ಬಾಗಲಕೋಟೆ: ಬಸ್ ಹತ್ತುವಾಗ ಉಂಟಾಗುವ ರಶ್ ಸಮಯದಲ್ಲಿ ಚಿನ್ನ ಎಗರಿಸುತ್ತಿದ್ದ ಖರ್ತನಾಕ್ ಕಳ್ಳಿಯರ ಬಂಧನ..!
ಬಂಧಿತ ಕಳ್ಳಿಯರು ಬಸ್ ನಿಲ್ದಾಣದಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದರಂತೆ. ಬಸ್ ಹತ್ತುವಾಗ ಉಂಟಾಗುವ ರಶ್ ಸಮಯದಲ್ಲಿ ಖತರ್ನಾಕ್ ಗ್ಯಾಂಗ್ ಚಿನ್ನ ಎಗರಿಸುತ್ತಿತ್ತು. ಬಂಧಿತರಿಂದ 6 ಲಕ್ಷ ಮೌಲ್ಯದ 91.98 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ.
ಬಾಗಲಕೋಟೆ(ಆ.29): ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡ್ತಿದ್ದ ಖರ್ತನಾಕ್ ಗ್ಯಾಂಗ್‌ನ ಕಳ್ಳಿಯರನ್ನ ಬಾಗಲಕೋಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿ ಮೂಲದ ರೋಶನಿ ಚೌಗಲೆ, ರೇಣುಕಾ ವರಗಂಡೆ, ಸವಿತಾ ಲೋಂಡೆ ಬಂಧಿತ ಕಳ್ಳಿಯರು.
ಬಂಧಿತ ಕಳ್ಳಿಯರು ಬಸ್ ನಿಲ್ದಾಣದಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದರಂತೆ. ಬಸ್ ಹತ್ತುವಾಗ ಉಂಟಾಗುವ ರಶ್ ಸಮಯದಲ್ಲಿ ಖತರ್ನಾಕ್ ಗ್ಯಾಂಗ್ ಚಿನ್ನ ಎಗರಿಸುತ್ತಿತ್ತು. ಬಂಧಿತರಿಂದ 6 ಲಕ್ಷ ಮೌಲ್ಯದ 91.98 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ.
ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ; 24 ಗಂಟೆಯೊಳಗೆ ಬಂಧಿಸಿದ ಮಣಿಪಾಲ ಪೊಲೀಸರು!
ಬಾಗಲಕೋಟೆ ಶಹರ ಪೊಲೀಸರು ಕಾರ್ಯಾಚರಣೆ ನಡೆಸುವ ಮೂಲಕ ಕಳ್ಳಿಯರನ್ನ ಬಂಧಿಸಿದ್ದಾರೆ. ಬಾಗಲಕೋಟೆಯ ಭಾರತಿ ಹಿರೇಮಠ ದೂರು ಆಧರಿಸಿ ಕಳ್ಳಿಯರನ್ನ ಬಂಧಿಸಲಾಗಿದೆ. ಭಾರತಿ ಅವರ 11 ಗ್ರಾಂ ಚಿನ್ನಾಭರಣ ಕಳುವಾಗಿತ್ತು. ಈ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು. ಆಗಸ್ಟ್ 19 ರಂದು ಕಳ್ಳತನ ನಡೆದಿತ್ತು. ಒಟ್ಟು 6.60 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿದ್ದವು.