ಬೀಗ ಹಾಕಿದ ಮನೆಯೊಳಗೆ ಕೊಲೆಯಾದ ಸ್ಥಿತಿಯಲ್ಲಿ ನಾಲ್ವರ ಶವ ಪತ್ತೆ

  • ಬೀಗ ಹಾಕಿದ ಮನೆಯೊಳಗೆ ಕೊಲೆ
  • ಕೊಳೆತ ಸ್ಥಿತಿಯಲ್ಲಿ ನಾಲ್ವರ ಶವ ಪತ್ತೆ
  • ಗುಜರಾತ್‌ನ ಅಹ್ಮದಾಬಾದ್‌ ನಗರದಲ್ಲಿ ಘಟನೆ
Two Children Among 4 Found Dead Inside Locked House In Gujarats Ahmedabad akb

ಅಹಮದಾಬಾದ್: ಬೀಗ ಹಾಕಿದ ಮನೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಇಬ್ಬರು ಮಹಿಳೆಯರು ಹಾಗೂ ಮಕ್ಕಳ ಶವ ಪತ್ತೆಯಾಗಿದೆ. 
ಗುಜರಾತ್‌ನ (Gujarat) ಅಹಮದಾಬಾದ್‌ನ (Ahmedabad) ವಿರಾಟ್‌ನಗರದಲ್ಲಿ (Virat Nagar) ಈ ಭಯಾನಕ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಬೀಗ ಹಾಕಿದ ಮನೆಯೊಳಗೆ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರ ಶವ ಪತ್ತೆಯಾಗಿದ್ದು, ಇವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದವರನ್ನು 37 ವರ್ಷದ ಸೋನಾಲ್‌ ಮರಾಠಿ (Sonal Marati), ಅವರ ಮಕ್ಕಳಾದ 15 ವರ್ಷದ ಪ್ರಗತಿ (Pragati), 17 ವರ್ಷದ ಗಣೇಶ್‌ (Ganesh) ಹಾಗೂ ಸೋನಾಲ್ ತಂದೆಯ ತಾಯಿ 75 ವರ್ಷದ ಸುಭದ್ರಾ (Subhadra) ಕೊಲೆಯಾದವರು.

ಓಧವ್ ಪ್ರದೇಶದ ದಿವ್ಯ ಪ್ರಭಾ ಹೌಸಿಂಗ್ ಸೊಸೈಟಿಯಲ್ಲಿರುವ (Divya Prabha Housing Socity) ಮನೆಯ ವಿವಿಧ ಕೋಣೆಗಳಲ್ಲಿ ಇಬ್ಬರು ಮಕ್ಕಳು ಮತ್ತು ವೃದ್ಧೆ ಮತ್ತು ಮಹಿಳೆಯ ಶವಗಳು ಪತ್ತೆಯಾಗಿದೆ. ಇವರ ಮೇಲೆ ಬಹುಶಃ 3 ರಿಂದ 4 ದಿನಗಳ ಹಿಂದೆ ಹರಿತವಾದ ಆಯುಧದಿಂದ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಅವರ ದೇಹಗಳು ಅರೆ ಕೊಳೆತ ಸ್ಥಿತಿಯಲ್ಲಿವೆ ಎಂದು ಪ್ರಾಥಮಿಕ ತನಿಖೆ ತೋರಿಸುತ್ತದೆ ಎಂದು  ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Raichur Love Case: ಪ್ರಿಯತಮೆ ಕೊಲೆ: ಕೃತ್ಯ ನಡೆದ 33 ದಿನಗಳ ಬಳಿಕ ಪಾಗಲ್ ಪ್ರೇಮಿಯ ಶವ ಪತ್ತೆ

ಪ್ರಸ್ತುತ ನಾಪತ್ತೆಯಾಗಿರುವ ಸೋನಾಲಿ ಅವರ ಪತಿ ವಿನೋದ್ ಮರಾಠಿಯೇ (Vinod Marati) ಪ್ರಕರಣದ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಈತ ರಸರಕು ಸಾಗಣೆ ರಿಕ್ಷಾದ ಚಾಲಕನಾಗಿದ್ದು, ಹಲವು ದಿನಗಳಿಂದ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಇತ್ತ ಹತ್ಯೆಯಾದ ಇಬ್ಬರು ಮಕ್ಕಳು ತಮ್ಮ ಬೋರ್ಡ್ ಪರೀಕ್ಷೆಗೆ(Board Exam) ಸಿದ್ಧತೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. 

ಕೊಲೆಯಾದವರಿಗೆ ಮೊದಲಿಗೆ ವಿಷ ನೀಡಲಾಗಿದೆ. ನಂತರ ಹರಿತವಾದ ಆಯುಧಗಳಿಂದ ಚುಚ್ಚಲಾಗಿದ್ದು, ನಂತರ ಅವರನ್ನು ಬೇರೆ ಬೇರೆ ಕೋಣೆಗಳಿಗೆ ಎಳೆದುಕೊಂಡು ಹೋಗಿ ಹಾಕಲಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಎಲ್ಲರಿಗೂ 40 ರಿಂದ 50 ಬಾರಿ ಹರಿತವಾದ ಆಯುದ್ಧಗಳಿಂದ ಚುಚ್ಚಲಾಗಿದೆ. ಈ ಕುಟುಂಬವೂ ಇತ್ತೀಚೆಗಷ್ಟೇ ನಿಕೊಲ್‌ನಿಂದ (Nikhol)ಈ ಪ್ರದೇಶಕ್ಕೆ ಸ್ಥಳಾಂತರಗೊಂಡಿತ್ತು. 

Mysuru: ಮಗು ಹುಟ್ಟುವ ವೇಳೆ ಅಡ್ಡ ಬಂದ ಜಾತಿ...ಗರ್ಭಿಣಿ ಪತ್ನಿ ಕೊಲೆ
ಕಳೆದ ಕೆಲವು ದಿನಗಳಿಂದ ನನ್ನ ಮಗಳು ನಾಪತ್ತೆಯಾಗಿದ್ದಾಳೆ ಮತ್ತು ಆಕೆಯ ಮನೆಗೆ ಹೊರಗಿನಿಂದ ಬೀಗ ಹಾಕಲಾಗಿದೆ ಎಂದು ಮೃತ ಮಹಿಳೆಯರಲ್ಲಿ ಒಬ್ಬರಾದ ಸೋನಾಲ್ಬೆನ್ ಮಾರ್ವಾಡಿ (37) ಅವರ ತಾಯಿ ಅಂಬು ಮರಾಠಿ (Ambu Marati) ಪೊಲೀಸರಿಗೆ ತಿಳಿಸಿದ ಮನೆ ಸಮೀಪ ಹೋಗಿ ನೋಡಿದ್ದಾರೆ. ಈ ವೇಳೆ ಮನೆಯ ಬಾಗಿಲಿಗೆ ಬೀಗ ಹಾಕಲಾಗಿದ್ದು, ಪೊಲೀಸರೊಬ್ಬರು ಕಿಟಕಿ ತೆರೆದು ಒಳಗೆ ನೋಡಿದಾಗ ಕೊಳೆತ ಮಾಂಸದಂತೆ ವಾಸನೆ ಬರಲು ಶುರುವಾಗಿದೆ. 

ನಂತರ ಅವರು ಒಧವಾ (Odhav) ಪೊಲೀಸ್ ಠಾಣೆಯಿಂದ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿದ್ದಾರೆ. ನಂತರ ಬೀಗ ಒಡೆದು ಒಳಗೆ ಪ್ರವೇಶಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಮನೆಯ ಬಾಗಿಲು ಮುರಿದು ಶವಗಳನ್ನು ಹೊರತೆಗೆದಿದ್ದು, ವಿವಿಧ ಕೊಠಡಿಗಳಲ್ಲಿ ಶವ ಬಿದ್ದಿರುವುದು ಪತ್ತೆಯಾಗಿದೆ. ಸೋನಾಲ್‌ಬೆನ್ ಅವರ ಪತಿ ನಾಪತ್ತೆಯಾಗಿದ್ದು, ನಾವು ಅವರನ್ನು ಕೊಲೆ ಮಾಡಿದ ಶಂಕಿತರಲ್ಲಿ ಒಬ್ಬರನ್ನಾಗಿ ಪರಿಗಣಿಸುತ್ತಿದ್ದೇವೆ. ಕೆಲವು ದಿನಗಳ ಹಿಂದೆ ಪತಿ ತಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ಕೊಲೆಯಾದ ಮಹಿಳೆ ಸೋನಾಲ್‌ಬೆನ್‌ ಅವರ ತಾಯಿ ನಮಗೆ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

Latest Videos
Follow Us:
Download App:
  • android
  • ios