ಆಂಧ್ರಪ್ರದೇಶ ಮೂಲದ ಟಿ.ನಾಗೇಂದ್ರ ಹಾಗೂ ಕೆ.ರಾಮರಾಜ ಅಲಿಯಾಸ್‌ ವಿಜಯ ಬಂಧಿತರಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಇರ್ಫಾನ್‌ ಪತ್ತೆಗೆ ತನಿಖೆ ಮುಂದುವರಿದಿದೆ.

ಬೆಂಗಳೂರು(ಸೆ.18): ಇತ್ತೀಚಿಗೆ ಅಂಬಾಭವಾನಿ ಲೇಔಟ್‌ನಲ್ಲಿ ನಡೆದಿದ್ದ ನಿವೃತ್ತ ಶಿಕ್ಷಕಿ ಎಸ್‌.ಪ್ರಸನ್ನಕುಮಾರಿ (68) ಕೊಲೆ ಪ್ರಕರಣ ಸಂಬಂಧ ಮೃತರ ಮನೆ ಸಮೀಪದ ನಿವಾಸಿ ಸೇರಿದಂತೆ ಇಬ್ಬರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಟಿ.ನಾಗೇಂದ್ರ ಹಾಗೂ ಕೆ.ರಾಮರಾಜ ಅಲಿಯಾಸ್‌ ವಿಜಯ ಬಂಧಿತರಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಇರ್ಫಾನ್‌ ಪತ್ತೆಗೆ ತನಿಖೆ ಮುಂದುವರಿದಿದೆ. ಬಂಧಿತರಿಂದ 68 ಗ್ರಾಂ ಚಿನ್ನಾಭರಣ, ಬೈಕ್‌ ಹಾಗೂ ಮೊಬೈಲ್‌ ಜಪ್ತಿ ಮಾಡಲಾಗಿದೆ. ಈ ಪ್ರಕರಣದ ತನಿಖೆ ನಡೆಸಿದ ಯಲಹಂಕ ಉಪ ವಿಭಾಗದ ಎಸಿಪಿ ಆರ್‌.ಮಂಜುನಾಥ್‌ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಹಂತಕರನ್ನು ಸೆರೆ ಹಿಡಿಯುವಲ್ಲಿ ಯಶಸ್ಸು ಕಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಗುವಿನೊಂದಿಗೆ ಮಲಪ್ರಭಾ ನದಿಗೆ ಹಾರಿದ ತಾಯಿ, ಉತ್ತರ ಕನ್ನಡದಲ್ಲಿ ಲಾರಿ ಕಂದಕಕ್ಕೆ ಬಿದ್ದು 2 ಸಾವು

ಹಣದಾಸೆಗೆ ಶಿಕ್ಷಕಿ ಕೊಂದ್ರು:

ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ನಾಗೇಂದ್ರ, 6 ವರ್ಷಗಳಿಂದ ನಗರದಲ್ಲಿ ವಿದ್ಯಾರಣ್ಯಪುರ ಸಮೀಪದ ಅಂಬಾಭವಾನಿ ಲೇಔಟ್‌ನಲ್ಲಿ ನೆಲೆಸಿದ್ದ. ರಾಜ್ಯದಲ್ಲಿ ಸುಗುಣ ಕೋಳಿ ಸಾಕಾಣಿಕೆ ಕೇಂದ್ರಗಳಿಗೆ ಆಹಾರ ಪೂರೈಕೆ ಗುತ್ತಿಗೆ ಪಡೆದಿದ್ದ ನಾಗೇಂದ್ರ, ಲಾರಿ ಇಟ್ಟುಕೊಂಡು ವಹಿವಾಟು ನಡೆಸುತ್ತಿದ್ದ. ಬಹಳ ದಿನಗಳಿಂದ ಆತನಿಗೆ ಆಂಧ್ರಪ್ರದೇಶದ ಜೂಜುಕೋರ ರಾಮರಾಜ ಹಾಗೂ ಇರ್ಫಾನ್‌ ಸ್ನೇಹಿತರಾಗಿದ್ದು, ಹಣದಾಸೆ ತೋರಿಸಿ ಗೆಳೆಯರನ್ನು ಹತ್ಯೆ ಕೃತ್ಯಕ್ಕೆ ನಾಗೇಂದ್ರ ಬಳಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮೃತ ಪ್ರಸನ್ನ ಕುಮಾರಿ ಅವರು ಸಹ ಮೂೂಲತಃ ಆಂಧ್ರಪ್ರದೇಶದ ವಿಜಯವಾಡದವರಾಗಿದ್ದು, ಕೇಂದ್ರ ಸರ್ಕಾರದ ನವೋದಯ ವಸತಿ ಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕೆಲ ವರ್ಷ ಅವರು ಮೈಸೂರಿನಲ್ಲಿ ನೆಲೆಸಿದ್ದರು. ಪ್ರಸನ್ನಕುಮಾರಿ ದಂಪತಿಗೆ ಮಕ್ಕಳಿರಲಿಲ್ಲ. ಹೀಗಾಗಿ ಪತಿ ನಿಧನರಾದ ಬಳಿಕ ಮೈಸೂರು ತೊರೆದು ಬೆಂಗಳೂರಿಗೆ ಬಂದ ಅವರು, ತಮ್ಮ ಸಹೋದ್ಯೋಗಿಗೆ ಸೇರಿದ ಮನೆಯಲ್ಲಿ ಬಾಡಿಗೆ ಪಡೆದು ಏಕಾಂಗಿಯಾಗಿ ವಾಸವಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರ ಮನೆಗೆ ಪೊಲೀಸರು ಬಂದಾಗ ಅಲ್ಲೇ ಇದ್ದ ಹಂತಕ

ಹತ್ಯೆಗೂ ಎರಡು ದಿನಗಳ ಮುನ್ನ ಆಂಧ್ರಪ್ರದೇಶದಿಂದ ನಗರಕ್ಕೆ ರಾಮರಾಜ್‌ ಹಾಗೂ ಇರ್ಫಾನ್‌ರನ್ನು ಕರೆಸಿಕೊಂಡ ನಾಗೇಂದ್ರ, ಬಳಿಕ ವಿದ್ಯಾರಣ್ಯಪುರ ಸಮೀಪದ ಲಾಡ್ಜ್‌ನಲ್ಲಿ ಇರಿಸಿದ್ದ. ಪೂರ್ವನಿಯೋಜಿತ ಸಂಚಿನಂತೆ ಸೆ.8 ರಂದು ಮಧ್ಯಾಹ್ನ ರಾಮರಾಜ್‌ ಹಾಗೂ ಇರ್ಫಾನ್‌, ಪ್ರಸನ್ನಕುಮಾರಿ ಅವರ ಮನೆಗೆ ತೆರಳಿ ಕೈ-ಕಾಲು ಕಟ್ಟಿಹಾಕಿ ಬಾಯಿಗೆ ಬಟ್ಟೆತುರುಕಿ ಕೊಂದಿದ್ದಾರೆ. ನಂತರ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

Bengaluru Crime News: ಸೀರಿಯಲ್​ ಡ್ರಗ್ಸ್ ಪೆಡ್ಲರ್ ₹1.60 ಕೋಟಿ ಪ್ರಾಪರ್ಟಿ ಸೀಝ್‌

ಈ ಕೃತ್ಯದ ತನಿಖೆ ಆರಂಭಿಸಿದ ಪೊಲೀಸರಿಗೆ ಘಟನಾ ಸ್ಥಳವನ್ನು ಪರಿಶೀಲಿಸಿದಾಗ ಪರಿಚಿತರೇ ಕೈವಾಡವಿರುವುದು ಬಲವಾದ ಗುಮಾನಿ ವ್ಯಕ್ತವಾಗಿದೆ. ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಒಂದು ಕ್ಯಾಮರಾದಲ್ಲಿ ಆರೋಪಿಗಳು, ಮೃತರ ಮನೆಗೆ ತೆರಳುವ ದೃಶ್ಯ ಪತ್ತೆಯಾಯಿತು. ಈ ಸುಳಿವು ಆಧರಿಸಿ ಬೆನ್ನಹತ್ತಿದ್ದಾಗ ಹಂತಕರು ಬಲೆಗೆ ಬಿದ್ದರು. ಹತ್ಯೆ ನಡೆದ ಬಳಿಕ ರಾಮರಾಜ್‌ ಹಾಗೂ ಇರ್ಫಾನ್‌ ಆಂಧ್ರಕ್ಕೆ ಮರಳಿದರೆ, ನಾಗೇಂದ್ರ ಇಲ್ಲೇ ಇದ್ದು ತನ್ನ ಮೇಲೆ ಅನುಮಾನಬಾರದಂತೆ ನೋಡಿಕೊಂಡಿದ್ದ. ತನ್ನ ಮನೆಯ ಕಿಟಕಿಯಿಂದ ಇಣುಕಿದರೆ ಕಾಣುವ ಮೃತ ಮನೆಯಲ್ಲಾಗುವ ಬೆಳವಣಿಗೆಳ ಮೇಲೆ ಆತ ನಿಗಾವಹಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ತ್ರೀಲೋಲ ನಾಗ

ಆರೋಪಿ ನಾಗೇಂದ್ರ ಸ್ತ್ರೀಲೋಲನಾಗಿದ್ದು, ಹಲವು ಮಹಿಳೆಯರು ಆತನ ಸಂಪರ್ಕದಲ್ಲಿದ್ದರು. ಎರಡು ಮದುವೆಯಾಗಿ ಪತ್ನಿಯರಿಂದ ದೂರವಾಗಿದ್ದ ಆತ, ಮೃತರ ಮನೆ ಎರಡನೇ ಮಹಡಿಯಲ್ಲಿ ನೆಲೆಸಿರುವ ವಿಚ್ಛೇದಿತ ಮಹಿಳೆ ಜತೆ ಗೆಳೆತನ ಹೊಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.