Asianet Suvarna News Asianet Suvarna News

Shivamogga: ಭಜರಂಗದಳ ಕಾರ್ಯಕರ್ತನ ಮೇಲೆ ಮುಸ್ಲಿಂ ಯುವಕನಿಂದ ತಲ್ವಾರ್ ಅಟ್ಯಾಕ್, ಜಸ್ಟ್ ಮಿಸ್!

ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ತಲ್ವಾರ್ ದಾಳಿ ನಡೆದಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.  ಬಜರಂಗದಳ ಕಾರ್ಯಕರ್ತ ಸುನೀಲ್ ಮೇಲೆ  ಮುಸ್ಲಿಂ ಯುವಕನಿಂದ ತಲ್ವಾರ್ ದಾಳಿ ನಡೆದಿದ್ದು, ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

Muslim youth Talwar Attack against Bajrang Dal Worker in Shivamogga gow
Author
First Published Jan 9, 2023, 12:38 PM IST

ಶಿವಮೊಗ್ಗ (ಜ.9): ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ತಲ್ವಾರ್ ದಾಳಿ ನಡೆದಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.  ಬಜರಂಗದಳ ಕಾರ್ಯಕರ್ತ ಸುನೀಲ್ ಮೇಲೆ  ಮುಸ್ಲಿಂ ಯುವಕನಿಂದ ತಲ್ವಾರ್ ದಾಳಿ ನಡೆದಿದ್ದು, ಕ್ಷಣ ಮಾತ್ರದಲ್ಲಿ ಸುನೀಲ್ ಬಚಾವಾಗಿದ್ದ. ಸಾಗರ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಹಾಡು ಹಾಗಲೇ ಈ ನಡೆದ ಘಟನೆ ನಡೆದಿದ್ದು, ಬೆಚ್ಚಿಬೀಳಿಸುಂತಿದೆ.

ಖಾಸಗಿ ಬಸ್ ನಿಲ್ದಾಣದ ಸಮೀಪದ ಲಾಡ್ಜ್ ಬಳಿ ನಿಂತಿದ್ದ ಮುಸ್ಲಿಂ ಯುವಕ ಸಮೀರ್ ಎಂಬಾತ ತಲ್ವಾರ್  ಬೀಸುತ್ತಿದ್ದಂತೆ ಬೈಕ್ ನಲ್ಲಿ ಬಂದಿದ್ದ ಸುನೀಲ್ ಬೈಕ್ ಚಲಾಯಿಸಿಕೊಂಡು ಪಾರಾಗಿದ್ದ. ಈ ಮೂಲಕ ಕೂದಲೆಳೆಯ ಅಂತರದಲ್ಲಿ ಸುನೀಲ್ ಪಾರಾಗಿದ್ದ. 

ನಿನ್ನೆ ಶಿವಮೊಗ್ಗದಲ್ಲಿ ನಡೆದಿದ್ದ ಶೌರ್ಯ ಪತ ಸಂಚಲನ ಕಾರ್ಯಕ್ರಮದಲ್ಲಿ ಸುನೀಲ್ ಭಾಗಿಯಾಗಿದ್ದ, ನಿನ್ನೆ ಕೂಡ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸುನೀಲ್ ನ ಮೇಲೆ ದಾಳಿ ನಡೆಸಲು ಸಮೀರ್ ಮುಂದಾಗಿದ್ದ ಎಂದು ತಿಳಿದುಬಂದಿದೆ. ಸಾಗರದ ನೆಹರು ನಗರದ ಸಮೀರ್ ಎಂಬಾತನಿಂದ ಈ ಕೃತ್ಯ ನಡೆದಿದೆ.  ಸಾಗರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Kodagu: ಹಿಂದೂ ಧರ್ಮ ವಿರೋಧಿ ಪುಸ್ತಕ ಮಾರಾಟ ಯತ್ನ: ಓರ್ವನ ಬಂಧನ

ಹಿಂದೂ ಕಾರ್ಯಕರ್ತರ ಆಕ್ರೋಶ: ಸುನೀಲ್ ಮೇಲಿನ ದಾಳಿ ಹಿನ್ನೆಲೆ, ಸಾಗರದ ನೆಹರೂ ನಗರದಲ್ಲಿರುವ ಆರೋಪಿ ಸಮೀರ್ ಮನೆ ಮುಂದೆ  ಹಿಂದೂಪರ ಸಂಘಟನೆಯ ಕಾರ್ಯಕರ್ತರು  ಜಾಮಾಯಿಸಿದ್ದಾರೆ. ಈ ವೇಳೆ ಮನೆಯಲ್ಲಿ ಸಮೀರ್ ಇರಲಿಲ್ಲ ಎನ್ನಲಾಗಿದೆ. ಮನೆಯೊಳಗೆ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು  ತಕ್ಷಣವೇ ಪೊಲೀಸರು   ತಡೆದು ವಾಪಸ್ ಕಳಿಸಿದ್ದಾರೆ.  ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಸಮೀರ್ ದಾಳಿ ನಡೆಸಿದ ಎನ್ನಲಾಗಿದೆ.

ಹಿಂದೂ ದೇವರಿಗೆ ಅವಮಾನ: ನಾಸ್ತಿಕ ನರೇಶ್‌ ಬಂಧನ

ಈ ಹಿಂದೆ ಹಿಜಾಬ್ ಗಲಾಟೆ ಸಂದರ್ಭದಲ್ಲಿ ಬಜರಂಗದಳ ಕಾರ್ಯಕರ್ತ ಸುನೀಲ್ ಅನ್ಯಕೋಮಿನ ಯುವಕರಿಗೆ ಹೊಡೆದು ಕಳಿಸಿದ್ದ ಎನ್ನಲಾಗಿದೆ.ಇದು ದ್ವೆಷಕ್ಕೆ ತಿರುಗಿದ್ದು ಇಂದು ಸಮೀರ್ ತಲ್ವಾರ್ ಬೀಸುವ ಮೂಲಕ ಸುನಿಲ್ ಮೇಲೆ ಅಟ್ಯಾಕ್ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

Follow Us:
Download App:
  • android
  • ios