Asianet Suvarna News Asianet Suvarna News

ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ; 24 ಗಂಟೆಯೊಳಗೆ ಬಂಧಿಸಿದ ಮಣಿಪಾಲ ಪೊಲೀಸರು!

ಪ್ರಯಾಣದ ವೇಳೆ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರು-ಮುರ್ಡೇಶ್ವರ ರೈಲಿನಲ್ಲಿ ನಡೆದಿದೆ. ಯುವತಿಯಿಂದ ಮಾಹಿತಿ ಪಡೆದ 24 ಗಂಟೆಯೊಳಗೆ ಮಣಿಪಾಲ ಪೊಲೀಸರು ಕಾರ್ಯಾಚರಣೆ ಆರೋಪಿಯನ್ನು ಬಂಧಿಸಿದ್ದಾರೆ.

Sexual harassment by miscreants in bengaluru murdeshwar express train accused arrested by manipal police rav
Author
First Published Aug 29, 2024, 3:04 PM IST | Last Updated Aug 29, 2024, 3:04 PM IST

ಉಡುಪಿ (ಆ.29): ಪ್ರಯಾಣದ ವೇಳೆ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರು-ಮುರ್ಡೇಶ್ವರ ರೈಲಿನಲ್ಲಿ ನಡೆದಿದೆ. ಯುವತಿಯಿಂದ ಮಾಹಿತಿ ಪಡೆದ 24 ಗಂಟೆಯೊಳಗೆ ಮಣಿಪಾಲ ಪೊಲೀಸರು ಕಾರ್ಯಾಚರಣೆ ಆರೋಪಿಯನ್ನು ಬಂಧಿಸಿದ್ದಾರೆ.

 ಭಟ್ಕಳದ ಶುರೈಂ(22) ಬಂಧಿತ ಆರೋಪಿ, ಭಾನುವಾರ ಬೆಳಗ್ಗೆ ನಡೆದಿದ್ದ ಘಟನೆ. ರೈಲಿನಲ್ಲಿ ಪ್ರಯಾಣಿಸುವಾಗ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ. ಈ ಬಗ್ಗೆ ತಕ್ಷಣ ಮಣಿಪಾಲ ಪೊಲೀಸರಿಗೆ ಮಾಹಿತಿ ನೀಡಿದ್ದ ಯುವತಿ. ಕಾರ್ಯಪ್ರವೃತ್ತರಾದ ಪೊಲೀಸರು. ಯುವತಿ ನೀಡಿದ್ದ ಫೋಟೊ ಆಧರಿಸಿ ತನಿಖೆ ಶುರು ಮಾಡಿದ್ದಾರೆ.  ಶನಿವಾರ ಬೆಂಗಳೂರು-ಮುರ್ಡೇಶ್ವರ ರೈಲಿನಲ್ಲಿ ಸಾವಿರಾರು ಜನರು ಪ್ರಯಾಣಿಸಿದ್ದರು. ಆದರೂ ಆರೋಪಿಗಳನ್ನು ಚಾಣಾಕ್ಷತನದಿಂದ ಪತ್ತೆ ಹಚ್ಚಿದ ಪೊಲೀಸರು.

ಸೆಕ್ಸ್‌ಗಾಗಿ 286 ಯುವತಿಯರಿಗೆ ಬ್ಲಾಕ್‌ಮೇಲ್ ಮಾಡಿದ್ದ ಯುಟ್ಯೂಬರ್‌ಗೆ ಪ್ರಕಟವಾಯ್ತು ಶಿಕ್ಷೆ!

ಮೊದಲಿಗೆ ರೈಲಿನಲ್ಲಿ ಪ್ರಯಾಣಿಸಿದ ಎಲ್ಲ ಪ್ರಯಾಣಿಕರ ವಿವರ ಪಡೆದುಕೊಂಡ ಪೊಲೀಸರು. ಬಳಿಕ ಶಾರ್ಟ್ ಲಿಸ್ಟ್ ಮಾಡಿಕೊಂಡಿದ್ದರು. ಮೂರು ಹಂತಗಳಲ್ಲಿ ಶಾರ್ಟ್ ಲಿಸ್ಟ್ ಮಾಡಿಕೊಂಡು ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು. ಆರೋಪಿ ಭಟ್ಕಳದಲ್ಲಿ ಇಳಿದುಹೋಗಿದ್ದನ್ನು ಪತ್ತೆ ಮಾಡಿದ ಪೊಲೀಸರು. ಯುವತಿ ಕಳಿಸಿದ ಫೋಟೊಕ್ಕೂ ಭಟ್ಕಳದಲ್ಲಿ ಇಳಿದವನದು ಮ್ಯಾಚ್ ಆಗಿದೆ. ಬಳಿಕ ಆರೋಪಿ ಅಲ್ಲಿದ ತೆರಳಿದ್ದರ ಬಗ್ಗೆ ಇಂಚಿಂಚು ಸಿಸಿಟಿವಿ ಪೂಟೇಜ್ ಆಧರಿಸಿ ಆರೋಪಿಯ ನಿವಾಸದಿಂದ ಎಳೆದುಕೊಂಡ ಬಂಧ ಪೊಲೀಸರು. 

ಸದ್ಯ ಆರೋಪಿ ಪೊಲೀಸರ ವಶದಲ್ಲಿ ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ. 

Latest Videos
Follow Us:
Download App:
  • android
  • ios