Asianet Suvarna News Asianet Suvarna News

ಗದಗ: ರಸ್ತೆ ಅಪಘಾತದಲ್ಲಿ ಮಗು ಸೇರಿ ಅಣ್ಣ-ತಂಗಿ ಸ್ಥಳದಲ್ಲೇ ಸಾವು

* ಗೂಡ್ಸ್ ಲಾರಿ  ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತ
* ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು
* ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಘಟನೆ

Three members of same family Dies In Road Accident at gadag District rbj
Author
Bengaluru, First Published Sep 18, 2021, 7:10 PM IST
  • Facebook
  • Twitter
  • Whatsapp

ಗದಗ, (ಸೆ.18): ಗೂಡ್ಸ್ ಲಾರಿ  ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

ಈ ದುರ್ಘಟನೆ ಇಂದು (ಸೆ.18) ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದ ಬಳಿ ನಡೆದಿದೆ. ಒಂದೇ ಬೈಕ್ ಪ್ರಯಾಣ ಬೆಳೆಸಿದ್ದ ಅಣ್ಣ-ತಂಗಿ ಹಾಗೂ ತಂಗಿ ಮಗು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಕೇವಲ 20 ರೂ. ಸಲುವಾಗಿ ಸ್ನೇಹಿತನನ್ನೇ ಬಡಿದು ಕೊಂದರು..!

 ಸಾವನ್ನಪ್ಪಿದವರು‌ ಶಿರಹಟ್ಟಿ ತಾಲೂಕಿನ ಕನಕವಾಡ ಗ್ರಾಮದವರೆಂದು ತಿಳಿದುಬಂದಿದೆ. ಮುಂಡರಗಿ ಪಟ್ಟಣದಿಂದ ಶಿರಹಟ್ಟಿ ಪಟ್ಟಣದತ್ತ ಅತೀ ವೇಗವಾಗಿ ಚಲಿಸುತ್ತಿದ್ದ ಲಾರಿ  ಬೈಕ್ ಗೆ ಡಿಕ್ಕಿ ಹೊಡೆದಿದೆ.

ಇದರ ಪರಿಣಾಮ ಬೈಕ್ ನಲ್ಲಿ ಮುಂಡರಗಿ ಪಟ್ಟಣದತ್ತ ತೆರಳುತ್ತಿದ್ದ ಅಣ್ಣ, ತಂಗಿ ಹಾಗೂ ತಂಗಿಯ ಮಗು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮುಂಡರಗಿ ಸಿಪಿಐ ಸುನೀಲ್ ಸವದಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

Follow Us:
Download App:
  • android
  • ios