* ಹೈದರಾಬಾದಿನಲ್ಲಿ  ಆದಾಯ ತೆರಿಗೆ ಇಲಾಖೆ ದಾಳಿ* ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡ ಹಣ ಕಂಡು ಕಂಗಾಲಾದ ನೆಟ್ಟಿಗರು* ಕಪಾಟಿನ  ತುಂಬಾ ದುಡ್ಡೇ ದುಡ್ಡು* ಸೋಶಿಯಲ್ ಮೀಡಿಯಾದಲ್ಲಿ ಭಿನ್ನ ಪ್ರತಿಕ್ರಿಯೆ

ಹೈದರಾಬಾದ್(ಅ. 11) ಕರ್ನಾಟಕ(Karnataka) ಮಾತ್ರವಲ್ಲ ಹೈದಾರಾಬಾದಿನಲ್ಲಿ ( Hyderabad) ಆದಾಯ ತೆರಿಗೆ (Income Tax) ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸಿಕ್ಕಿರುವ ಹಣ ನೋಡಿ ಅಧಿಕಾರಿಗಳ ಜತೆ ಸೋಶಿಯಲ್ ಮೀಡಿಯಾ(Social Media) ಕಂಗಾಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದಾಯ ತೆರಿಗೆ ಇಲಾಖೆ ಮೂಲಗಳು ಹೇಳಿರುವಂತೆ ಲೆಕ್ಕವಿಲ್ಲದ 550 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಹೈದರಾಬಾದ್ ಮೂಲದ ಫಾರ್ಮಾ ಕಂಪನಿಗೆ ಸೇರಿದ 142.87 ಕೋಟಿ ರೂ. ವಶಕ್ಕೆ ಪಡೆದಿದ್ದು ಪೋಟೋಗಳನ್ನು ಕಂಡವರು ನಾನಾ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ವಿದೇಶಗಳಲ್ಲಿಯೂ ಈ ಕಂಪನಿ ತನ್ನ ಶಾಖೆ ಹೊಂದಿದೆ ಎಂಬ ಮಾಹಿತಿ ಇದೆ.

ಕೋಟಿ ಕೋಟಿ ಒಡೆಯನಾದರೂ ಬಾಡಿಗೆ ಮನೆಯಲ್ಲಿದ್ದ ಉಮೇಶ

ಆದರೆ ಎಲ್ಲರ ಗಮನವನ್ನು ಸೆಳೆದಿರುವುದು ಕಬೋರ್ಡ್ ತುಂಬಾ ತುಂಬಿರುವ ನೋಟಿನ ಕಂತೆಗಳು. ಹಣವನ್ನೇ ಈ ರೀತಿ ಕಪಾಟಿನಲ್ಲಿ ತುಂಬಿದರೆ ಇವರು ಬಟ್ಟೆ ಎಲ್ಲಿ ತುಂಬಿಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಫಾರ್ಮಾ ಕಂಪನಿ ಇಷ್ಟೊಂದು ಹಣ ಕ್ಯಾಶ್ ನಲ್ಲಿ ಯಾಕೆ ವ್ಯವರಿಸುತ್ತಿದೆ ಎಂಬುದು ಅರ್ಥವಾಗಲ್ಲ ಎಂದಿದ್ದಾರೆ. 

ನಾಲ್ಕು ದಿನಗಳ ಹಿಂದೆ ಕರ್ನಾಟಕದಲ್ಲಿಯೂ ಆದಾಯ ತೆರಿಗೆ ಅಧಿಕಾರಿಗಳು ಹಲವು ಕಡೆ ದಾಳಿ ಮಾಡಿದ್ದರು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತ ಎಂದು ಕರೆಸಿಕೊಂಡಿದ್ದ ಉಮೇಶ್ ಎಂಬುವರಿಗೆ ಸೇರಿದ್ದ ಆಸ್ತಿಗಳ ಮೇಲೂ ದಾಳಿಯಾಗಿತ್ತು. 

Scroll to load tweet…