್ಕೀರಪ್ಪ ಮದಿಗಡಿ (70) ಎಂಬಾತನೇ ಹೊಲದಲ್ಲಿ ನೇಣಿಗೆ ಶರಣಾದ ವ್ಯಕ್ತಿ ಎಂದು ತಿಳಿದುಬಂದಿದೆ. ಧಾರವಾಡ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಘಟನೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.

ಬಂಗಾರದ ಆಸೆಗಾಗಿ ವೃದ್ಧೆ ಕೊಲೆಗೈದ ದುಷ್ಕರ್ಮಿಗಳು: ಧಾರವಾಡ: ಬಂಗಾರದ ಆಸೆಗಾಗಿ ವೃದ್ಧ ಮಹಿಳೆಯ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿದ ಘಟನೆ ಕಲಘಟಗಿ ತಾಲೂಕಿನ ಆಲದಕಟ್ಟಿ ಗ್ರಾಮದ ಜಮೀನಿನಲ್ಲಿ ನಡೆದಿದೆ. ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದ 82 ವರ್ಷದ ತಿಪ್ಪವ್ವ ತಂಬೂರ ಎಂಬ ವೃದ್ಧೆಯನ್ನು ಆಲದಕಟ್ಟಿ ಗ್ರಾಮದ ದ್ಯಾಮಣ್ಣ ಎಂಬುವವರಿಗೆ ಸೇರಿದ ಕಬ್ಬು ಬೆಳೆದ ಜಮೀನಿನಲ್ಲಿ ಭೀಕರವಾಗಿ ಕೊಲೆ ಮಾಡಿ, ಅವಳ ಕೊರಳಲಿದ್ದ ಚಿನ್ನಾಭರಣ ದೋಚಿಕೊಂಡು ಕೊಲೆಗಾರರರು ಪರಾರಿಯಾಗಿದ್ದಾರೆ.

Mysuru Road Accident: ಅಪಘಾತದಲ್ಲಿ ಬಲಿಯಾದವರ ಸಾಮೂಹಿಕ ಅಂತ್ಯ ಸಂಸ್ಕಾರ

ಕಲಘಟಗಿ ಠಾಣೆಯಲ್ಲಿ ದೂರು ದಾಖಲು:  ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಲಘಟಗಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಸ್ಥಳಕ್ಕೆ ಶ್ವಾನದಳವನ್ನು ಕರೆಯಿಸಿ ಕೊಲೆಗಾರರ ಪತ್ತೆಗೆ ಮುಂದಾಗಿದ್ದಾರೆ. ಕಲಘಟಗಿ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.

Latest Videos
Follow Us:
Download App:
  • android
  • ios