Asianet Suvarna News Asianet Suvarna News

ಕಿರುಕುಳ ನೀಡ್ತಿದ್ದ ಮಗನ ಕೊಲೆಗೈದು ಪೊಲೀಸರಿಗೆ ಶರಣಾದ ತಂದೆ 

 ಪ್ರತಿ ನಿತ್ಯ ತಂದೆ ತಾಯಿಗೆ ಕುಡುಕ ಮಗ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ 65ರ ವಯೋವೃದ್ಧ ಮಗನನ್ನೇ ಡಂಬಲ್ ನಿಂದ ಬೀಕರವಾಗಿ ಕೊಲೆಗೈದ ಘಟನೆ ಬೆಂಗಳೂರು ಗ್ರಾಮಾಂತರದಲ್ಲಿ ನಡೆದಿದೆ.

Son who was harassing drunk  father killed his son and surrendered to the police rav
Author
First Published Nov 26, 2022, 9:36 AM IST

 ಹೊಸಕೋಟೆ (ನ.26):  ಪ್ರತಿ ನಿತ್ಯ ತಂದೆ ತಾಯಿಗೆ ಕುಡುಕ ಮಗ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ 65ರ ವಯೋವೃದ್ಧ ಮಗನನ್ನೇ ಡಂಬಲ್ ನಿಂದ ಬೀಕರವಾಗಿ ಕೊಲೆಗೈದ ಘಟನೆ ಬೆಂಗಳೂರು ಗ್ರಾಮಾಂತರದಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ(Hoskote) ತಾಲೂಕು ಅನುಗೊಂಡನಹಳ್ಳಿ(anugondanahalli) ಪೊಲೀಸ್ ಠಾಣೆ ವ್ಯಾಪ್ತಿ ದೇವಾಲಪುರ(Devalapur)ದಲ್ಲಿ ಮುನಿಸ್ವಾಮಿ(Muniswamy) ಎಂಬ ತಂದೆ ಕಿರುಕುಳ ನೀಡ್ತಿದ್ದತ್ಯಾಗರಾಜ(Tyagaraj) ಎಂಬ ಮಗನನ್ನು ಕೊಲೆ(Murder) ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.

ಪ್ರೇಮಪಾಶದಲ್ಲಿ ಮೃಗನಾದ ಮಗ, ಗರ್ಲ್‌ಫ್ರೆಂಡ್‌ ಧ್ವನಿ ಕೇಳದಾಗ ತಂದೆಯನ್ನೇ ಕೊಂದ!

ತ್ಯಾಗರಾಜು(38) ಎಂಬಾತ ಪ್ರತಿ ದಿನ ಕುಡಿದು ಬಂದು ತಂದೆ ಮುನಿಸ್ವಾಮಿ(65) ಮತ್ತು ತಾಯಿ ಜತೆಗೆ ಜಗಳ ತೆಗೆಯುತ್ತಿದ್ದ. ಕುಡಿಯಲು ದುಡ್ಡು ಕೊಡದಿದ್ದರೆ ಹಲ್ಲೆ ಮಾಡುತ್ತಿದ್ದ. ಕೂಲಿ ಮಾಡಿ ಜೀವನ‌ ಸಾಗಿಸುತ್ತಿದ್ದ  ಮುನಿಸ್ವಾಮಿ ದಂಪತಿ ಮಗನ‌ ಕಿರುಕುಳದಿಂದ ಬೇಸತ್ತು, ಮಗಳ ಮನೆ ಸೇರಿಕೊಂಡಿದ್ದರು. ಅಲ್ಲಿಗೂ ಬಂದು ಆಶ್ರಯ ಪಡೆದಿದ್ದ ತಂದೆ ಮೇಲೆಯೇ ಹಣಕ್ಕಾಗಿ ಹಲ್ಲೆಗೆ ಮುಂದಾಗಿದ್ದ ಮಗ ತ್ಯಾಗರಾಜು.

Bengaluru Crime News : ಅಂಗವಿಕಲ ಮಗನ ಸಂಪಿಗೆ ಎಸೆದು ಕೊಂದು ತಂದೆ ಆತ್ಮಹತ್ಯೆ

ಎಲ್ಲಾ ಕಡೆ ಮಗನ ಕಿರುಕುಳದಿಂದ ಬೇಸರಗೊಂಡಿದ್ದ ತಂದೆ ಜಿಮ್ ನಲ್ಲಿ ಬಳಸುವ ಡಂಬಲ್ ನಿಂದ ಮಗನ ತಲೆಗೆ ಭೀಕರವಾಗಿ ಚಚ್ಚಿ ಕೊಲೆ ಮಾಡಿದ್ದಾನೆ. ನಂತರ ಅನುಗೊಂಡನಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಸ್ಥಳಕ್ಕೆ ಬೇಟಿ ನೀಡಿದ ಅಡಿಶನಲ್ ಎಸ್ಪಿ ML ಪುರುಷೋತ್ತಮ ಪರೀಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಸಂಗ್ತಹಿಸಿದ್ದಾರೆ. ಈ ಘಟನೆ ಸಂಬಂಧ ಅನುಗೊಂಡನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.

Follow Us:
Download App:
  • android
  • ios