ಘಟನೆ ಸಂಬಂಧ ಮೃತನ ಸಂಬಂಧಿಕರಾದ ಸೈಯದ್‌ ಫೈಸಲ್‌ ಹಾಗೂ ಸೈಯದ್‌ ಅಸ್ಮತ್‌ರನ್ನು ವಶಕ್ಕೆ ಪಡೆಯಲಾಗಿದೆ 

ಬೆಂಗಳೂರು(ನ.29): ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಆತನ ಸಂಬಂಧಿಕರು ಹಲ್ಲೆ ನಡೆಸಿ ಕೊಂದಿರುವ ಘಟನೆ ಜೆ.ಜೆ.ನಗರ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ಜೆ.ಜೆ.ನಗರದ ನಿವಾಸಿ ಇಮಾಯೂನ್‌ ಮೃತ ದುರ್ದೈವಿ. ಈ ಘಟನೆಯಲ್ಲಿ ಆತನ ಸಂಬಂಧಿ ಜಾವೀದ್‌ಗೂ ಪೆಟ್ಟಾಗಿದೆ. ಈ ಘಟನೆ ಸಂಬಂಧ ಮೃತನ ಸಂಬಂಧಿಕರಾದ ಸೈಯದ್‌ ಫೈಸಲ್‌ ಹಾಗೂ ಸೈಯದ್‌ ಅಸ್ಮತ್‌ರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಿರುಕುಳ ನೀಡ್ತಿದ್ದ ಮಗನ ಕೊಲೆಗೈದು ಪೊಲೀಸರಿಗೆ ಶರಣಾದ ತಂದೆ 

ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ಜಾವೀದ್‌ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಈ ಹಿನ್ನಲೆಯಲ್ಲಿ ದಂಪತಿ ಮಧ್ಯೆ ರಾಜಿ ಸಂಧಾನ ಸಲುವಾಗಿ ಜಾವೀದ್‌ಗೆ ಮನೆಗೆ ಆತನ ಪತ್ನಿ ಮುಸ್ಕಾನ್‌ ಸೋದರರು ಬಂದಿದ್ದರು. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಇಮಾಯೂನ್‌ ಮೇಲೆ ಸೈಯದ್‌ ಫೈಸಲ್‌ ಹಲ್ಲೆ ನಡೆಸಿದ್ದಾನೆ. ಎದೆಗೆ ಗಂಭೀರ ಪೆಟ್ಟಾಗಿ ಆತ ಕುಸಿದು ಬಿದ್ದಿದ್ದಾನೆ. ಕೂಡಲೇ ಇಮಾಯೂನ್‌ನನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಮಾರ್ಗ ಮಧ್ಯೆ ಆತ ಕೊನೆಯುಸಿರೆಳೆದಿದ್ದಾನೆ. ಇದೇ ವೇಳೆ ಜಾವೀದ್‌ ಮೇಲೆ ಆತನ ಪತ್ನಿಯ ಸೋದರರು ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಜೆ.ಜೆ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.