ಮೇಘಾಲಯ ಹನಿಮೂನ್ ಹತ್ಯೆ ಪ್ರಕರಣದಲ್ಲಿ ಸೋನಮ್ ರಘುವಂಶಿ ಜಾಮೀನಿ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಪೊಲೀಸ್ ಮಾಡಿದ ತಪ್ಪೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗ್ತಿದೆ. ಈಗ ಪುಣೆ ಕೇತನ್ ಹತ್ಯೆ ಪ್ರಕರಣದಲ್ಲೂ ಸಿಯಾ ಸುಲಭವಾಗಿ ಹೊರ ಬರ್ತಾಳಾ ಎನ್ನುವ ಅನುಮಾನ ಶುರುವಾಗಿದೆ.

 ಪುಣೆಯಲ್ಲಿ ನಡೆದ ಕೇತನ್ ಹತ್ಯೆ ಪ್ರಕರಣ ದಿನ ದಿನಕ್ಕೂ ಹೊಸ ತಿರುವು ಪಡೆಯುತ್ತಿದೆ. ಹನಿಮೂನ್ ಗೆ ಹೋಗಿ ಪತಿ ರಾಜಾ ರಘುವಂಶಿ ಹತ್ಯೆ ಮಾಡಿ ಸಿಕ್ಕಿಬಿದ್ದಿದ್ದ ಸೋನಮ್ ರಘುವಂಶಿಗಿಂತ ಸಿಯಾ ನಾಲ್ಕು ಪಟ್ಟು ಎಚ್ಚರಿಕೆ ಹೆಜ್ಜೆ ಇಟ್ಟಂತಿದೆ. ಇದೇ ಕಾರಣಕ್ಕೆ ಪೊಲೀಸರಿಗೆ ಸಾಕ್ಷ್ಯ ಕಲೆ ಹಾಕೋದು ದೊಡ್ಡ ಸವಾಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೊಲೀಸರ ಎಚ್ಚರಿಕೆ ಹೆಜ್ಜೆ

 ಸೋನಮ್ ಪ್ರಕರಣದಂತೆ ಸಿಯಾ ಪ್ರಕರಣ ಆಗ್ಬಾರದು ಎನ್ನುವ ಕಾರಣಕ್ಕೆ ಪೊಲೀಸರು ಎಚ್ಚರಿಕೆ ಹೆಜ್ಜೆ ಇಡ್ತಿದ್ದಾರೆ. ಆದ್ರೆ ಏನೇ ಮಾಡಿದ್ರೂ ಸೂಕ್ತ ಸಾಕ್ಷ್ಯ ಪೊಲೀಸರ ಕೈ ಸೇರ್ತಿಲ್ಲ. ಕೇತನ್ ಅಗರ್ವಾಲ್ ಕೊಲೆ ಪ್ರಕರಣ ಪ್ರಸ್ತುತ ಸಂಪೂರ್ಣವಾಗಿ ಸಾಂದರ್ಭಿಕ ಸಾಕ್ಷ್ಯಗಳ ಮೇಲೆ ಅವಲಂಬಿತವಾಗಿದೆ. ಇಷ್ಟು ದಿನಗಳ ತನಿಖೆಯ ನಂತರವೂ, ಕೇತನ್ ಕೊಲೆಯ ಅಪರಾಧಿಯನ್ನು ಸ್ಪಷ್ಟವಾಗಿ ಗುರುತಿಸುವ ಯಾವುದೇ ನೇರ ಸುಳಿವು ಪೊಲೀಸರಿಗೆ ಸಿಕ್ಕಿಲ್ಲ. ಆದ್ದರಿಂದ, ಆರೋಪಿಯೇ ಕೊಲೆ ಮಾಡಿದ್ದಾನೆ ಎಂದು ಸಾಬೀತುಪಡಿಸಲು ಪೊಲೀಸರು ದೊಡ್ಡ ಮತ್ತು ಸಣ್ಣ ಎಲ್ಲಾ ಸಾಕ್ಷ್ಯಗಳನ್ನು ಒಟ್ಟುಗೂಡಿಸುತ್ತಿದ್ದಾರೆ.

Tumkuru: ಶಿರಾ ಬಾಂಬ್ ಸ್ಫೋಟ: ಪಾಗಲ್ ಪ್ರೇಮಿಯ ಹಿಂದಿನ ಭಯಾನಕ ರಹಸ್ಯ ಬಯಲು!

ಪಾಲಿಗ್ರಾಫ್ ನಡೆಯುತ್ತಾ? 

ಪೊಲೀಸರು ಪ್ರಮುಖ ಆರೋಪಿ ಸಿಯಾ ಗೋಯಲ್ ಮೇಲೆ ಪಾಲಿಗ್ರಾಫ್ ಪರೀಕ್ಷೆಯನ್ನು ನಡೆಸಲು ಬಯಸಿದ್ದಾರೆ. ಭಾರತದಲ್ಲಿ, ಪಾಲಿಗ್ರಾಫ್ ಪರೀಕ್ಷಾ ವರದಿಯನ್ನು ನ್ಯಾಯಾಲಯ ನೇರವಾಗಿ ಸಾಕ್ಷಿಯಾಗಿ ಒಪ್ಪಿಕೊಳ್ಳುವುದಿಲ್ಲ. ಆದ್ರೆ ಇದರಿಂದ ಹೊಸ ಸುಳಿವು ಸಿಗ್ಬಹುದು ಎಂಬ ನಿರೀಕ್ಷೆ ಪೊಲೀಸರದ್ದು. ಮಾತಿನ ಮಧ್ಯೆ ಸಿಯಾ, ಸುಳಿವನ್ನು ಬಹಿರಂಗಪಡಿಸಬಹುದು ಎಂದು ಪೊಲೀಸರು ನಂಬಿದ್ದಾರೆ. ಗೂಗಲ್ನಲ್ಲಿ ಲೋಹಗಢ ಕೋಟೆಯ ಎತ್ತರ ಸರ್ಚ್ ಮಾಡಿದ್ದರೆ ಅಥವಾ ಫೋನ್ನಲ್ಲಿ ಯಾವುದೇ ಇತರ ಡಿಜಿಟಲ್ ಚಟುವಟಿಕೆಯಲ್ಲಿ ತೊಡಗಿದ್ದರೆ ಅದರ ಸುಳಿವು ಪಾಲಿಗ್ರಾಫ್ ನಲ್ಲಿ ಸಿಗುವ ಸಾಧ್ಯತೆ ಇದೆ. ಅವರು ಕೊಲೆ ಪ್ರಯತ್ನ, ಲೋಹಗಢ ಬಗ್ಗೆ ಗೂಗಲ್ ನಲ್ಲಿ ಹುಡುಕಿದ್ದರೆ, ಡಿಜಿಟಲ್ ಪುರಾವೆಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಬಹುದು.

Dharwad: ದಪ್ಪಗಿದ್ದೀಯಾ..... ನಿನಗೆ ಮಗು ಆಗಲ್ಲವೆಂದು ಹೀಯಾಳಿಸಿ ಹೆಂಡತಿಯ ಕತ್ತು ಹಿಸುಕಿ ಕೊಂದ ಗಂಡ!

ಇದೇ ದೊಡ್ಡ ಸವಾಲು 

ಈ ಪ್ರಕರಣದಲ್ಲಿ ಪೊಲೀಸರು ಎದುರಿಸುತ್ತಿರುವ ದೊಡ್ಡ ಸವಾಲೆಂದ್ರೆ ಕೊಲೆಗೆ ಪ್ರತ್ಯಕ್ಷದರ್ಶಿಗಳು ಯಾರೂ ಇಲ್ಲದಿರುವುದು. ಸಿಯಾ ಮತ್ತು ಚೇತನ್, ಕೇತನ್ರನ್ನು ಬೆಟ್ಟದಿಂದ ತಳ್ಳಿದ್ದನ್ನು ಯಾರೂ ನೋಡಿಲ್ಲ. ಹಾಗೆಯೇ ಸಿಸಿಟಿವಿಯಲ್ಲಿ ಇದು ಸೆರೆಯಾಗಿಲ್ಲ. ಸಿಸಿಟಿವಿಯಲ್ಲಿ ಚೇತನ್ ಹುಡಿ ಧರಿಸಿ ಘಟನಾ ಸ್ಥಳದ ಬಳಿ ಬಂದಿರೋದು ಮಾತ್ರ ರೆಕಾರ್ಡ್ ಆಗಿದೆ.

ಘಟನೆ ಅರ್ಥಮಾಡಿಕೊಳ್ಳಲು ಪೊಲೀಸರು ಅಪರಾಧದ ಸ್ಥಳವನ್ನು ಡಮ್ಮಿಯೊಂದಿಗೆ ಮರುಸೃಷ್ಟಿಸಿದ್ದರು. ಆದ್ರೆ ಡಮ್ಮಿ, ಕೇತನ್ ಅವರನ್ನು ತಳ್ಳಲಾಗಿದೆಯೇ ಅಥವಾ ಅವರು ಜಾರಿಬಿದ್ದಿದ್ದಾರಾ ಎಂಬುದನ್ನು ಸಾಭೀತುಪಡಿಸುವುದಿಲ್ಲ. ಪ್ರಾಸಿಕ್ಯೂಷನ್ ಈಗ ಉದ್ದೇಶ ಮತ್ತು ಡಿಜಿಟಲ್ ಪುರಾವೆಗಳನ್ನು ಹೆಚ್ಚು ಅವಲಂಬಿಸಿದೆ. ತನಿಖಾ ಸಂಸ್ಥೆಗಳು ಮೊಬೈಲ್ ಡೇಟಾ, ಕರೆ ದಾಖಲೆಗಳು, ಇಂಟರ್ನೆಟ್ ಹುಡುಕಾಟ, ಹಿಸ್ಟ್ರಿ, ಇತರ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿವೆ. ಸಾಕ್ಷ್ಯದಲ್ಲಿ ಒಂದು ಮಹತ್ವದ ಕೊಂಡಿ ಕಳಚಿತ್ರ ಕೇಸ್ ದುರ್ಬಲವಾಗುತ್ತೆ. ಸಿಯಾ ಹೊರ ಬರುವ ಸಾಧ್ಯತೆ ಹೆಚ್ಚಿರುತ್ತೆ.