Asianet Suvarna News Asianet Suvarna News

ಬಿ.ಎ​ಲ್‌.ಸಂತೋಷ್‌ ಹೆಸರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ವಂಚನೆ

ಬಂಧಿತರಿಂದ ಐದು ಮೊಬೈಲ್‌, ಹತ್ತಕ್ಕೂ ಹೆಚ್ಚು ಸಿಮ್‌​ಕಾರ್ಡ್‌, ಬ್ಯಾಂಕ್‌ ಪಾಸ್‌ ಪುಸ್ತ​ಕ​ಗ​ಳನ್ನು ವಶ| ಉತ್ತರ ಪ್ರದೇಶ ಮೂಲದ ಆರೋಪಿಗಳು| ಮಾಸ್ಟರ್‌ ಮೈಂಡ್‌ ಲಿಯಾ​ಖತ್‌ ಸೇರಿ ನಾಲ್ವ​ರು ಪರಾ​ರಿ​| ಐಎ​ಎಸ್‌, ಐಪಿ​ಎಸ್‌ ಅಧಿ​ಕಾ​ರಿ​ಗಳ ಹೆಸ​ರಿ​ನಲ್ಲಿಯೂ ವಂಚನೆ|

Two Accused Arrsted for cheating in the Name Of B L Santosh in Bengaluru grg
Author
Bengaluru, First Published Dec 28, 2020, 8:04 AM IST

ಬೆಂಗಳೂರು(ಡಿ.28): ಬಿಜೆಪಿ ರಾಷ್ಟ್ರೀಯ ಸಂಘ​ಟನಾ ಪ್ರಧಾನ ಕಾರ್ಯ​ದರ್ಶಿ ಬಿ.ಎ​ಲ್‌.ಸಂತೋಷ್‌ ಅವರ ಹೆಸ​ರಿ​ನಲ್ಲಿ ಸಾಮಾಜಿಕ ಜಾಲತಾಣದ ಮೂಲಕ ವಂಚಿ​ಸು​ತ್ತಿದ್ದ ಉತ್ತರ ಪ್ರದೇಶ ಮೂಲದ ಇಬ್ಬ​ರನ್ನು ಕೇಂದ್ರ ವಿಭಾಗದ ಸೈಬರ್‌ ಕ್ರೈಂ ಪೊಲೀ​ಸರು ಬಂಧಿ​ಸಿ​ದ್ದಾ​ರೆ.

ಉತ್ತರ ಪ್ರದೇಶ ಮೂಲದ ಇಬ್ರಾ​ಹಿಂ(36), ಮೊಹ​ಮ್ಮದ್‌ ಶೋಕಿ​ನ್‌​(28) ಬಂಧಿ​ತರು. ಆರೋಪಿಗಳಿಂದ ಐದು ಮೊಬೈಲ್‌, ಹತ್ತಕ್ಕೂ ಹೆಚ್ಚು ಸಿಮ್‌​ಕಾರ್ಡ್‌, ಬ್ಯಾಂಕ್‌ ಪಾಸ್‌ ಪುಸ್ತ​ಕ​ಗ​ಳನ್ನು ವಶಕ್ಕೆ ಪಡೆ​ಯ​ಲಾ​ಗಿ​ದೆ. ಆರೋ​ಪಿ​ಗಳು ಸಂತೋಷ್‌ ಅವರ ಹೆಸ​ರಿ​ನಲ್ಲಿ ನಕಲಿ ಫೇಸ್‌​ಬುಕ್‌ ಖಾತೆ ತೆರೆದು, ಮೆಸೆಂಜರ್‌ ಮೂಲಕ ಸಂತೋಷ್‌ ಅವರ ಹೆಸ​ರಿ​ನಲ್ಲಿ ಹಣ ​ಸಂದಾಯ ಮಾಡು​ವಂತೆ ಅಜಿತ್‌ ಎಂಬುವ​ರಿಗೆ ಸಂದೇಶ ಕಳು​ಹಿ​ಸಿ​, ಹಣ ಪಡೆ​ದು​ಕೊಂಡಿ​ದ್ದರು. ಇದೇ ರೀತಿ ಹಣ ಕೋರಿ ಹಲ​ವ​ರಿಗೆ ವಂಚಿ​ಸಿ​ದ್ದರು. ಈ ಬಗ್ಗೆ ಕೇಂದ್ರ ಸೈಬರ್‌ ಕ್ರೈಂ ಪೊಲೀ​ಸ​ರಿಗೆ ದೂರು ನೀಡ​ಲಾ​ಗಿ​ತ್ತು.

32 ಲಕ್ಷ ಗ್ರಾಹಕರನ್ನು ವಂಚಿಸಿದ ಅಗ್ರಿಗೋಲ್ಡ್‌ನ 4109 ಕೋಟಿ ರು. ಆಸ್ತಿ ಜಪ್ತಿ

ಈ ಸಂಬಂಧ ಕಾರ್ಯಾ​ಚ​ರಣೆ ನಡೆ​ಸಿದ ಪೊಲೀಸರು, ಬ್ಯಾಂಕ್‌ ಡಿಟೇಲ್ಸ್‌ ಹಾಗೂ ಪಿನ್‌ ನಂಬರ್‌ ಚೆಕ್‌ ಮಾಡಿ​ದಾಗ ಆರೋ​ಪಿ​ಗಳ ಮೂಲ ಉತ್ತರ ಪ್ರದೇಶ ಎಂಬುದು ಗೊತ್ತಾ​ಗಿದೆ. ಬಂಧಿ​ಸಲು ತೆರ​ಳಿ​ದಾಗ ಸ್ಥಳೀ​ಯರ ನೆರ​ವಿ​ನಿಂದ ತಂಡ ಮಾಸ್ಟರ್‌ ಮೈಂಡ್‌ ಲಿಯಾ​ಖತ್‌ ಸೇರಿ ನಾಲ್ವ​ರು ಪರಾ​ರಿ​ಯಾ​ಗಿದ್ದು, ಪಿಯುಸಿ ವ್ಯಾಸಂಗ ಮಾಡಿ​ರುವ ಲಿಯಾ​ಖ​ತ್‌, ಇಂಗ್ಲೀ​ಷ್‌​ನಲ್ಲಿ ಚಾಟಿಂಗ್‌ ಮಾಡು​ವು​ದನ್ನು ಕರ​ಗತ ಮಾಡಿ​ಕೊಂಡಿ​ದ್ದಾ​ನೆ. ತನ್ನ ಸ್ನೇಹಿ​ತರ ಜತೆ ಸೇರಿ​ಕೊಂಡು ಪ್ರಭಾವಿ ರಾಜ​ಕಾ​ರಣಿ, ಐಎ​ಎಸ್‌, ಐಪಿ​ಎಸ್‌ ಅಧಿ​ಕಾ​ರಿ​ಗಳ ಹೆಸ​ರಿ​ನಲ್ಲಿ ವಂಚನೆ ಮಾಡು​ತ್ತಿ​ದ್ದರು ಎಂದು ಪೊಲೀಸರು ಹೇಳಿ​ದ​ರು.
 

Follow Us:
Download App:
  • android
  • ios