Tumakuru: ನಕಲಿ ದಾಖಲೆ ಸೃಷ್ಟಿಸಿ ಜಮೀನು ಹಕ್ಕು ಬದಲಾವಣೆ: ಎಫ್‌ಐಆರ್‌ ದಾಖಲು

ಅಕ್ರಮ ಖಾತೆ ಮಾಡಿಕೊಟ್ಟ ಆರೋಪದಡಿ ಹುಳಿಯಾರು ಉಪತಹಸೀಲ್ದಾರ್ , ಕಂದಾಯಾಧಿಕಾರಿ ಹಾಗೂ ಗ್ರಾಮಲೆಕ್ಕಿಗನ ಮೇಲೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕಹಳ್ಳಿ ತಾಲ್ಲೂಕಿನ  ಹುಳಿಯಾರಿನಲ್ಲಿ ಈ ಘಟನೆ ನಡೆದಿದೆ.

FIR against Deputy Tahsildar and Revenue Department officials in Tumakuru gvd

ವರದಿ: ಮಹಂತೇಶ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು

ತುಮಕೂರು (ಜು.08): ಅಕ್ರಮ ಖಾತೆ ಮಾಡಿಕೊಟ್ಟ ಆರೋಪದಡಿ ಹುಳಿಯಾರು ಉಪತಹಸೀಲ್ದಾರ್ , ಕಂದಾಯಾಧಿಕಾರಿ ಹಾಗೂ ಗ್ರಾಮಲೆಕ್ಕಿಗನ ಮೇಲೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕಹಳ್ಳಿ ತಾಲ್ಲೂಕಿನ  ಹುಳಿಯಾರಿನಲ್ಲಿ ಈ ಘಟನೆ ನಡೆದಿದೆ. ಹುಳಿಯಾರು ಹೋಬಳಿ, ಕಲ್ಲೇನಹಳ್ಳಿಯ ರಘುನಾಥ ಎಂಬುವರು ನೀಡಿದ ದೂರಿನ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಹುಳಿಯಾರು ನಾಡ ಕಚೇರಿಯಲ್ಲಿ ವಂಶ ವೃಕ್ಷ, ಮರಣ ದೃಢೀಕರಣ ಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿ ತಿಮ್ಮಕ್ಕ ಎಂಬುವರಿಗೆ ಅಕ್ರಮವಾಗಿ ಜಮೀನು ಖಾತೆ ಮಾಡಿಕೊಟ್ಟಿದ್ದಾರೆ ಎಂದು ದೂರುದಾರು ಆರೋಪಿಸಿದ್ದರು.‌ 

ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ದಾಖಲಾಗಿತ್ತು. ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ ರಘುನಾಥ್ ನೀಡಿದ ದೂರು ಸತ್ಯಾಂಶದಿಂದ‌ ಕೂಡಿದ್ದು, ಅಧಿಕಾರಿಗಳು ಬೋಗಸ್ ಮಾಡಿರುವುದು ಸಾಬೀತಾಗಿತ್ತು. ಈ  ಹಿನ್ನೆಲೆಯಲ್ಲಿ ಉಪತಹಸೀಲ್ದಾರ್‌ ಪುಷ್ಪಾವತಿ, ಕಂದಾಯಧಿಕಾರಿ ಹೆಚ್.ಮಂಜುನಾಥ್ ಹಾಗೂ ಗ್ರಾಮ ಲೆಕ್ಕಿಗ ಹೆಚ್.ಹೆಚ್.ಮಂಜುನಾಥ್ ಅವರ ವಿರುದ್ಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಬ್ಬಿಯಲ್ಲಿ ಅಕ್ರಮ: ಭ್ರಷ್ಟ ಅಧಿಕಾರಿಗಳನ್ನ ಜೈಲಿಗಟ್ಟಿಸಿದ ಶಾಸಕ ಶ್ರೀನಿವಾಸ್‌

ಪ್ರಕರಣದ ವಿವರ: ಗೋಣಿ ನಿಂಗಪ್ಪನವರಿಗೆ 1973ರಲ್ಲಿ ಬಗರ್ ಹುಕುಂನಿಂದ ಮುತ್ತುಗದಹಳ್ಳಿ, ಸರ್ವೆ ನಂ -79 ರಲ್ಲಿ 4 ಎಕರೆ ಜಮೀನು ಮಂಜೂರಾಗಿತ್ತು. ಪ್ರಸ್ತುತ ಸದರಿ ಜಮೀನು ಗೋಣಿ ನಿಂಗಪ್ಪ ಅವರ ಹೆಸರಿನಲ್ಲಿಯೇ ಇದ್ದು, ಅವರೇ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಏತನ್ಮಧ್ಯೆ, 20 ದಿನಗಳ ಹಿಂದೆ ಸದರಿ ಜಮೀನಿನ ಪಹಣಿಯನ್ನು ತೆಗೆಸಿ ನೋಡಿದಾಗ ಮೇಲ್ಕಂಡ ಜಮೀನು ಹೋಯ್ಸಳಕಟ್ಟೆಯ ತಿಮ್ಮಕ್ಕ ಕೋಂ ಕಾಡೇಗೌಡ , ಇವರ ಖಾತೆಯಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಗೋಣಿ ನಿಂಗಪ್ಪನವರ ಪುತ್ರ ರಘುನಾಥ್ ನಾಡಕಛೇರಿಯವರು ವಿಚಾರಿಸಿದಾಗ ಸರಿಯಾಗಿ ಮಾಹಿತಿಯನ್ನು ನೀಡಿರುವುದಿಲ್ಲ.

ನಂತರ ಚಿ.ನಾ. ಹಳ್ಳಿ ತಹಸೀಲ್ದಾರರ ಕಛೇರಿಯಿಂದ ದಾಖಲಾತಿಗಳನ್ನು ತೆಗೆಸಿ ನೋಡಲಾಗಿ ಗೋಣಿನಿಂಗಪ್ಪ ಅವರಿಗೆ ಸೇರಿದ ಮೇಲ್ಕಂಡ ಜಮೀನನ್ನು ಹೊಯ್ಸಳಕಟ್ಟೆ ಗ್ರಾಮದ ತಿಮ್ಮಕ್ಕ ಕೋಂ ಕಾಡೇಗೌಡ ಎಂಬುವವರು ಖಾತೆ ಮಾಡಿಕೊಡಲಾಗಿರುತ್ತೆ. ರಾಜಸ್ವ ನಿರೀಕ್ಷಕರಾದ ಮಂಜುನಾಥ ಹಾಗೂ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಅವರು ತಿಮ್ಮಕ್ಕ ಜೊತೆಗೆ ಶಾಮೀಲಾಗಿದ್ದು, ವಂಶವೃಕ್ಷ ಹಾಗೂ ಮರಣ ದೃಢೀಕರಣ ಇತ್ಯಾದಿ ದಾಖಲಾತಿಗಳನ್ನು ಕಂದಾಯಾಧಿಕಾರಿಗಳೇ ನಕಲಿ  ಮಾಡಿಸಿ ಖಾತೆ ಬದಲಾವಣೆ ಮಾಡಿರುವುದು ತಿಳಿದು ಬಂದಿದೆ.‌

ತುಮಕೂರು ವಿಶ್ವವಿದ್ಯಾಲಯ ಘಟಿಕೋತ್ಸವ: ವಿವಿ ನಡೆಗೆ ಸಿಂಡಿಕೇಟ್ ಸದಸ್ಯರ ಅಪಸ್ವರ

ಈ ಅಕ್ರಮ ಖಾತೆ ಮಾಡಿಕೊಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ರಘುರಾಮ್  ತಹಶೀ‌ಲ್ದಾರ್ ಹಾಗೂ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಲೋಕಯುಕ್ತ ಪೊಲೀಸರು ತಪಿತಸ್ಥ ಅಧಿಕಾರಿಗಳ ವಿರುದ್ಧ ಹುಳಿಯೂರು ಪೊಲೀಸರಿಗೆ ವರದಿ ನೀಡಿ, ಎಫ್‌ಐಆರ್‌ ದಾಖಲಿಸುವಂತೆ ಸೂಚಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ  ಕಲಂ 420, 464, 465, 467, 468, 471 ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

Latest Videos
Follow Us:
Download App:
  • android
  • ios