3 ದಿನದ ಹಸುಳೆ ಗದಗ ಎಪಿಎಂಸಿ ಆವರಣದಲ್ಲಿ ಪತ್ತೆ; ಮನುಷ್ಯತ್ವ ಮರೆತ ಪಾಪಿಗಳು!
ತಾಯ್ತನ ಮರೆತ ಮಹಿಳೆಯೊಬ್ಬಳು ತನ್ನ ಮೂರು ದಿನದ ಗಂಡು ಹಸುಗೂಸನ್ನು ರಟ್ಟಿನ ಡಬ್ಬದಲ್ಲಿ ಹಾಕಿ ಕೊಳಚೆ ಜಾಗದಲ್ಲಿ ಇಟ್ಟು ಹೋದ ಘಟನೆ ಗದಗದಲ್ಲಿ ನಡೆದಿದೆ. ಗದಗ ಎಪಿಎಂಸಿ ಆವರಣದ ಜನನಿಬಿಡ ಪ್ರದೇಶದಲ್ಲಿ ಬೇವಿನ ತಪ್ಪಲಿನಲ್ಲಿ ಮುಚ್ಚಿ ಬಿಟ್ಟು ಹೋಗಿದ್ದಾಳೆ.
ಗದಗ (ನ.28): ಹೆತ್ತವರಿಗೆ ಹೆಗ್ಗಣ ಮುದ್ದು ಅಂತಾರೆ. ಮಗು ಹೇಗೆ ಹುಟ್ಟಿದರೂ ಅದನ್ನು ಪ್ರೀತಿಸುತ್ತಾಳೆ. ತಾಯಿಗೆ ಆ ಮಗುವೇ ಜಗತ್ತಿನ ಅತ್ಯಂತ ಸುಂದರ ಮಗುವಾಗಿರುತ್ತದೆ. ಹೆತ್ತ ಮಗುವಿಗೆ ಚಿಕ್ಕ ಪೆಟ್ಟಾದರೂ ತುಂಬಾ ನೋವು ಆಗುವುದು ತಾಯಿಗೆ. ತಾಯಿ-ಮಗುವಿನ ಕರುಳಬಳ್ಳಿಯ ಸಂಬಂಧ ಅಂಥದ್ದು. ಆದರೆ ಕೆಲವು ತಾಯಂದಿರುವ ಹಸುಗೂಸು ಬೀದಿಯಲ್ಲಿ ಕಸದಬುಟ್ಟಿಯಲ್ಲಿ ಹಾಕುವ ಕೃತ್ಯ ತಾಯ್ತನಕ್ಕೆ ಕಳಂಕ ತರುವಂಥದ್ದು. ಇಂಥ ಘಟನೆಗಳು ನಡೆದಾಗ ಯಾರಿಗಾದರೂ ಬೇಸರವೆನಿಸುವುದು ಸುಳ್ಳಲ್ಲ.
ತಾಯ್ತನ ಮರೆತ ಮಹಿಳೆಯೊಬ್ಬಳು ತನ್ನ ಮೂರು ದಿನದ ಗಂಡು ಹಸುಗೂಸನ್ನು ರಟ್ಟಿನ ಡಬ್ಬದಲ್ಲಿ ಹಾಕಿ ಕೊಳಚೆ ಜಾಗದಲ್ಲಿ ಇಟ್ಟು ಹೋದ ಘಟನೆ ಗದಗದಲ್ಲಿ ನಡೆದಿದೆ. ಗದಗ ಎಪಿಎಂಸಿ ಆವರಣದ ಜನನಿಬಿಡ ಪ್ರದೇಶದಲ್ಲಿ ಬೇವಿನ ತಪ್ಪಲಿನಲ್ಲಿ ಮುಚ್ಚಿ ಬಿಟ್ಟು ಹೋಗಿದ್ದಾಳೆ. ಮಗುವಿನ ಸ್ಥಿತಿ ನೋಡಿದರೆ ಎಂಥವರಿಗೂ ಮನಕಲುಕುತ್ತದೆ. ಆ ತಾಯಿಗೆ ಮನುಷ್ಯತ್ವವೇ ಇಲ್ಲವೆ ಎಂಬ ಪ್ರಶ್ನೆ ಮುಡುತ್ತದೆ. ರಟ್ಟಿನಲ್ಲಿ ಮುಚ್ಚಿಟ್ಟು ಬಿಸಾಡಿ ಹೋಗಿರುವ ಪಾಪಿಗಳು. ಮಗುವಿನ ಚಿರಾಟದ ಸದ್ದು ಕೇಳಿ. ಪೊಲೀಸರಿಗೆ ಮಾಹಿತಿ ನೀಡಿರುವ ಆಕಾಶ ಎಂಬ ಯುವಕ. ಬಡಾವಣೆ ಕಾನ್‌ಸ್ಟೇಬಲ್ ಕಾನಸ್ಟೇಬಲ್ ಗಳಾದ ಪರಶುರಾಮ ದೊಡ್ಡಮನಿ, ಅಶೋಕ್ ಸ್ಥಳಕ್ಕೆ ಬಂದು ನೋಡಿದಾಗ ರಟ್ಟಿನ ಡಬ್ಬದಲ್ಲಿ ಮುದ್ದಾದ ಗಂಡುಮಗು ಇರುವುದು ಗೊತ್ತಾಗಿದೆ. ತಕ್ಷಣ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಮಗು ರಕ್ಷಣೆ ಮಾಡಿದ್ದಾರೆ.
ಎಪಿಎಂಸಿ ಆವರಣದಲ್ಲಿ ಹಂದಿಗಳು ಹೆಚ್ಚಿರುವುದರಿಂದ ಸ್ವಲ್ಪ ವಿಳಂಬವಾಗಿದ್ದರೂ ಹಂದಿ, ನಾಯಿಗಳ ಪಾಲಾಗುತ್ತಿದ್ದ ಮಗು. ಯುವಕನ ಸಮಯ ಪ್ರಜ್ಞೆ, ಪೊಲೀಸರ ಸಹಾಯದಿಂದ ಮಗು ಮರುಜನ್ಮ ಪಡೆದಿದೆ. ಗದಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆರಿಗೆ ಆಸ್ಪತ್ರೆ ಮುಂದೆಯೇ ರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ