ಬೆಂಗಳೂರು [ಜ.24]:  ಸ್ಯಾಂಡಲ್ ವುಡ್ ನಟಿ ಸಂಜನಾ ಡ್ರೈವಿಂಗ್ ವೇಳೆ ಸೆಲ್ಫಿ ವಿಡಿಯೋ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ನಟಿ ಸಂಜನಾ ಸಮಯಾವಕಾಶ  ಕೇಳಿದ್ದಾರೆ. 

ಇಂದು ಕೋರ್ಟ್ ಗೆ ಹಾಜರಾಗುವಂತೆ ನಟಿ ಸಂಜನಾಗೆ ಬನಶಂಕರಿ ಸಂಚಾರಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. 

ಸದ್ಯ ಶೂಟಿಂಗ್ ಹಿನ್ನಲೆ ಸಂಜನಾ ದುಬೈಗೆ ತೆರಳಿದ್ದು, ಈ ಹಿನ್ನಲೆ ಇಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಕಾರಣ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಮರಳಿದ ಬಳಿಕ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ. 

KPL ಬೆಟ್ಟಿಂಗ್ ಪ್ರಶ್ನೆಗೆ ಸಂಜನಾ ಅಚ್ಚರಿ ಉತ್ತರ! ಕ್ರಿಕೆಟ್ ಪ್ರಿಯರು ತತ್ತರ.

ಸಂಜನಾ ಸೆಲ್ಫಿ ವೀಡಿಯೋ ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಂಚಾರಿ ಪೊಲೀಸರು ಈ ಬಗ್ಗೆ ಸ್ಪಷ್ಟನೆ ಕೇಳಿ ನೋಟಿಸ್ ನೀಡಿದ್ದರು.  

ಡ್ರೈವಿಂಗ್ ವೇಳೆ ಸೆಲ್ಫಿ ವಿಡಿಯೋ; ಸಂಜನಾಗೆ ನೋಟಿಸ್...

ಬೆಂಗಳೂರಿನಲ್ಲಿ ದುಬಾರಿ ಕಾರಿನಲ್ಲಿ ಸಂಚಾರ ಮಾಡುತ್ತಾ ಸಂಜನಾ ಸೆಲ್ಫಿ ವಿಡಿಯೋ ಮಾಡಿದ್ದರು. ಇದಕ್ಕೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಬಳಿಕ ಸಂಜನಾಗೆ ನೋಟಿಸ್ ನೀಡಲಾಗಿತ್ತು.