ಬೆಳಗಾವಿ: ಮನೆ, ಕಾರು ಕಳವು ಪ್ರಕರಣ: ಮತ್ತಿಬ್ಬರ ಬಂಧನ, 3 ಲಕ್ಷ ಮೌಲ್ಯದ ಸ್ವತ್ತು ವಶ
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 3 ಮನೆಗಳ್ಳತನ ಮತ್ತು ಒಂದು ಸುಲಿಗೆ ಹಾಗೂ ಎಪಿಎಂಸಿ, ಉದ್ಯಬಾಗ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಸುಲಿಗೆ ಸೇರಿದಂತೆ ಒಟ್ಟು 6 ಪ್ರರಕಣಗಳಲ್ಲಿ ಭಾಗಿಯಾದ ಬಂಧಿತ ಆರೋಪಿಗಳು.
ಬೆಳಗಾವಿ(ಜ.31): ಸಮೀಪದ ಮಚ್ಚೆ ಗ್ರಾಮದ ಲಕ್ಷ್ಮೀನಗರದಲ್ಲಿ ಮನೆ ಮತ್ತು ಕಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಇಬ್ಬರನ್ನು ಪೊಲೀಸರು ಬಂಧಿಸಿ ಒಟ್ಟು 3 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ಮಚ್ಚೆ ಗ್ರಾಮದ ಇಂಡಸ್ಟ್ರಿಯಲ್ ಪ್ರದೇಶದ ಶಿವನಾಗಯ್ಯ ಮುತ್ತಯ್ಯ ಉಮಚಗಿಮಠ (26) ಹಾಗೂ ಕುರುಬರಗಲ್ಲಿಯ ಆಕಾಶ ಮಧುಕರ ಗಾಂವಕರ (22) ಬಂಧಿತರು. 2022 ನ.2ರಂದು ಮಚ್ಚೆ ಗ್ರಾಮದ ಲಕ್ಷ್ಮೀನಗರದಲ್ಲಿ ಮನೆ ಮತ್ತು ಕಾರು ಕಳ್ಳತವಾಗಿರುವ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಜಾಡುಹಿಡಿದ ಪೊಲೀಸರು ಮೊದಲಿಗೆ ಕೃಷ್ಣಾ ಉರ್ಫ್ ರಾಜು ಅಶೋಕ ರಾಮನ್ನವರ ಹಾಗೂ ನಾಗರಾಜ ಅಲಿಯಾಸ್ ಅಪ್ಪು ಸಂಗಪ್ಪ ಬುದ್ಲಿ ಎಂಬುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಶಿವನಾಗಯ್ಯ ಉಮಚಗಿಮಠ ಹಾಗೂ ಆಕಾಶ ಗಾಂವಕರ ಎಂಬುವರ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಪೊಲೀಸರು ಇವರಿಬ್ಬರನ್ನೂ ಬಂಧಿಸಿದ್ದಾರೆ.
Bengaluru: ಜಡ್ಜ್ ಮನೆಯನ್ನೂ ಬಿಡದ ಖದೀಮರು: 60ಕ್ಕೂ ಹೆಚ್ಚು ಬಾರಿ ಕಳ್ಳತನ ಮಾಡಿದ್ದ ಮನೆಗಳ್ಳರು ಅರೆಸ್ಟ್!
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 3 ಮನೆಗಳ್ಳತನ ಮತ್ತು ಒಂದು ಸುಲಿಗೆ ಹಾಗೂ ಎಪಿಎಂಸಿ, ಉದ್ಯಬಾಗ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಸುಲಿಗೆ ಸೇರಿದಂತೆ ಒಟ್ಟು 6 ಪ್ರರಕಣಗಳಲ್ಲಿ ಭಾಗಿಯಾಗಿದ್ದಾರೆ. ಬಂಧಿತ ಆರೋಪಿಗಳು ಸುಲಿಗೆ ಮತ್ತು ಕಳ್ಳತನ ಮಾಡಿ ತಮ್ಮ ಬಳಿ ಇಟ್ಟುಕೊಂಡಿದ್ದ .3 ಲಕ್ಷ ಮೌಲ್ಯದ ಬಂಗಾರ ಆಭರಣ, ಕಂಪ್ಯುಟರ ಮೊನಿಟರ್ ಹಾಗೂ ಟಿವಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.