ಮುಂಬೈ (ಜ. 19)  ಮದುವೆ ಆಗುತ್ತೇನೆ ಎಂದು ನಂಬಿಸಿ ಪೈಲಟ್ ಒಬ್ಬ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಾಡೆಲ್, ಕಿರುತೆರೆ ನಟಿಯೊಬ್ಬರು ದೂರು ದಾಖಲಿಸಿದ್ದಾರೆ. 

ಕಳೆದ ವಾರ ಮುಂಬೈ ಉಪನಗರ ಒಶಿವಾರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು  ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಪೈಲಟ್‌ ಎಂದು ಹೇಳಿಕೊಂಡಿದ್ದ ವ್ಯಕ್ತಿ ಮ್ಯಾಟ್ರಿಮೋನಿಯಲ್ ಸೈಟ್‌ ಮೂಲಕ ಪರಿಚಯವಾಗಿದ್ದಾರೆ. ನಂತರ ಮಾತುಕತೆ ನಡೆದು ಮದುವೆಯಾಗುವ ಹಂತಕ್ಕೆ ಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಂತರ ನಿರಂತರ ಸಂಪರ್ಕ ಸಾಧ್ಯವಾಗಿದೆ.

ಮಂಗಳೂರು:  ಗಂಡಸರ ವಿಕ್ನೇಸ್.. ಹನಿ..ಹನಿ..ಸವಿಯಲು ಹೋದವನಿಗೆ  ಸಿಕ್ಕಿದ್ದೇನು? 

ಹತ್ತು ದಿನಗಳ ಹಿಂದೆ ನಿಮ್ಮನ್ನು ಭೇಟಿ ಮಾಡಬೇಕು ಎಂದು ಪೈಲಟ್ ಹೇಳಿದ್ದಾರೆ. ಒಬ್ಬರೇ ವಾಸಿಸುತ್ತಿದ್ದ ನಟಿ ತಮ್ಮ ಮನೆಗೆ ಆತನನ್ನು ಕರೆಸಿಕೊಂಡಿದ್ದಾರೆ. ಮನಗೆ ಬಂದ  ಪೈಲಟ್ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ  ಹೇಳಿದ್ದಾರೆ.

ಅತ್ಯಾಚಾರದ ನಂತರವೂ ಆರೋಪಿ ನಿಮ್ಮ ತಂದೆ ತಾಯಿಯೊಂದದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ ನಂತರ ಯಾವುದಕ್ಕೂ ಸ್ಪಂದನೆ ನೀಡಿಲ್ಲ.