ತುಮಕೂರು ದಲಿತ ಯುವಕರ ಕೊಲೆ ಪ್ರಕರಣ, ಗ್ರಾಮವನ್ನೇ ತೊರೆದ ಪುರುಷರು

* ತುಮಕೂರು ಇಬ್ಬರು ಯುವಕರ ಕೊಲೆ ಪ್ರಕರಣ
* ಪ್ರಕರಣ ಸಂಬಂಧ 30ಕ್ಕೂ ಹೆಚ್ಚು ಜನರ ಬಂಧನ
* ಪೊಲೀಸರ ತನಿಖೆಗೆ ಹೆದರಿ ಮನೆ ತೊರೆದ ಪುರುಷರು

Tumakuru 2 Dalit Youths Beaten To Death Men quits Village rbj

ವರದಿ -ಮಹಂತೇಶ್‌ ಕುಮಾರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ತುಮಕೂರು

ತುಮಕೂರು, (ಏ.29):
ತುಮಕೂರು ಜಿಲ್ಲಾದ್ಯಂತ ಬಾರಿ ಸದ್ದು ಮಾಡಿರುವ ಇಬ್ಬರು ಯುವಕರ ಕೊಲೆ ಪ್ರಕರಣ ಪ್ರತಿನಿತ್ಯ ಹೊಸ ತಿರುವು ಪಡೆದುಕೊಳ್ಳುತ್ತಿದೆ.  ಕಳ್ಳತನ ಮಾಡಲು ಬಂದ  ಇಬ್ಬರು ಯುವಕರನ್ನು ಗ್ರಾಮಸ್ಥರೆಲ್ಲಾ ಸೇರಿ ಹೊಡೆದು ಹತ್ಯೆ ಮಾಡಿದ  ಪ್ರಕರಣದ ಜಾತಿ ತಿರುವು ಪಡೆದುಕೊಂಡಿದೆ.  ಪೆದ್ದಹಳ್ಳಿ ಗ್ರಾಮದ ಸವರ್ಣೀಯರು ದಲಿತ ಯುವಕರನ್ನು ದನದಂತೆ ಬಡಿದು ಕೊಲೆ ಮಾಡಿ ನೀರಿಗೆ ಎಸೆದಿದ್ದಾರೆಂದು ದೂರಲಾಗಿದೆ. ಇನ್ನೊಂದಡೆ ಪೊಲೀಸರ ತನಿಖೆಗೆ ಹೆದರಿ ಗ್ರಾಮದ ಪುರುಷರು ಮನೆ ತೊರೆದಿದ್ದಾರೆ. ಈ ಪ್ರಕರಣದ ಲಾಭ ಮಾಡಿಕೊಳ್ಳಲು ಕಾಂಗ್ರೆಸ್‌ ಹವಣಿಸಿದೆ 
 
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಪೆದ್ದಹಳ್ಳಿಯಲ್ಲಿ ಸಂಭವಿಸಿದ ಇಬ್ಬರು ಯುವಕ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಬ್ಬರ ಕೊಲೆಗೆ ಕಾರಣ, ಹಾಗೂ ಕೊಲೆ ಮಾಡಿದವರು ಯಾರೆಂದು ಪತ್ತೆ ಹಚ್ಚಲು ಗುಬ್ಬಿ ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ.  ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈವರೆಗೂ ಸುಮಾರು 30 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ಸತ್ಯಾಸತ್ಯೆಯನ್ನು ಬೇಧಿಸಲು ಗುಬ್ಬಿ ಠಾಣೆಯ ಪೊಲೀಸರು ಕಳೆದ 8 ದಿನಗಳಿಂದ ಗ್ರಾಮದಲ್ಲಿ ಬಿಡು ಬಿಟ್ಟು ಗಸ್ತು ತಿರುಗಿದ್ದಾರೆ.  ಪೊಲೀಸರ ಬೂಟಿನ ಹೆಜ್ಜೆ ಸಪ್ಪಳಕ್ಕೆ ಇಡೀ ಗ್ರಾಮ ಬೆಚ್ಚಿ ಬಿದ್ದಿದೆ.

ಬಾಡೂಟಕ್ಕೆ ಹೋದವನ ಬರ್ಬರ ಹತ್ಯೆ, ಜಿಮ್ ಬಾಡಿಗೆ ಚಾಕುವಿನಿಂದ ಚುಚ್ಚಿ ಕೊಲೆ

ಊರು ತೊರೆದ ಪುರುಷರು
ಪೊಲೀಸರ ತನಿಖಾ ವೈಖರಿಗೆ ಬಿಚ್ಚಿ ಬಿದ್ದಿರುವ ಗ್ರಾಮದ ಗಂಡಸರು, ಮನೆ ತೊರೆದು ತಲೆ ಮರೆಸಿಕೊಂಡಿದ್ದಾರೆ.  ಗ್ರಾಮದಲ್ಲಿ ದಿನಕ್ಕೆ ನಾಲ್ಕೈದು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ತನಿಖಾ ವೈಖರಿಗೆ ಹೆದರಿದ ಯುವಕರು ಹಾಗೂ ಮದ್ಯ ವಯಸ್ಕರು ಅಕ್ಷರ ಸಹ ನಡುಗಿ ಹೋಗಿದ್ದಾರೆ. ಜೊತೆಗೆ ಮನೆ-ಜಾನುವಾರು- ಹೆಂಡತಿ-ಮಕ್ಕಳನ್ನುಊರು ತೊರೆದಿದ್ದಾರೆ.  ಹೀಗಾಗಿ ಗ್ರಾಮದಲ್ಲಿ ಬರೀ ಮಹಿಳೆಯರು ಮತ್ತು ಮಕ್ಕಳಿದ್ದಾರೆ.

ಇಡೀ ಗ್ರಾಮದಲ್ಲಿ ನಿರಾವ ಮೌನ ಆವರಿಸಿದೆ. ಪೆದ್ದನಹಳ್ಳಿ ಗ್ರಾಮದ ಬಹುತೇಕ ಮನೆಗಳಿಗೆ ಬೀಗ ಬಿದ್ದಿದೆ. ಗ್ರಾಮಕ್ಕೆ ಯಾರೇ ಅಪರಿಚಿತರು ಬಂದರು, ಮಹಿಳೆಯರು ಬೆಚ್ಚಿ ಬಿದ್ದು, ಮನೆ ಬಾಗಿಲು ಹಾಕಿಕೊಂಡು ಒಳಗೆ ಸೇರಿಕೊಳ್ಳುತ್ತಾರೆ. ಗ್ರಾಮದ ಮನೆಗಳಿಗೆ ನೀರು ಬಿಡುವ ಯುವಕನನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಕರೆದೊಯ್ದಿರುವುದು ಮಹಿಳೆಯರಲ್ಲಿ ಆತಂಕ ಮೂಡಿಸಿದೆ. 

ಪೆದ್ದನಹಳ್ಳಿ ನಿವಾಸಿ ಕೊಲೆಯಾದ ಗಿರೀಶ್‌ ವೃತ್ತಿಯಲ್ಲಿ ಆಟೋ ಡ್ರೈವರ್‌ ಆಗಿದ್ರು, ಕಳ್ಳತನದ ನಿಸ್ಸೀಮಾ, ಗ್ರಾಮದಲ್ಲಿ ಹತ್ತಾರು ಬಾರಿ ಕಳ್ಳತನ ಮಾಡಿ ಹಲವರ ಕೈಗೆ ಸಿಕ್ಕಿಬಿದಿದ್ದ, ಗಿರೀಶನ ವಿರುದ್ಧ ಗ್ರಾಮಸ್ಥರು ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದರು, ಕಳೆದ ೬ ತಿಂಗಳ ಹಿಂದೆ ಗಿರೀಶ್‌ ಅನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದರು, ಇಷ್ಟಾದ್ರೂ ಗಿರೀಶ್‌ ತನ್ನ ವರ್ತನೆ ಬದಲಾಯಿಸಿಕೊಂಡಿರಲಿಲ್ಲ, ಯಥಾಪ್ರಕರಣ ಅಡಿಕೆ, ಪಂಪು-ಮೊಟಾರ್‌, ಬೈಕ್‌ಗಳನ್ನು ಕಳ್ಳತನ ಮಾಡುವುದರಲ್ಲಿ ನಿರತನಾಗಿದ್ದ, ಈತನ ಕಳ್ಳತನಕ್ಕೆ ರೋಸಿ ಹೋದ ಗ್ರಾಮಸ್ಥರು ಸಾಮೂಹಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಗ್ರಾಮದಲ್ಲಿ ಮಾತನಾಡುತ್ತಿದ್ದಾರೆ. ಪೊಲೀಸರ ಕಿರುಕುಳ ತಾಳಲಾರದೆ ಗ್ರಾಮದ ಜನರು ಊರು ತೊರೆದಿದ್ದಾರೆ. ಗ್ರಾಮದಲ್ಲಿ ಕೇವಲ ಮಕ್ಕಳು-ಮಹಿಳೆಯರು ಮಾತ್ರ ಇದ್ದಾರೆ ಎಂದು ಗ್ರಾಮದ ನಿವಾಸಿ ಹುಚ್ಚಯ್ಯ ಹೇಳಿದ್ದಾರೆ .

ಪ್ರಕರಣ ಲಾಭ ಪಡೆದುಕೊಳ್ಳಲು ಕಾಂಗ್ರೆಸ್‌ ಹವಣಿಕೆ
ಏತನ್ಮಧ್ಯೆ ಯುವಕರ ಕೊಲೆ ಪ್ರಕರಣ ಜಾತಿ ಬಣ್ಣ ಪಡೆದುಕೊಂಡಿದೆ. ದಲಿತ ಯುವಕರನ್ನು ದಾರುಣವಾಗಿ ಹತ್ಯೆ ಮಾಡಲಾಗಿದೆ ಎಂದು ದಲಿತ ಸಂಘಟನೆಗಳು ಆರೋಪಿಸಿವೆ. ಇದೆಲ್ಲಾದರ ನಡುವೆ ಕಾಂಗ್ರೆಸ್‌ ಪಕ್ಷ ಪಕರಣವನ್ನು ರಾಜಕೀಯಕ್ಕೆ ಬಳಸಿಕೊಂಡು ಲಾಭ ಪಡೆಯುವ ಪ್ರಯತ್ನ ನಡೆಸಿದೆ. ಇಂದು ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯ ಆರ್.‌ ರಾಜೇಂದ್ರ ಪೆದ್ದನಹಳ್ಳಿಗೆ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಮೃತ ಗಿರೀಶ್‌ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿದ್ದಾರೆ. ಅಲ್ಲದೆ ದಲಿತ ಯುವಕರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಪೊಲೀಸರು ಬೇಗ ಪತ್ತೆ ಹಚ್ಚಿ ಶಿಕ್ಷೆಯಾಗುವಂತೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. 

ಪ್ರಕರಣ ಯಾವುದೇ ರಾಜಕೀಯ ತಿರುವು ಪಡೆದುಕೊಂಡರು, ಪೊಲೀಸರು ತಮ್ಮ ಕೆಲಸ ಮುಂದುವರೆಸಿದ್ದಾರೆ. ಕೊಲೆಗೆ ನಿಖರ ಕಾರಣ ಹುಡುಕುವ ಪ್ರಯತ್ನ ನಡೆದಿದೆ. ವಶಕ್ಕೆ ಪಡೆದುಕೊಂಡ  30 ಜನರ ಪೈಕಿ 6 ಜನ ದಲಿತರಿದ್ದಾರೆ. ಇತ್ತ ಮೃತ ಯುವಕ ಕುಟುಂಬಕ್ಕೆ ಪೊಲೀಸ್‌ ಭದ್ರತೆ ಕೂಡ ನೀಡಲಾಗಿದೆ. ದಲಿತರು ಎಂಬ ಕಾರಣಕ್ಕೆ ಕೊಲೆ ಮಾಡಿದ್ರಾ ? ಅಥವಾ ಕಳ್ಳತನದ  ಮಾಡಿದ ಕಾರಣಕ್ಕಾಗಿ ಯುವಕರನ್ನು ಕೊಲೆ ಮಾಡಲಾಯ್ತ ಅನ್ನೋದು ಪೊಲೀಸರ ತನಿಖೆಯಿಂದ ಬಹಿರಂಗಗೊಳಬೇಕಾಗಿದೆ. 

ಪ್ರಕರಣದ ಹಿನ್ನೆಲೆ
ಕಳೆದ  22-04-22ರ ರಾತ್ರಿ ಜಮೀನಿನಲ್ಲಿ ಪಂಪ್‌ ಸೆಟ್‌ ಖದೀಯಲು ಬಂದರು ಎಂಬ ಕಾರಣಕ್ಕೆ ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಇಬ್ಬರು  ಯುವಕರನ್ನು ಥಳಿಸಿ ಹತ್ಯೆ ಮಾಡಿದ್ದರು,  ಪೆದ್ದನಹಳ್ಳಿ ಗ್ರಾಮದ ಗಿರೀಶ್‌ ಹಾಗೂ ಆತನ ಮತ್ತೊರ್ವ ಸ್ನೇಹಿತ ಮಂಚಲದೊರೆ ಗ್ರಾಮದ ನಿವಾಸಿ ಗಿರೀಶ್‌ ಇಬ್ಬರು ಕೊಲೆಯಾಗಿದ್ದರು, ಇಬ್ಬರ ದೇಹಗಳನ್ನು ಪೆದ್ದನಹಳ್ಳಿ ಗ್ರಾಮದ ಹೊರವಲಯದಲ್ಲಿ ಕಂಡು ಬಂದಿದ್ದವು, ಪೆದ್ದನಹಳ್ಳಿ ಗಿರೀಶನ ಮೃತ ದೇಹ ನೀರಿನಲ್ಲಿ ಎಸೆಯಲಾಗಿತ್ತು. ಮತ್ತೋರ್ವನ ಮೃತ ದೇಹ ಹೊಂಡದ ಪಕ್ಕದಲ್ಲಿ ಪತ್ತೆಯಾಗಿತ್ತು.

Latest Videos
Follow Us:
Download App:
  • android
  • ios