ಪಿಟಿಐ ನವದೆಹಲಿ(ಡಿ.25): 32 ಲಕ್ಷ ಗ್ರಾಹಕರಿಗೆ 6380 ಕೋಟಿ ರು. ಪಂಗನಾಮ ಹಾಕಿದ ಆರೋಪ ಹೊತ್ತಿರುವ ಅಗ್ರಿಗೋಲ್ಡ್‌ ಕಂಪನಿಯ 4109 ಕೋಟಿ ರು. ಆಸ್ತಿಪಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ಮುಟ್ಟುಗೋಲು ಹಾಕಿಕೊಂಡಿದೆ.

ಅಗ್ರಿಗೋಲ್ಡ್‌ ಕಂಪನಿಯ ಪ್ರವರ್ತಕರು, ಜನರಿಗೆ ಭಾರೀ ಪ್ರಮಾಣದ ಬಡ್ಡಿ, ಕೃಷಿ ಜಮೀನು ಹಾಗೂ ಪ್ಲಾಟ್‌ಗಳ ಆಮಿಷ ಒಡ್ಡಿ ಹಣ ಸಂಗ್ರಹಿಸಿದ್ದರು. ಆದರೆ ಕೊಟ್ಟಭರವಸೆಯಂತೆ ಇವು ಯಾವುಗಳನ್ನೂ ಕೊಡದೇ ವಂಚಿಸಿ, ಈ ದುಡ್ಡನ್ನು ಬೇನಾಮಿ ಕಂಪನಿಗಳಿಗೆ ಹಾಗೂ ವಿದೇಶಗಳಿಗೆ ವರ್ಗಾಯಿಸಿದ್ದರು.

ನಿನ್ನೆ ರಾಜ್ಯದಲ್ಲಿ ಕೊರೋನಾಗೆ 1 ಬಲಿ: 6 ತಿಂಗಳ ನಂತರ ರಾಜ್ಯದಲ್ಲಿ ಕನಿಷ್ಠ ಸಾವು

ಈ ಹಿನ್ನೆಲೆಯಲ್ಲಿ ಮಂಗಳವಾರ 3 ಪ್ರವರ್ತಕರನ್ನು ಬಂಧಿಸಿದ್ದ ಇ.ಡಿ., ಈಗ 2809 ಭೂ ಆಸ್ತಿಗಳು ಹಾಗೂ 48 ಎಕರೆ ಪ್ರದೇಶದಲ್ಲಿರುವ ಅಗ್ರಿಗೋಲ್ಡ್‌ಗೆ ಸಂಬಂಧಿಸಿದ 2 ಕಂಪನಿಗಳ ಜಮೀನು, ಷೇರುಗಳು, ಯಂತ್ರಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈ ಆಸ್ತಿಪಾಸ್ತಿಗಳು ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು ಹಾಗೂ ತೆಲಂಗಾಣದ ವ್ಯಾಪ್ತಿಯಲ್ಲಿದ್ದವು.