Vijayapura: ಕೃಷಿ ಹೊಂಡಕ್ಕೆ ಬಿದ್ದು ಸಹೋದರಿಬ್ಬರು ಸಾವು
ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದ ಜಮೀನೊಂದರಲ್ಲಿ ದನ ಮೇಯಿಸಲು ಹೋಗಿದ್ದ ಇಬ್ಬರು ಸಹೋದರರು ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಮೃತ ಪಟ್ಟಘಟನೆ ಶನಿವಾರ ಜರುಗಿದೆ.
ಬಸವನಬಾಗೇವಾಡಿ (ಡಿ.03): ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದ ಜಮೀನೊಂದರಲ್ಲಿ ದನ ಮೇಯಿಸಲು ಹೋಗಿದ್ದ ಇಬ್ಬರು ಸಹೋದರರು ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಮೃತ ಪಟ್ಟಘಟನೆ ಶನಿವಾರ ಜರುಗಿದೆ. 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಾಯಪ್ಪ ಬಸವರಾಜ ವಣಕಿಹಾಳ(12), 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಾಳಿಂಗರಾಯ ಬಸವರಾಜ ವಣಕಿಹಾಳ (9) ಅವರು ಶಾಲೆ ಮುಗಿದ ನಂತರ ಮನೆ ಬಂದ ನಂತರ ದನ ಮೇಯಿಸಲು ತಮ್ಮ ಪಕ್ಕದ ಜಮೀನಿಗೆ ಹೋಗಿದ್ದಾರೆ. ಅಲ್ಲಿರುವ ಕೃಷಿ ಹೊಂಡಕ್ಕೆ ನೀರು ಕುಡಿಯಲು ಹೋಗಿ ಆಕಸ್ಮಿಕವಾಗಿ ಮೊದಲು ಮಾಳಿಂಗರಾಯ ಕಾಲು ಜಾರಿ ಬಿದ್ದಿದ್ದಾನೆ.
ತನ್ನ ತಮ್ಮನನ್ನು ರಕ್ಷಿಸಲು ರಾಯಪ್ಪನು ಕೃಷಿ ಹೊಂಡಕ್ಕೆ ಇಳಿದಿರಬಹುದು. ಇಬ್ಬರು ನೀರಿಗೆ ಬಿದ್ದು ಮೃತ ಪಟ್ಟಿರಬಹುದು ಎಂದು ಅಂದಾಜು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬಸವನಬಾಗೇವಾಡಿಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಶರಣಗೌಡ ನ್ಯಾಮಣ್ಣನವರ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Raichur: ಸಿರವಾರ ಠಾಣೆ ಪಿಎಸ್‌ಐ ಕಿರುಕುಳ ಆರೋಪ, ಡೆತ್‌ನೋಟ್ ಬರೆದು ಯುವಕ ನಾಪತ್ತೆ
ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು: ಮಿತ್ತಬಾಗಿಲು ಗ್ರಾಮದ ಎರ್ಮಾಯಿ ಫಾಲ್ಸ್ ಸಮೀಪದ ಏಳೂವರೆ ಹಳ್ಳದ ಕಲ್ಲಂಡ ಎಂಬಲ್ಲಿ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಘಟನೆ ಶನಿವಾರ ನಡೆದಿದೆ. ಧರ್ಮಸ್ಥಳ ಗ್ರಾಮದ ದೊಂಡೋಲೆ ನಿವಾಸಿ ಕೇಶವ ಭಂಡಾರಿ ಎಂಬವರ ಪುತ್ರ ಉಜಿರೆಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವಿವೇಕ್ (17) ಮೃತಪಟ್ಟವಿದ್ಯಾರ್ಥಿ. ಶನಿವಾರ ಮಧ್ಯಾಹ್ನ ನಂತರ ಕಾಲೇಜಿಗೆ ರಜೆ ಇದ್ದುದರಿಂದ ತನ್ನ ಆರೇಳು ಮಂದಿ ಸ್ನೇಹಿತರ ಜತೆ ಎರ್ಮಾಯಿ ಫಾಲ್ಸ್‌ಗೆ ಹೋಗಿ, ತೊಟ್ಲಾಯಿ ಗುಂಡಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಸಮಯ ಈ ಘಟನೆ ನಡೆದಿದೆ.
ಸಿದ್ದರಾಮಯ್ಯ ಯಾವುದೆ ಕ್ಷೇತ್ರದಲ್ಲಿ ನಿಂತ್ರೂ ಅವರನ್ನ ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ: ರೂಪಾ ಶಶಿಧರ್
ಕಲ್ಲಂಡ ಪರಿಸರದ ತೊಟ್ಲಾಯಿ ಗುಂಡಿಯಲ್ಲಿ ಫಾಲ್ಸ್‌ಗೆ ಬರುವ ಮಂದಿ ಸ್ನಾನಕ್ಕೆ ಇಳಿಯುವುದು ಸಾಮಾನ್ಯ. 2019ರ ನೆರೆಯ ಬಳಿಕ ಈ ಗುಂಡಿಯಲ್ಲಿ ಹೂಳು ತುಂಬಿದ್ದು ಅಷ್ಟೊಂದು ಆಳ ಇರಲಿಲ್ಲ. ಆದರೆ ಈ ವರ್ಷದ ಮಳೆಗೆ ಹೂಳು ಕೊಚ್ಚಿಕೊಂಡು ಹೋಗಿ ಗುಂಡಿ ಆಳವಾಗಿದೆ. ಇಲ್ಲಿ ಸ್ನಾನ ಮಾಡುವ ಸಮಯ ಬೊಬ್ಬೆ ಹೊಡೆಯುವುದು, ಕಿರುಚಾಟ ಇತ್ಯಾದಿ ಪ್ರವಾಸಿಗರು ಮಾಡುತ್ತಾ ಇರುವುದರಿಂದ ಈ ಬಗ್ಗೆ ಸ್ಥಳೀಯರು ಹೆಚ್ಚಾಗಿ ಗಮನಹರಿಸುವುದಿಲ್ಲ. ಶನಿವಾರವು ಇದೇ ರೀತಿ ಆಗಿತ್ತು. ಸ್ಥಳೀಯರು ಮುನ್ನೆಚ್ಚರಿಕೆ ಹೇಳಿದ್ದರೂ ಪ್ರವಾಸಿಗರು ಆ ಬಗ್ಗೆ ಗಮನ ಹರಿಸದೆ, ಕೆಲವೊಮ್ಮೆ ವಾಗ್ವಾದಗಳನ್ನು ನಡೆಸುತ್ತಾ ನೀರಿಗೆ ಇಳಿಯುತ್ತಾರೆ ಎಂದು ಪರಿಸರದ ಮಂದಿ ತಿಳಿಸಿದ್ದಾರೆ. ಮೃತದೇಹವನ್ನು ಮೇಲೆತ್ತಲು ಸ್ಥಳೀಯರು ಸಹಕರಿಸಿದ್ದಾರೆ.