ಹುಡ್ಗಿಗೆ ಪ್ರೀತಿ ಸಂದೇಶ ಕಳುಹಿಸಿದ್ದಕ್ಕೆ ಯುವಕನ ಕೊಲೆ, ಆರೋಪಿಗಳು ಅಂದರ್
ಐ ಲವ್ ಯು ಅಂತ ಮೇಸೆಜ್ ಹಾಕಿದ್ದವನನ್ನು ಮಾತನಾಡಲು ಕರೆಸಿದ ಯುವತಿ ಕಡೆಯವರು ಕೊಂದೇ ಬಿಟ್ರು, ಇದೀಗ ಕೊಂದವರು ಪೊಲೀಸರ ಅತಿಥಿಯಾಗಿದ್ದಾರೆ.
ಬೆಂಗಳೂರು, (ಜುಲೈ.18): ಪ್ರೀತಿ ಸಂದೇಶ ಕಳುಹಿಸಿದ್ದಕ್ಕೆ ಯುವಕನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನ ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಗೇಂದ್ರ ಹಾಗೂ ರಂಗಸ್ವಾಮಿ ಬಂಧಿತ ಆರೋಪಿಗಳು. ಈ ಇಬ್ಬರು ಜುಲೈ 15ರ ರಾತ್ರಿ ಬೆಂಗಳೂರಿನ ಹಳೇ ಮದ್ರಾಸ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ಪ್ರಜ್ವಲ್ ಎನ್ನುವ ಯುವಕನನ್ನು ಕೊಲೆ ಮಾಡಿ ತಲೆಮರಿಸಿಕೊಂಡಿದ್ದರು.
Bengaluru Crime News: ಪ್ರೇಮಕ್ಕೆ ವಿರೊಧ: ಯುವತಿ ಬಾಯ್‌ಫ್ರೆಂಡ್ ಕೊಂದ ಮಾವ
ಪ್ರಕರಣ ಹಿನ್ನೆಲೆ
ಅವನು ಇನ್ಸ್ಟಾ ರೀಲ್ಸ್ ಮಾಡ್ಕೊಂಡು ಸಣ್ಣಪುಟ್ಟ ಕೆಲಸ ಮಾಡ್ಕೊಂಡು ಇದ್ದವನು. ಸಂಬಂಧಿಕರಲ್ಲೇ ಒಬ್ಳು ಅಪ್ರಾಪ್ತೆಯ ಮೇಲೆ ಮನಸ್ಸಿಟ್ಕೊಂಡು ಫೋನ್, ಮೆಸೇಜು ಅಂತಾ ಪ್ರೀತಿ ನಶೆಯಲ್ಲಿ ತೇಲಾಡ್ತಿದ್ದ.. ಆದ್ರೆ ಅದೇ ಅವನ ಜೀವಕ್ಕೆ ಕಂಟಕವಾಗಿತ್ತು.
ಹೀಗೆ ಕೊಲೆಯಾದವನ್ನೇ ಪ್ರಜ್ವಲ್. ಸಹೋದರನಿಗೆ ಸಹಾಯ ಮಾಡ್ಕೊಂಡು, ಸಣ್ಣಪುಟ್ಟ ಕೆಲಸ ಮಾಡಕೊಂಡು ಇದ್ದವನು.. ಅಷ್ಟೇ ಆಗಿದ್ರೆ ಬಹುಶಃ ಇವತ್ತು ಬದುಕಿರ್ತಿದ್ದ ಆದ್ರೆ ಪ್ರೀತಿ ಪ್ರೇಮ ಅಂತ ಹೋಗಿ ಮಸಣದ ದಾರಿ ಹಿಡಿದ್ದ. ಜುಲೈ 15ರ ರಾತ್ರಿ ಹಳೇ ಮದ್ರಾಸ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ಸಂಬಂಧಿಕರಿಂದಲೇ ಏಟು ತಿಂದ ಪ್ರಜ್ವಲ್ ಸಾವನ್ನಪ್ಪಿದ್ದ. ಸದ್ಯ ಇದೇ ಪ್ರಕರಣದಲ್ಲಿ ನಾಗೇಂದ್ರ ಹಾಗೂ ರಂಗಸ್ವಾಮಿ ಎಂಬ ಇಬ್ಬರು ಆರೋಪಿಗಳನ್ನ ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪ್ರಜ್ವಲ್ ಹತ್ಯೆಗೆ ಕಾರಣವಾಗಿದ್ದು ಮೆಸೇಜ್...
(ಫೋಟೋ: ಕೊಲೆಯಾದ ಪ್ರಜ್ವಲ್)
ಸಂಬಂಧಿಕರಲ್ಲೇ ಓರ್ವ ಅಪ್ರಾಪ್ತ ಹುಡುಗಿಯನ್ನ ಪ್ರೀತಿಸ್ತಿದ್ದ ಪ್ರಜ್ವಲ್, ಆಕೆಗೆ ಲವ್ ಯೂ ಅಂತಾ ಮೆಸೇಜ್ ಕಳಿಸೋದು ಆಕೆಯಿಂದ ಲವ್ ಯೂ ಟೂ ಅಂತಾ ರಿಫ್ಲೈ ಬರೋದು ಕಾಮನ್ ಆಗಿತ್ತು... ಆದ್ರೆ ಪ್ರಜ್ವಲ್ ಇಷ್ಟವಿರದ ಯುವತಿಯ ಚಿಕ್ಕಪ್ಪ, ಹಳೇ ರೌಡೀಶೀಟರ್ ನಾಗೇಂದ್ರ ಜುಲೈ15ರ ರಾತ್ರಿ ಮತ್ತೊಬ್ಬ ಯುವಕನ ಮೂಲಕ ಪ್ರಜ್ವಲ್ ನನ್ನ ಮಾತನಾಡೋದಕ್ಕೆ ಅಂತಾ ಹಳೇ ಮದ್ರಾಸ್ ರಸ್ತೆಯ ನಿರ್ಜನ ಪ್ರದೇಶದ ಬಳಿ ಕರೆಸಿದ್ದಾನೆ. ಈ ವೇಳೆ ಜೊತೆಗಿದ್ದ ರಂಗಸ್ವಾಮಿ ಹಾಗೂ ನಾಗೇಂದ್ರ ಇಬ್ರೂ ಸೇರಿ ಪ್ರಜ್ವಲ್ ಹಾಗೂ ಆತನನ್ನ ಕರೆತಂದವ ಇಬ್ರಿಗೂ ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪರಿಣಾಮ ಪ್ರಜ್ವಲ್ ಅಲ್ಲಿಯೇ ಪ್ರಾಣ ಬಿಟ್ಟಿದ್ದ.
ಒಟ್ಟಿನಲ್ಲಿ ಅಪ್ರಾಪ್ತೆಯ ಜೊತೆ ಲವ್ವಿ ಡವ್ವಿ ಅಂತಾ ಹೋದ ತಪ್ಪಿಗೆ ಯುವಕ ಸಾವನ್ನಪ್ಪಿದ್ದಾನೆ. ಸಂಬಂಧಿಕರ ಹುಡುಗ ಬೇರೆ ಬುದ್ಧಿ ಹೇಳಿ ಕಳಿಸುವ ಬದಲು ಕೋಪದ ಕೈಗೆ ಬುದ್ದಿ ಕೊಟ್ಟು ಹಂತಕರ ಪಟ್ಟ ಹೊತ್ತವರಿಬ್ರೂ ಜೈಲುಪಾಲಾಗಿದ್ದಾರೆ.