ಇಬ್ಬರೂ ಆರೋಪಿಗಳು ಬಾಲಕಿಯ ಜೊತೆ ಬಹಳ ಸಲುಗೆಯಿಂದ ಇದ್ದರು. ಅದೇ ಸಲುಗೆಯಿಂದ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಕೇಸ್ ನೀಡಲು ಯುವತಿಯ ಪೋಷಕರು ಮುಂದಾಗಿಲ್ಲ. ಹೀಗಾಗಿ ಸ್ವತಃ ಕೇಸ್ ದಾಖಲಿಸಿಕೊಡು ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಯಾದಗಿರಿ ಮಹಿಳಾ ಪೋಲಿಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.  

ಯಾದಗಿರಿ(ಜು.17): 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಕಾಮುಕರಿಬ್ಬರು ಅತ್ಯಾಚಾರವೆಸಗಿದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗ್ರಾಮವೊಂದರಲ್ಲಿ ಇಂದು(ಬುಧವಾರ) ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದೇ ಗ್ರಾಮದ ರಾಮರೆಡ್ಡಿ, ಸಂಜೀವಗೌಡ ಎಂಬ ಇಬ್ಬರು ಕಾಮುಕರು ಸೇರಿ ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಬಾಲಕಿ ಬಹಿರ್ದೆಸೆಗಾಗಿ ಬಯಲಿಗೆ ಹೋಗಿದ್ದಳು. ಅದೇ ಗ್ರಾಮದಲ್ಲಿ ಮನೆಯೊಂದು ಖಾಲಿ ಇತ್ತು, ಯಾರು ಇಲ್ಲದಾಗ ಬಾಲಕಿ ಮೇಲೆ ಆರೋಪಿಗಳು ರೇಪ್‌ ಮಾಡಿದ್ದಾರೆ. 

ಬೆಳಗಾವಿ: ಹಿಂದೂ ಬುದ್ಧಿಮಾಂದ್ಯೆ ಯುವತಿ ಮೇಲೆ ಅನ್ಯಕೋಮಿನ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಯತ್ನ