Asianet Suvarna News Asianet Suvarna News

ಬಾಗಲಕೋಟೆಯಲ್ಲಿ ಸರಣಿ ಅಪಘಾತ: ಕಾರು, ಬೈಕ್‌ಗಳಿಗೆ ಡಿಕ್ಕಿ ಹೊಡೆದ ಲಾರಿಗೆ ಸಿಕ್ಕು ಮೂವರ ಸಾವು

ಬಾಗಲಕೋಟೆ ಜಿಲ್ಲೆಯ ರಕ್ಕಸಗಿ ಗ್ರಾಮದಲ್ಲಿ ನಿಯಂತ್ರಣ ತಪ್ಪಿದ ಲಾರಿಯಿಂದ ಸರಣಿ ಅಪಘಾತ ಸಂಭವಿಸಿದ್ದು, ಇದರಲ್ಲಿ ಕಾರು, ಬೈಕ್‌ಗಳಲ್ಲಿ ಹೋಗುತ್ತಿದ್ದ ಮೂವರು ಸಾವನ್ನಪ್ಪಿದ್ದಾರೆ.

Three killed in serial accident lorry collision in Rakkasagi village of Bagalkot sat
Author
First Published Jun 8, 2023, 5:54 PM IST

ಬಾಗಲಕೋಟೆ (ಜೂ.08): ಬಾಗಲಕೋಟೆ ಜಿಲ್ಲೆಯ ರಕ್ಕಸಗಿ ಗ್ರಾಮದಲ್ಲಿ ನಿಯಂತ್ರಣ ತಪ್ಪಿದ ಲಾರಿಯಿಂದ ಸರಣಿ ಅಪಘಾತ ಸಂಭವಿಸಿದ್ದು, ಇದರಲ್ಲಿ ಕಾರು, ಬೈಕ್‌ಗಳಲ್ಲಿ ಹೋಗುತ್ತಿದ್ದ ಮೂವರು ಲಾರಿ ಚಕ್ರಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಇತ್ತೀಚೆಗೆ ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಕಾರು - ಖಾಸಗಿ ಬಸ್‌ ನಡುವೆ ಭೀಕರ ಅಪಘಾತದಲ್ಲಿ ಬಳ್ಳಾರಿಯ ಮೂಲದ ಒಟ್ಟು 10 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಇನ್ನು ಈ ಘಟನೆ ಮಾಸುವ ಮುನ್ನವೇ ಈಗ ಬಾಗಲಕೋಟೆಯಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದ ಸಮೀಪ ಘಟನೆ ನಡೆದಿದೆ. ಬಾಗಲಕೋಟೆಯ ಕಡೆಯಿಂದ ಅಮೀನಗಡ ಮಾರ್ಗವಾಗಿ ಹೊಸಪೇಟೆಗೆ ಹೊರಟಿದ್ದ ಬೃಹತ್‌ ಟ್ರಕ್‌ನಿಂದ ಸರಣಿ ಅಪಘಾತ ಸಂಭವಿಸಿದೆ. ಟ್ರಕ್ ಚಾಲಕನ  ನಿಯಂತ್ರಣ ತಪ್ಪಿ ಮೊದಲು ಬೈಕ್‌ಗೆ ಡಿಕ್ಕಿ ಹೊಡೆದ ಲಾರಿ, ನಂತರ ಕಾರು, ಬೈಕ್‌ಗಳು ಸೇರಿದಂತೆ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ನಂತರ ರಸ್ತೆಯ ಪಕ್ಕದಲ್ಲಿದ್ದ ಹಳ್ಳಕ್ಕೆ ಉರುಳಿ ಬಿದ್ದಿದೆ. 

ಕೋಡಿಮಠ ಶ್ರೀಗಳ ಭವಿಷ್ಯ: ದೇಶಕ್ಕೆ ಕಾದಿದೆ ಮತ್ತೊಂದು ಗಂಡಾಂತರ, ಸಮುದ್ರದಲ್ಲಿ 2 ರಾಷ್ಟ್ರ ಮುಳುಗಡೆ

ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಲಾರಿ: ಇನ್ನು ಲಾರಿ ಅಪಘಾತದಿಮದ ಬೈಕ್‌ಗಳಲ್ಲಿ ಹೋಗುತ್ತಿದ್ದ ಒಟ್ಟು ಮೂವರು ಸವಾರರು ಲಾರಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಅಪ್ಪಚ್ಚಿಯಾಗಿ ಸಾವನ್ನಪ್ಪಿದ್ದಾರೆ. ಬೈಕ್‌ಗಳು ಹಾಗೂ ಕಾರುಗಳಿಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದ್ದು, ಇದು ಲಾರಿ ಚಾಲಕನ ನಿರ್ಲಕ್ಷ್ಯ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಲಾರಿ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುತ್ತಿದ್ದಂತೆಯೇ ಲಾರಿಯನ್ನು ಬಿಟ್ಟು ಚಾಲಕ ಪರಾರಿ ಆಗಿದ್ದಾನೆ. ನಂತರ ಲಾರಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ರಸ್ತೆಯ ಬದಿಗೆ ಪಲ್ಟಿಯಾಗಿದೆ. 

ರಕ್ಕಸಗಿ ಗ್ರಾಮದವರ ರಕ್ಕಸ ಸಾವು: ಅಮೀನಗಡ ಹಾಗೂ ರಕ್ಕಸಗಿ ಗ್ರಾಮದ ನಡುವೆ ನಡೆದ ಘಟನೆಯಲ್ಲಿ ಎರಡು ಪ್ರತ್ಯೇಕ ಬೈಕ್‌ನಲ್ಲಿದ್ದ ಹೋಗುತ್ತಿದ್ದ ಮೂವರ ಸಾವನ್ನಪ್ಪಿದ್ದಾರೆ. ಓರ್ವ ಯುವಕ ಹಾಗೂ ಇಬ್ಬರು ಮಹಿಳೆಯರ ದೇಹಗಳು ಪತ್ತೆಯಾಗಿವೆ. ಇನ್ನು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯೆ ಸಾವನ್ನಪ್ಪಿದ್ದಾರೆ. ಮೃತರನ್ನು ರಕ್ಕಸಗಿ ಗ್ರಾಮದವರು ಎಂದು ಗುರುತಿಸಲಾಗಿದ್ದು, ಮೃತ ಹೆಸರು ಇನ್ನೂ ತಿಳಿದುಬಂದಿಲ್ಲ. ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. 

ಹೆಣ್ಣು ಮಗುವನ್ನು ಬೇಲಿಯಲ್ಲಿ ಎಸೆದ ಪಾಪಿ ತಾಯಿ: ಕೊಪ್ಪಳ (ಜೂ.08): ರಾಜ್ಯದಲ್ಲಿ ಮಕ್ಕಳಿಲ್ಲದೇ ಸಾಕಷ್ಟು ಜನರು ಜೀವನಪೂರ್ತಿ ಬಳಲುವುದನ್ನು ನಾವು ನೋಡಿದ್ದೇವೆ. ಆದರೆ, ಹೆಣ್ಣು ಮಗು ಹುಟ್ಟಿದೆ ಎಂಬ ಕಾರಣಕ್ಕೆ ಬೆಳಗ್ಗೆ ತಾನೆ ಹುಟ್ಟಿದ ಇನ್ನೂ ಕಣ್ಣನ್ನು ಬಿಡದ ನವಜಾತ ಶಿಶುವನ್ನು ಮುಳ್ಳಿನ ಬೇಲಿಯಲ್ಲಿ ಬೀಸಾಡಿ ಹೋಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ. 

ರಾಮನಗರದಲ್ಲಿ ಇಬ್ಬರು ರೈತರನ್ನು ಬಲಿ ಪಡೆದಿದ್ದ ಪುಂಡಾನೆ ಸೆರೆ: ನಾಗರಹೊಳೆ ಅಭಿಮನ್ಯು ಸಾಹಸಕ್ಕೆ ಮೆಚ್ಚುಗೆ

ಹೆಣ್ಣು ಮಗು ಎಂದು ನವಜಾತ ಶಿಶುವನ್ನು ಮುಳ್ಳಿನಲ್ಲಿ ಎಸೆದು ಹೋದ ಪಾಪಿ ತಾಯಿ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪ್ರಗತಿನಗರ ಗ್ರಾಮದಲ್ಲಿ ಘಟನೆ ನಡೆದಿದೆ. ಬೆಳಗಿನ ಜಾವ ನವಜಾತ ಶಿಶು ಅಳುವುದನ್ನು ಕಂಡ ಸ್ಥಳೀಯರು. ನವಜಾತ ಶಿಶುವನ್ನು ರಕ್ಷಣೆ ಮಾಡಿ ಆರೈಕೆ ಮಾಡಿದ್ದಾರೆ. ಹೆರಿಗೆಯಾದ ಬಳಿಕ ಮಗುವನ್ನು ಎಸೆದು ಹೋದ ಪಾಪಿ ತಾಯಿಯನ್ನು ಹುಡಕಿದರೂ ಪತ್ತೆಯಾಗಿಲ್ಲ. ನಂತರ, ಸ್ಥಳೀಯ ಮಹಿಳೆಯರು ಮಗುವನ್ನು ರಕ್ಷಣೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪ್ರಗತಿನಗರ ಗ್ರಾಮದ ಗಂಗಮ್ಮ ಎನ್ನುವವರ ಮನೆಯಲ್ಲಿ ಮಗು ಆರೈಕೆ ಆಗುತ್ತಿದೆ. ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ಮಾಡಿದ್ದಾರೆ. 

Follow Us:
Download App:
  • android
  • ios