Asianet Suvarna News Asianet Suvarna News

ಅಕ್ರಮ ಕ್ವಾರಿಯಲ್ಲಿ ಮುಳುಗಿ ಬಾಲಕರಿಬ್ಬರ ಸಾವು: ಕುಟುಂಬಸ್ಥರ ಆಕ್ರಂದನ

ಮಣ್ಣು ಗಣಿಗಾರಿಕೆಯಿಂದ ನಿರ್ಮಾಣವಾಗಿದ್ದ ಹೊಂಡ (ಕ್ವಾರಿ)ದಲ್ಲಿ ಬಿದ್ದು ಸಹಾಯಕ್ಕಾಗಿ ಯಾಚಿಸುತ್ತಿದ್ದ ಬಾಲಕ ಹಾಗೂ ಆತನ ತಾಯಿಯನ್ನು ರಕ್ಷಿಸಲು ನೀರಿಗೆ ಧುಮುಕಿದ್ದ ಬಾಲಕರಿಬ್ಬರು ಮೃತಪಟ್ಟ ದಾರುಣ ಘಟನೆ ನಗರದ ಹೊರವಲಯದ ರೈಲ್ವೆ ಹಳಿಯ ಪಕ್ಕದ ರೆಹಮತ್‌ ನಗರದಲ್ಲಿ ಮಂಗಳವಾರ ಸಂಜೆ ನಡೆದಿದೆ.

Two boys drown in pit at gadag district gvd
Author
First Published Aug 16, 2023, 12:23 PM IST

ಗದಗ (ಆ.16): ಮಣ್ಣು ಗಣಿಗಾರಿಕೆಯಿಂದ ನಿರ್ಮಾಣವಾಗಿದ್ದ ಹೊಂಡ (ಕ್ವಾರಿ)ದಲ್ಲಿ ಬಿದ್ದು ಸಹಾಯಕ್ಕಾಗಿ ಯಾಚಿಸುತ್ತಿದ್ದ ಬಾಲಕ ಹಾಗೂ ಆತನ ತಾಯಿಯನ್ನು ರಕ್ಷಿಸಲು ನೀರಿಗೆ ಧುಮುಕಿದ್ದ ಬಾಲಕರಿಬ್ಬರು ಮೃತಪಟ್ಟ ದಾರುಣ ಘಟನೆ ನಗರದ ಹೊರವಲಯದ ರೈಲ್ವೆ ಹಳಿಯ ಪಕ್ಕದ ರೆಹಮತ್‌ ನಗರದಲ್ಲಿ ಮಂಗಳವಾರ ಸಂಜೆ ನಡೆದಿದೆ. ಮಹ್ಮದ್‌ ಅಮನ್‌ (12), ಸಂತೋಷ ಕುಂಬಾರ (14) ಮೃತಪಟ್ಟ ದುರ್ದೈವಿ ಬಾಲಕರು.

ಶಾಹಿನ್‌ ಎಂಬ ಮಹಿಳೆ ತನ್ನ ಮಗ ಮಹ್ಮದ್‌ ಆದಿಲ್‌ ಹುಬ್ಬಳ್ಳಿ ಎಂಬಾತನ ಜೊತೆ ಜಾನುವಾರು ಮೈ ತೊಳೆಯಲು ಈ ಕ್ವಾರಿಗೆ ಹೋಗಿದ್ದಳು. ಆ ಸಂದರ್ಭದಲ್ಲಿ ಆಕಳ ಕರುವೊಂದು ಬಾಲಕನ ಮೇಲೆ ಎರಗಿದಂತೆ ಮಾಡಿದ್ದು, ಭಯಗೊಂಡ ಬಾಲಕ ನೀರಿಗೆ ಬಿದ್ದಿದ್ದಾನೆ. ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ತಾಯಿ ಶಾಹೀನ್‌ ಸಹ ನೀರಿಗೆ ಧುಮುಕಿದ್ದಾರೆ. ಆದರೆ ಅವರಿಗೆ ಈಜಲು ಬರದೇ ಒದ್ದಾಡುತ್ತಾರೆ. ಇದನ್ನು ನೋಡಿ ಅಲ್ಲಿಯೇ ಇದ್ದ ಮಹ್ಮದ್‌ ಅಮೀನ್‌ ಮತ್ತು ಸಂತೋಷ ಕುಂಬಾರ ಸಹ ನೀರಿಗೆ ಧುಮುಕಿದ್ದಾರೆ.

ಬೆಳಗಾವಿ ವಿಭಜಿಸಿ ಮೂರು ಜಿಲ್ಲೆ ಮಾಡಲು ಕೋರಿದ್ದೇವೆ: ಸಚಿವ ಸತೀಶ್‌ ಜಾರಕಿಹೊಳಿ

ಆದರೆ ನಾಲ್ವರಿಗೂ ಈಜು ಬಾರದ ಹಿನ್ನೆಲೆಯಲ್ಲಿ ಅವರೆಲ್ಲಾ ಮುಳುತ್ತಿರುವುದನ್ನು ಗಮನಿಸಿದ ರಾಜಾಸಿಂಗ್‌ ಎನ್ನುವ ವ್ಯಕ್ತಿ ಕೂಡಲೇ ಹೊಂಡಕ್ಕೆ ಹಾರಿ ಮಹಿಳೆ ಮತ್ತು ಕೈಗೆ ಸಿಕ್ಕ ಬಾಲಕ ಮಹ್ಮದ್‌ ಆದಿಲ್‌ನನ್ನು ಮೇಲೆತ್ತಿದ್ದಾನೆ. ಇನ್ನಿಬ್ಬರ ಬಾಲಕರನ್ನು ಮೇಲೆತ್ತಲೂ ಪ್ರಯತ್ನಿಸಿದರೂ ಸಾಧ್ಯವಾಗದ ಪರಿಣಾಮ ಸಂತೋಷ ಮತ್ತು ಅಮನ್‌ ಸಾವನ್ನಪ್ಪಿದ್ದಾರೆ. ರಾಜಾಸಿಂಗ್‌ ಅವರ ಸಮಯ ಪ್ರಜ್ಞೆಯಿಂದಾಗಿ ಇಬ್ಬರ ಪ್ರಾಣ ಉಳಿದಿದೆ. 

ಆದರೆ ವಿಧಿಯಾಟ ಇನ್ನಿಬ್ಬರು ಮಕ್ಕಳು ಮುಳುಗಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿದ್ದು, ಎಸ್ಪಿ ಬಿ.ಎಸ್‌. ನೇಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾತ್ರಿ ವೇಳೆಗೆ ಸಂತೋಷ್ ಕುಂಬಾರ್ (14) ಮೃತದೇಹ ಪತ್ತೆಯಾಗಿದ್ದು, ಬೆಳಗ್ಗೆ ವೇಳೆಗೆ ಮೊಹಮ್ಮದ್ ಅಮನ್ ಮೃತ ದೇಹ ಪತ್ತೆಯಾಗಿದೆ. 

ಭ್ರಷ್ಟಾಚಾರದ ಬಗ್ಗೆ ಮಾತಾಡುವ ನೈತಿಕತೆ ಬಿಜೆಪಿಗಿಲ್ಲ: ಶೆಟ್ಟರ್‌ ಕಿಡಿ

ಎಚ್ಕೆ ಸಾಂತ್ವನ: ಘಟನಾ ಸ್ಥಳಕ್ಕೆ ತಕ್ಷಣವೇ ಧಾವಿಸಿ ಬಂದ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಕಾರ್ಯಾಚರಣೆ ವೀಕ್ಷಿಸಿದರು. ಈ ವೇಳೆ ಸ್ಥಳದಲ್ಲಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಯಾರು ಎಷ್ಟೇ ಸಂತೈಸಿದರು ಪೋಷಕರ ಆಕ್ರಂದನ ಮಾತ್ರ ಕಡಿಮೆಯಾಗಿಲ್ಲ. ಗದಗ ಬೆಟಗೇರಿ ಅವಳಿ ನಗರ ಹಾಗೂ ಜಿಲ್ಲೆಯ ಹಲವಾರು ಭಾಗಗಳಲ್ಲಿ ಈ ರೀತಿಯ ಅಕ್ರಮ ಮಣ್ಣು ಗಣಿಗಾರಿಕೆಯ ಗುಂಡಿಗಳಿದ್ದು ಅವುಗಳನ್ನು ಶಾಶ್ವತವಾಗಿ ಮುಚ್ಚಿಸಿ, ಅಮಾಯಕ ಬಡ ಮಕ್ಕಳ ಜೀವ ಉಳಿಸಬೇಕು ಎನ್ನುವ ಮಾತುಗಳು ಅಲ್ಲಿ ಕೇಳಿ ಬಂದವು.

Follow Us:
Download App:
  • android
  • ios