ವೇಶ್ಯಾವಾಟಿಕೆ ಸೋಗಲ್ಲಿ ಹನಿಟ್ರ್ಯಾಪ್‌: ಚಾಲಾಕಿ ದಂಪತಿ ಅರೆಸ್ಟ್‌

ಬ್ಲ್ಯಾಕ್‌ಮೇಲ್‌ ಮಾಡಿ ಹಣ ಸುಲಿಗೆ| ಜಾಲದಲ್ಲಿ ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಪತ್ತೆಗೆ ಜಾಲ ಬೀಸಿದ ಪೊಲೀಸರು| ಈ ಬಗ್ಗೆ ವೈಟ್‌ಫೀಲ್ಡ್‌ ಠಾಣೆಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಆರೋಪಿಗಳ ಬಂಧನ| 

Couple Arrest for Honeytrap Case in Bengaluru grg

ಬೆಂಗಳೂರು(ಫೆ.05):  ವೇಶ್ಯಾವಾಟಿಕೆ ಸೋಗಿನಲ್ಲಿ ಸಾರ್ವಜನಿಕರನ್ನು ಹನಿಟ್ರ್ಯಾಪ್‌ ಬಲೆಗೆ ಬೀಳಿಸಿಕೊಂಡು ಬ್ಲ್ಯಾಕ್‌ಮೇಲ್‌ ಮೂಲಕ ಹಣ ಸುಲಿಗೆ ಮಾಡುತ್ತಿದ್ದ ಚಾಲಾಕಿ ದಂಪತಿಯನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಉಲ್ಲಾಳ ಉಪ ನಗರ ಸಮೀಪದ ವಿಶ್ವೇಶ್ವರ ಲೇಔಟ್‌ನ ಭಾಸ್ವತಿ ದತ್ತಾ (29) ಹಾಗೂ ಆಕೆಯ ಪತಿ ಕಿರಣ್‌ ರಾಜ್‌ (33) ಬಂಧಿತರಾಗಿದ್ದು, ಈ ಜಾಲದಲ್ಲಿ ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಪತ್ತೆಗೆ ತನಿಖೆ ನಡೆದಿದೆ. ಇತ್ತೀಚಿಗೆ ಲೈಂಗಿಕ ಕ್ರಿಯೆಗೆ ಯುವಕನ ಆಹ್ವಾನದ ಮೇರೆಗೆ ತೆರಳಿ ಬಳಿಕ ಆತನನ್ನು ತಮ್ಮ ಹನಿಟ್ರ್ಯಾಪ್‌ ಬಲೆಗೆ ಆರೋಪಿಗಳು ಬೀಳಿಸಿಕೊಂಡಿದ್ದರು. ಈ ಬಗ್ಗೆ ವೈಟ್‌ಫೀಲ್ಡ್‌ ಠಾಣೆಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹನಿ ದಂಪತಿ: 

2018ರಲ್ಲಿ ನಾಗಮಂಗಲದ ಕಿರಣ್‌ ರಾಜ್‌ ಹಾಗೂ ಭಾಸ್ವತಿ ವಿವಾಹವಾಗಿದ್ದು, ಉಲ್ಲಾಳ ಉಪ ನಗರ ಹತ್ತಿರದ ವಿಶ್ವೇಶ್ವರ ಲೇಔಟ್‌ನಲ್ಲಿ ನೆಲೆಸಿದ್ದರು. ಸುಲಭವಾಗಿ ಹಣ ಸಂಪಾದನೆಗೆ ದಂಪತಿ ಹನಿ ಟ್ರ್ಯಾಪ್‌ ದಂಧೆ ಶುರು ಮಾಡಿದ್ದರು. ಅಂತೆಯೇ ಲೊಕೆಂಟೋ.ಕಾಂ ವೆಬ್‌ಸೈಟ್‌ನಲ್ಲಿ ಎಸ್ಕಾರ್ಟ್‌ ಸರ್ವಿಸ್‌ನಲ್ಲಿ ಯುವತಿಯರ ಭಾವಚಿತ್ರ ಮತ್ತು ಮೊಬೈಲ್‌ ನಂಬರ್‌ ಅಪ್‌ಲೋಡ್‌ ಮಾಡಿ, ಆರೋಪಿಗಳು ಜಾಹೀರಾತು ನೀಡಿ ಜನರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹನಿಟ್ರ್ಯಾಪ್‌ ಮಾಡಿದ ಚಾನಲ್‌ ಮಾಲೀಕ: ಮೂವರ ವಿರುದ್ಧ FIR

ಗ್ರಾಹಕರ ಪಟ್ಟಿ ಡೈರಿಯಲ್ಲಿ ಲಭ್ಯ

3 ವರ್ಷಗಳಿಂದ ಹನಿಟ್ರ್ಯಾಪ್‌ ದಂಧೆ ನಡೆಸಿರುವ ಈ ದಂಪತಿ, ತಮ್ಮ ಬಲೆಗೆ ಬಿದ್ದ ಪ್ರತಿಯೊಬ್ಬ ವಿವರವನ್ನು ಡೈರಿಯಲ್ಲಿ ಬರೆದಿಟ್ಟಿದ್ದಾರೆ. ಇದರಲ್ಲಿ ಆ ಗ್ರಾಹಕರ ಪೋಟೋ, ಅಶ್ಲೀಲ ವಿಡಿಯೋ, ಮೊಬೈಲ್‌ ನಂಬರ್‌ ಹಾಗೂ ವಿಳಾಸ ಸಹ ಇವೆ. ತಮ್ಮ ಗಾಳಕ್ಕೆ ಸಿಲುಕಿದ ‘ಮೀನು’ಗಳಿಗೆ ಆಗ್ಗಾಗೆ ಅತ್ಯಾಚಾರ ದೂರು ನೀಡುವುದಾಗಿ ಬೆದರಿಸಿ ಕರೆ ಮಾಡಿ ಆರೋಪಿಗಳು ಹಣ ವಸೂಲಿ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹನಿಟ್ರ್ಯಾಪ್‌ ಮೂಲಕ ಹಲವು ಜನರಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಆರೋಪಿಗಳು ಹಣ ಸುಲಿಗೆ ಮಾಡಿರುವ ಮಾಹಿತಿ ಇದೆ. ಸಂತ್ರಸ್ತರು ದೂರು ನೀಡಿದರೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತದೆ. ವೆಬ್‌ಸೈಟ್‌ಗಳಲ್ಲಿ ಅಪರಿಚಿತರ ಜತೆ ವ್ಯವಹರಿಸುವಾಗ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಡಿ.ದೇವರಾಜ್‌ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios