Asianet Suvarna News Asianet Suvarna News

Raichur: ಗ್ರಾಮ ಪಂಚಾಯತ್ ನಿರ್ಲಕ್ಷ್ಯಕ್ಕೆ ಗುಂಡಿಗೆ ಬಿದ್ದು ಇಬ್ಬರು ಮಕ್ಕಳು ಬಲಿ!

ರಾಯಚೂರು ಜಿಲ್ಲೆ ಮಾನ್ವಿ ತಾ. ಬ್ಯಾಗವಾಟ ಗ್ರಾಮದಲ್ಲಿ ಪಂಚಾಯತ್ ನಿರ್ಲಕ್ಷ್ಯಕ್ಕೆ ಮಕ್ಕಳು ಬಲಿಯಾಗಿರುವ ಘಟನೆ ನಡೆದಿದೆ. ಮೃತರ ಮನೆಗೆ ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ‌ನೀಡಿ ಸ್ವಾಂತನ ಹೇಳಿದ್ದು, ಬಳಿಕ ಶಾಲೆಯಲ್ಲಿ ಸ್ಥಳೀಯ ‌ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ.

Two children died  negligence of manvi Grama Panchayath at Raichur gow
Author
First Published Jan 9, 2023, 2:39 PM IST

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಜ.9): ತಡೆಗೋಡೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ತೊಡಿದ ಗುಂಡಿಗೆ ಬಿದ್ದು ಇಬ್ಬರು ‌ಮಕ್ಕಳು ಸಾವನ್ನಪ್ಪಿದ ಘಟನೆ  ಜಿಲ್ಲೆ ಮಾನ್ವಿ ತಾ. ಬ್ಯಾಗವಾಟ ಗ್ರಾಮದಲ್ಲಿ ನಡೆದಿದೆ. ನಿತ್ಯದಂತೆ ಮನೆ ಪಕ್ಕದ ಶಾಲೆ ಬಳಿ ಮಕ್ಕಳು ಅಟವಾಡಲು ಹೋದಾಗ ಆಳವಾಗಿ ತೊಡಿದ ಗುಂಡಿ ಬಳಿ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದಾರೆ. ಮಕ್ಕಳು ರಾತ್ರಿಯಾದರೂ ಮನೆಗೆ ಬಾರದೇ ಇರುವುದರಿಂದ ಪೋಷಕರು ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆ ಪ್ರಕರಣ ಬಯಲಾಗಿದೆ.

ಯಾರದೋ ತಪ್ಪಿಗೆ ಬಡಜೀವಗಳು ಬಲಿ!
ರಾಯಚೂರು ಜಿಲ್ಲೆ ‌ಮಾನ್ವಿ ತಾಲೂಕಿನ ಬ್ಯಾಗವಾಟ ಗ್ರಾಮದ ಶಾಲೆಗೆ ಮಳೆನೀರು ಬರುತ್ತಿದೆ. ಆ ನೀರು ಶಾಲೆ ಆವೆಣಕ ನುಗ್ಗಬಾರದು ಅಂತ ತಡೆಗೋಡೆ ನಿರ್ಮಾಣಕ್ಕಾಗಿ 8 ರಿಂದ 10 ಅಡಿ ಆಳದ ಗುಂಡಿ ಅವೈಜ್ಞಾನಿಕವಾಗಿ ತೊಡಲಾಗಿತ್ತು. ಗುಂಡಿ ತೊಡಿದ ಗ್ರಾ. ಪಂ. ಪಿಡಿಒ ತಾರಕೇಶ್ವರಿ ಮತ್ತು ಗ್ರಾ.ಪಂ. ಅಧ್ಯಕ್ಷೆ ಬಸಲಿಂಗಮ್ಮ ಕಾಮಗಾರಿ ಶುರು ಮಾಡಬೇಕಾಗಿತ್ತು. ಆದ್ರೆ ಗುಂಡಿ ತೊಡಿದ ಜಾಗದಲ್ಲಿ ಇದ್ದ ನೀರಿನ ಪೈಪ್ ಒಡೆದು ಇಡೀ ಗುಂಡಿ ತುಂಬ ನೀರು ತುಂಬಿಕೊಂಡಿತ್ತು. ಆ ಕಾಮಗಾರಿಗಾಗಿ ತೊಡಿದ ಗುಂಡಿ ಸುತ್ತಮುತ್ತ ಯಾವುದೇ ಸೂಚನೆ ಫಲಕವೂ ಇರಲಿಲ್ಲ. ಹೀಗಾಗಿ ಚಿಕ್ಕ ‌- ಮಕ್ಕಳು ಆಟವಾಡಲು ಹೋಗಿ ನೀರು ಪಾಲಾಗಿ ಜೀವ ಬಿಟ್ಟಿದ್ದಾರೆ. 

ಮುಗಿಲು ಮುಟ್ಟಿದ ಪೋಷಕರ ಆಕ್ರಂದನ:
ಬ್ಯಾಗವಾಟ ಗ್ರಾಮದ ಶಾಲೆಯ ಬಳಿಯ ಗುಂಡಿಗೆ ಬಿದ್ದು ಅಜಯ್ (5), ಯಲ್ಲಾಲಿಂಗ(8) ಎಂಬ ಇಬ್ಬರು ಬಾಲಕರು ಬಲಿಯಾಗಿದ್ದಾರೆ. ಸುರೇಶ್ ಮತ್ತು ರಮೇಶ್ ಇಬ್ಬರು ಸಹೋದರ ಒಬ್ಬ ಮಕ್ಕಳು ಈಗ ನೀರು ಪಾಲಾಗಿದ್ದಾರೆ. ದುರಂತದ ಸಂಗತಿ ಅಂದ್ರೆ ಸುರೇಶ್ ದಂಪತಿಗೆ ಇಬ್ಬರು ಮಕ್ಕಳು, ಒಂದು ಗಂಡು ಮಗು ಮತ್ತೊಂದು ಹೆಣ್ಣು ಮಗುವಿತ್ತು. ಹೀಗಾಗಿ ಈ ದಂಪತಿ ಮಕ್ಕಳು ಸಾಕು ಅಂತ ಆಪರೇಷನ್ ಕೂಡ ಮಾಡಿಸಿದ್ರು. ಈ ದುರಂತದಿಂದ ಸುರೇಶ್ ದಂಪತಿಗೆ ಗಂಡು ಸಂತತಿಯೇ ಇಲ್ಲದಂತೆ ಆಗಿದೆ. ಇತ್ತ ರಮೇಶ್ ದಂಪತಿಗೂ ಇಬ್ಬರು ಮಕ್ಕಳು, ಚಿಕ್ಕ‌ಮಗನಾದ ಯಲ್ಲಾಲಿಂಗ ಈಗ ನೀರು ಪಾಲಾಗಿದ್ದಾನೆ. ಹೀಗಾಗಿ ಇಬ್ಬರು ಅಣ್ಣತಮ್ಮಂದಿರು ಒಂದೊಂದು ಗಂಡು ಮಕ್ಕಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. 

ಮೃತರ ಕುಟುಂಬಕ್ಕೆ ಸ್ವಾಂತನ ಹೇಳಿದ ಶಾಸಕರು ಮತ್ತು ಅಧಿಕಾರಿಗಳು:
ಮಾನ್ವಿ ತಾಲೂಕಿನ ಬ್ಯಾಗವಾಟ ಗ್ರಾಮದಲ್ಲಿ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದರು. ಈ  ಸುದ್ದಿ ತಿಳಿದು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಮಾನ್ವಿ ತಹಸೀಲ್ದಾರ್ ಶ್ರೀನಿವಾಸ್ ಹಾಗೂ ತಾ.ಪಂ. ಇಒ ಸೈಯದ್ ಪಟೇಲ್ ಸೇರಿ ಪಿಡಿಒ ಹಾಗೂ ಗ್ರಾಮಸ್ಥರು ಮೃತರ ಕುಟುಂಬಕ್ಕೆ ಭೇಟಿ ನೀಡಿದರು. ಕುಟುಂಬಸ್ಥರನ್ನ ಸ್ವಾಂತನ ಹೇಳಿದ ಶಾಸಕ ರಾಜಾ ವೆಂಕಟಪ್ಪ ನಾಯಕ ಮೃತರ ಕುಟುಂಬಸ್ಥರಿಗೆ ವೈಯುಕ್ತಿಕವಾಗಿ 10ಸಾವಿರ ರೂ. ನಗದು ನೀಡಿದರು. ಅಷ್ಟೇ ಅಲ್ಲದೇ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಕೊಡಿಸುವುದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿದರು. 

ಶಾಲೆಯಲ್ಲಿ ಶಾಸಕರ ನೇತೃತ್ವದಲ್ಲಿ ವಿಶೇಷ ಸಭೆ
ಬ್ಯಾಗವಾಟ ಗ್ರಾಮದ ಬಳಿ ತೊಡಿದ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದರು. ಈ ಸುದ್ದಿ ತಿಳಿದು ಬ್ಯಾಗವಾಟ ಗ್ರಾಮಕ್ಕೆ ಭೇಟಿ ನೀಡಿದ ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ ಮತ್ತು ಬಿಇಒ ಹಾಗೂ ತಾ.ಪಂ. ಇಒ ಹಾಗೂ ಪಿಡಿಒ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಎಡಿಸಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಫೋನ್ ಮಾಡಿ ಬಡ ಕುಟುಂಬಕ್ಕೆ ಪರಿಹಾರ ದೊರಕಿಸಿ ಕೊಡುವ ಬಗ್ಗೆ ಚರ್ಚೆ ಮಾಡಲಾಯ್ತು. ಆ ಬಳಿಕ ತಾ.ಪಂ. ಮತ್ತು ಗ್ರಾ.ಪಂ. ಅಡಿಯಲ್ಲಿ ಬರುವ ಮನೆಗಳನ್ನು ಮೃತ ಬಾಲಕರ ಕುಟುಂಬಸ್ಥರಿಗೆ ನೀಡುವ ಭರವಸೆ ನೀಡಿದ್ರು.

Bengaluru Crime: ನಿಲ್ಲಿಸಿದ್ದ ಕಾರಿಗೆ ರಾತ್ರಿ ಪೆಟ್ರೋಲ್‌ ಸುರಿದು ಬೆಂಕಿ ಇಟ್ಟದುರುಳರು

ಜೀವ ಹೋದ ಮೇಲೆ ಗುಂಡಿ ಮುಚ್ಚಿಸಿದ ಗ್ರಾ.ಪಂ. ಅಧಿಕಾರಿಗಳು
ಬ್ಯಾಗವಾಟ ಗ್ರಾಮದ ಪಬ್ಲಿಕ್ ಶಾಲೆ ಬಳಿ ನಿತ್ಯ ನೂರಾರು ಮಕ್ಕಳು ಓಡಾಟ ಮಾಡುತ್ತವೆ. ಶಾಲೆಯ ಆವರಣಕ್ಕೆ ಮಳೆ ನೀರು ಬರುತ್ತಿದೆ. ಆ ಮಳೆ ನೀರು ಬಾರದಂತೆ ತಡೆಯುವ ಉದ್ದೇಶದಿಂದ ಗುಂಡಿ ತೊಡಿ ಗೋಡೆ ನಿರ್ಮಾಣಕ್ಕೆ ಕಾಮಗಾರಿ ಶುರು ಮಾಡಬೇಕಾಗಿತ್ತು. ಆದ್ರೆ ಗ್ರಾ.ಪಂ. ಅಧ್ಯಕ್ಷೆ ಮತ್ತು ನಾಲ್ಕು ಜನ ಸದಸ್ಯರು ಸೇರಿ ತಡೆಗೋಡೆ ಕಾಮಗಾರಿ ಶುರು ಮಾಡಿದ್ರು‌. ಕಾಮಗಾರಿ ಪ್ಲಾನ್ ಪ್ರಕಾರ 8-10 ಅಡಿ ಆಳದ ಗುಂಡಿ ತೊಡಿದ್ರು‌. ಗುಂಡಿ ತೊಡುವ ವೇಳೆ ನೀರಿನ ಪೈಪ್ ಒಡೆದು 10ಅಡಿ ಆಳದ ಗುಂಡಿ ನೀರಿನಿಂದ ತುಂಬಿಕೊಂಡಿತ್ತು.

SHIVAMOGGA: ಭಜರಂಗದಳ ಕಾರ್ಯಕರ್ತನ ಮೇಲೆ ಮುಸ್ಲಿಂ ಯುವಕನಿಂದ ತಲ್ವಾರ್ ಅಟ್ಯಾಕ್, ಜಸ್ಟ್ ಮಿಸ್!

ಆ ಗುಂಡಿ ಬಳಿಯೇ ಮಕ್ಕಳು ಓಡಾಟದ ಕಾಲು ಜಾರಿಬಿದ್ದು ಮಕ್ಕಳು ಸಾವನ್ನಪಿದ್ದಾರೆ‌. ಮಕ್ಕಳ ಸಾವಿ‌ನ ಬಳಿಕ ಇಡೀ ಗ್ರಾಮದಲ್ಲಿ ಗುಂಡಿ ಬಗ್ಗೆ ಆಕ್ರೋಶ ಕೇಳಿಬರುತ್ತಿತ್ತು. ಹೀಗಾಗಿ ಈಗ ಗ್ರಾಮ ಪಂಚಾಯತ್ ಅಧಿಕಾರಿಗಳು ಎಚ್ಚತ್ತುಕೊಂಡ ಜೆಸಿಬಿ ಮುಖಾಂತರ ಎರಡು ಜೀವ ಬಲಿ ಪಡೆದ ಗುಂಡಿಗಳು ಮುಚ್ವಿಸಿದ್ದಾರೆ. ಒಟ್ಟಿನಲ್ಲಿ ಯಾರದೋ ಮಾಡಿದ ತಪ್ಪಿಗೆ ಎರಡು ಅಮಾಯಕ ಮಕ್ಕಳು ಬಲಿಯಾಗಿದ್ದಾರೆ.

Follow Us:
Download App:
  • android
  • ios