ಲಾಡ್ಜ್‌ನಲ್ಲಿ ಬಡಿದಾಡಿಕೊಂಡ ತೃತೀಯ ಲಿಂಗಿಗಳು, ಯುವಕನ ಮಧ್ಯೆ ಬಡಿದಾಟ..!
* ಮಂಗಳ ಮುಖಿಯರಿಗೆ ಚಾಕು ಇರಿದ ಯುವಕ
* ಕೈಗೆ ಸಿಕ್ಕ ವಸ್ತುವಲ್ಲಿ ಯುವಕನ ತಲೆಗೆ ಹಲ್ಲೆ
* ರಕ್ತ ಸಿಕ್ತವಾಗಿ ಬಿದ್ದಿದ್ದ ಮೂವರು
ಬೆಂಗಳೂರು(ಮೇ.15): ಹಣದ ವಿಚಾರಕ್ಕೆ ಲಾಡ್ಜ್‌ನಲ್ಲಿ ನಡೆದ ಗಲಾಟೆಯಲ್ಲಿ ಇಬ್ಬರು ತೃತೀಯ ಲಿಂಗಿಗಳು(Transgender) ಹಾಗೂ ಯುವಕ ಪರಸ್ಪರ ಹೊಡೆದಾಡಿಕೊಂಡು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ತಡರಾತ್ರಿ ಕಾಟನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಡಲಪಾಳ್ಯ ನಿವಾಸಿಗಳಾದ ಸಂಜನಾ(28) ಮತ್ತು ಅರ್ಚನಾ(30) ಗಾಯಗೊಂಡ ತೃತೀಯ ಲಿಂಗಿಗಳು. ಕೋಲ್ಕತ್ತಾ(Kolkata) ಮೂಲದ ಅಂಕಿತ್ ಕುಮಾರ್(28) ಗಾಯಗೊಂಡವ. ಮೂವರು ಸದ್ಯ ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Bengaluru Drug Bust: 500 ನೋಟು, ಸಿಗರೆಟ್ ಪ್ಯಾಕ್‌ನಲ್ಲಿ ಮಾದಕ ವಸ್ತು ಅಡಗಿಸಿಟ್ಟು ಮಾರಾಟ..!
ತೃತೀಯ ಲಿಂಗಿಗಳಾದ ಸಂಜನಾ ಹಾಗೂ ಅರ್ಚನಾ ಮೆಜೆಸ್ಟಿಕ್ ಪ್ರದೇಶದಲ್ಲಿ ಭಿಕ್ಷಾಟನೆ(Begging) ಮಾಡುತ್ತಾರೆ. ಅಂಕಿತ್ ಕುಮಾರ್ ಖಾಸಗಿ ಆಸ್ಪತ್ರೆಯ ಕ್ಯಾಂಟಿನ್‌ನಲ್ಲಿ ಕೆಲಸ ಮಾಡುತ್ತಾನೆ. ಶುಕ್ರವಾರ ತಡರಾತ್ರಿ ಮೆಜೆಸ್ಟಿಕ್ ಬಂದಿರುವ ಅಂಕಿತ್ ಕುಮಾರ್‌ಗೆ ಅಲ್ಲೇ ಇದ್ದ ಸಂಜನಾ ಹಾಗೂ ಅರ್ಚನಾ ಪರಿಚಯವಾಗಿದೆ. ಈ ವೇಳೆ ಏಕಾಂತದಲ್ಲಿ ಸಮಯ ಕಳೆಯಲು ಮೂವರು ಕಾಟನ್ ಪೇಟೆಯ ಲಾಡ್ಜ್‌ವೊಂದಕ್ಕೆ ತೆರಳಿದ್ದರು. ಈ ವೇಳೆ ಹಣಕಾಸಿನ ವಿಚಾರವಾಗಿ(Financial Issue) ಮೂವರ ನಡುವೆ ಗಲಾಟೆ ಆರಂಭವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಅಂಕಿತ್ ಕುಮಾರ್ ಚಾಕುವಿನಿಂದ ಸಂಜನಾ ಮತ್ತು ಅರ್ಚನಾ ಕತ್ತು, ಹೊಟ್ಟೆ ಸೇರಿದಂತೆ ದೇಹದ ಇತರೆ ಭಾಗಗಳಿಗೆ ಮಾರಣಾಂತಿಕ ಹಲ್ಲೆ(Assault) ಮಾಡಿದ್ದಾನೆ. ಈ ಗಲಾಟೆ ವೇಳೆ ಸಂಜನಾ ಮತ್ತು ಅರ್ಚನಾ ಸಹ ಯಾವುದೋ ವಸ್ತುವಿನಿಂದ ಅಂಕಿತ್ ಕುಮಾರ್ ತಲೆಗೆ ಬಲವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಗರ್ಭಿಣಿಯ ಮೇಲೆ ಆಸ್ಪತ್ರೆಯ ಸಿಬ್ಬಂದಿಯಿಂದಲೇ ಅತ್ಯಾಚಾರ!
ಈ ವೇಳೆ ಲಾಡ್ಜ್‌ನ ಕೋಣೆಯಲ್ಲಿ ಚೀರಾಟದ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ರೂಮ್ ಬಾಯ್ ಓಡಿ ಹೋಗಿ ನೋಡಿದಾಗ ಮೂವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬಳಿಕ ಲಾಡ್ಜ್ ಸಿಬ್ಬಂದಿ ಮೂವರನ್ನು ಆಸ್ಪತ್ರೆಗೆ(Hospital) ದಾಖಲಿಸಿದ್ದಾರೆ. ಈ ಸಂಬಂಧ ತೃತೀಯ ಲಿಂಗಿಗಳ ಸ್ನೇಹಿತೆ ಕಸ್ತೂರಿ ನೀಡಿದ ದೂರಿನ ಮೇರೆಗೆ ಕಾಟನ್ ಪೇಟೆ ಠಾಣೆ ಪೊಲೀಸರು, ಅಂಕಿತ್ ಕುಮಾರ್ ವಿರುದ್ಧ ಎಫ್‌ಐಆರ್(FIR) ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮೂವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಗಲಾಟೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದಿರುವುದು ಕಂಡು ಬಂದಿದೆ. ಮೂವರು ಚೇತರಿಸಿಕೊಂಡ ಬಳಿಕ ವಿಚಾರಣೆಗೆ ಒಳಪಡಿಸಿದಾಗ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.