Bengaluru Crime News: ಪ್ರೇಮಕ್ಕೆ ವಿರೊಧ: ಯುವತಿ ಬಾಯ್‌ಫ್ರೆಂಡ್ ಕೊಂದ ಮಾವ

Bengaluru Crime News: ಯುವಕ-ಯುವತಿ ಒಬ್ಬನ್ನೊಬ್ಬರು ಇಷ್ಟ ಪಡುತ್ತಿದ್ದು, ಇವರಿಬ್ಬರ ಪ್ರೀತಿಗೆ ಯುವತಿ ಮನೆಯಲ್ಲಿ ಮಾವನ ವಿರೋಧವಿತ್ತು ಎನ್ನಲಾಗಿದೆ
 

Girl s Uncle kills Boyfriend Over affair with her in Bengaluru mnj

ಬೆಂಗಳೂರು (ಜು. 16):  ಬೆಂಗಳೂರಿನಲ್ಲಿ ಯುವತಿ ವಿಚಾರಕ್ಕೆ ಮತ್ತೊಂದು ಕೊಲೆಯಾಗಿದೆ.  ಹಳೆ ಮದ್ರಾಸ್ ರಸ್ತೆಯ ನ್ಯೂ ಬೈಯ್ಯಪ್ಪನಹಳ್ಳಿಯಲ್ಲಿ ಘಟನೆ ನಡೆದಿದೆ. ಪ್ರಜ್ವಲ್ (18) ಕೊಲೆಯಾದ ಯುವಕ.  ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇಬ್ಬರು ಶಂಕಿತ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.  ಪ್ರಜ್ವಲ್ ಯುವತಿಯನ್ನು ಲವ್ ಮಾಡುತ್ತಿದ್ದು, ಇಬ್ಬರು ಒಬ್ಬರನ್ನೊಬ್ಬರು ಇಷ್ಟ ಪಡುತ್ತಿದ್ದರು. ಇವರಿಬ್ಬರ ಪ್ರೀತಿಗೆ ಯುವತಿ ಮನೆಯಲ್ಲಿ ಮಾವನ ವಿರೋಧವಿತ್ತು. ಯುವತಿಗೆ ಪ್ರಜ್ವಲ್ ಮೇಸೆಜ್ ಹಾಕಿರೋದನ್ನು ಮಾವ  ನೋಡಿದ್ದರು.  ಮೇಸೆಜ್ ನೋಡಿ ಯುವತಿಗೆ ಯುವತಿ ಬೈದಿದ್ದರು.  

ಮೇಸೆಜ್ ನೋಡಿ ಪ್ರಜ್ವಲ್ ಹುಡುಕಿಕೊಂಡು ಯುವತಿ ಮನೆಯಲ್ಲಿ ಮಾವ ಬಂದಿದ್ದ. ಈ ವೇಳೆ ರಾತ್ರಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿತ್ತು. ಬಳಿಕ ವಿವೇಕಾನಂದ ಮೆಟ್ರೋ ಸ್ಟೇಷನ್ ಬಳಿ ಯುವತಿ ಮಾವ ಪ್ರಜ್ವಲ್ ತಲೆಗೆ ದೊಣ್ಣೆಯಲ್ಲಿ ಹೊಡೆದಿದ್ದ. ಸ್ಥಳೀಯರು ಹಾಗೂ ಪೊಲೀಸರು ಪ್ರಜ್ವಲ್‌ನನ್ನ ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದರು.  ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಪ್ರಜ್ವಲ್ ಮೃತ ಪಟ್ಟಿದ್ದ. ಈ ಸಂಬಂಧ ಭೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಪತಿಗಾಗಿ ಪತ್ನಿ ಧರಣಿ: ಬೇರೆ ಜಾತಿ ಕಾರಣಕ್ಕೆ ಮತ್ತೊಂದು ವಿವಾಹವಾದ ಗಂಡ..!

Latest Videos
Follow Us:
Download App:
  • android
  • ios