ದೆಹಲಿಯ ಫ್ಲ್ಯಾಟ್‌ ಒಂದರಲ್ಲಿ 50 ವರ್ಷದ ಮಹಿಳೆಯೊಬ್ಬಳು ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಮನೆಯಲ್ಲೇ ‘ವಿಷಾನಿಲದ ಚೇಂಬರ್‌’ ಸೃಷ್ಟಿಸಿ ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ವರದಿಯಾಗಿದೆ. 

ನವದೆಹಲಿ (ಮೇ.23): ದೆಹಲಿಯ ಫ್ಲ್ಯಾಟ್‌ ಒಂದರಲ್ಲಿ 50 ವರ್ಷದ ಮಹಿಳೆಯೊಬ್ಬಳು ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಮನೆಯಲ್ಲೇ ‘ವಿಷಾನಿಲದ ಚೇಂಬರ್‌’ ಸೃಷ್ಟಿಸಿ ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ವರದಿಯಾಗಿದೆ. ಮೂವರು ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರವನ್ನು ಬರೆದಿಟ್ಟು ಗೋಡೆಗೆ ಅಂಟಿಸಿದ್ದು, ವಸಂತ ವಿಹಾರದ ಐಷಾರಾಮಿ ಫ್ಲಾಟಿನಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಮೃತಪಟ್ಟ ಮಹಿಳೆಯನ್ನು ಮಂಜು ಶ್ರೀ ವಾಸ್ತವ ಹಾಗೂ ಇಬ್ಬರು ಮಕ್ಕಳನ್ನು ಆಂಶಿಕಾ ಹಾಗೂ ಅಂಕು ಎಂದು ಗುರುತಿಸಲಾಗಿದೆ. ಕಳೆದ ವರ್ಷ ಕೋವಿಡ್‌ನಿಂದ ಮಂಜು ಅವರ ಪತಿ ಉಮೇಶ್‌ ಚಂದ್ರ ಶ್ರೀವಾಸ್ತವ ಮೃತಪಟ್ಟಿದ್ದರು. ಪತಿ ನಿಧನದ ನಂತರ ಮಂಜು ಅವರು ಹಾಸಿಗೆ ಹಿಡಿದಿದ್ದರು. ಮಂಜು ಸೇರಿದಂತೆ ಇಬ್ಬರು ಮಕ್ಕಳು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಮೂವರ ಮೃತದೇಹಗಳು ಮಲಗುವ ಕೋಣೆಯಲ್ಲಿ ಒಂದೇ ಹಾಸಿಗೆಯ ಮೇಲೆ ಸಿಕ್ಕಿದೆ.

22ನೇ ಮಹಡಿಯಿಂದ ಜಿಗಿದು ಯುವಕ ಯುವತಿ ಆತ್ಮಹತ್ಯೆ

ಆತ್ಮಹತ್ಯೆಗೆ ವಿನೂತನ ಮಾರ್ಗ: ಆತ್ಮಹತ್ಯೆಗೆ ಇವರು ವಿನೂತನ ಮಾರ್ಗವನ್ನು ಆಯ್ದುಕೊಂಡಿದ್ದಾರೆ. ಮನೆಯ ಕಿಟಕಿ, ಬಾಗಿಲು ಹಾಗೂ ವೆಂಟಿಲೇಟರ್‌ಗಳನ್ನು ಆಲ್ಯುಮಿನಿಯಂ ಫಾಯಿಲ್‌ ನಂತಹ ಹಾಳೆಯಿಂದ ಗಾಳಿಯಾಡದಂತೇ ಸೀಲ್‌ ಮಾಡಲಾಗಿದ್ದಾರೆ. ಮನೆಯಲ್ಲಿನ ಹೊಗೆಯು ಹೊರಗಡೆ ಹೋಗದಂತೆ ಹಾಗೂ ಹೊರಗಿನವರಿಗೆ ಮನೆಯಲ್ಲೇನು ನಡೆಯುತ್ತಿದೆ ಎಂಬುದು ಕಾಣದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಎಲ್ಲ ವಸ್ತುಗಳನ್ನು ಆನ್ಲೈನ್‌ ಮೂಲಕ ಆರ್ಡರ್‌ ಮಾಡಿ ತರಿಸಿದ್ದಾರೆ. ನಂತರ ಮನೆಯ ಗ್ಯಾಸ್‌ ಸಿಲಿಂಡರ್‌ ಆನ್‌ ಮಾಡಿದ್ದು, ಪಕ್ಕದಲ್ಲಿ ಅಗ್ಗಿಷ್ಟಿಕೆಯನ್ನು ಉರಿಸಿದ್ದಾರೆ. ಗ್ಯಾಸ್‌ ಹಾಗೂ ಕಲ್ಲಿದ್ದಲಿನ ಹೊಗೆಯು ಕಾರ್ಬನ್‌ ಮೊನಾಕ್ಸೈಡ್‌ ಎಂಬ ವಿಷಾನಿಲವನ್ನು ಉತ್ಪತ್ತಿ ಮಾಡಿದೆ. ಮನೆಯನ್ನು ಗ್ಯಾಸ್‌ ಚೇಂಬರ್‌ನಂತೆ ಪ್ಯಾಕ್‌ ಮಾಡಿದ್ದರಿಂದ ಗಾಳಿಯಾಡದೇ ಮೂವರು ಈ ವಿಷಾನಿಲದಿಂದಾಗಿ ಮೃತಪಟ್ಟಿದ್ದಾರೆ.

ಮುತ್ತೈದೆಯಂತೆ ಅಂತ್ಯಸಂಸ್ಕಾರ ಮಾಡ್ಬೇಡಿ, ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ 25ರ ನವವಿವಾಹಿತೆ!

ಆತ್ಮಹತ್ಯಾ ಪತ್ರ: ಇದಲ್ಲದೇ ಮನೆಯಲ್ಲಿ ಆತ್ಮಗತ್ಯೆ ಮಾಡಿಕೊಳ್ಳುತ್ತಿರುವುದಾಗಿ ಗೋಡೆಗೆ ಅಂಟಿಸಿದ ಪತ್ರದಲ್ಲಿ ‘ಇನ್ಯಾರಿಗೂ ಇದರಿಂದಾಗಿ ತೊಂದರೆಯಾಗಬಾರದು’ ಎಂಬ ವಿಶೇಷ ಸೂಚನೆಗಳನ್ನು ಬರೆದಿಡಲಾಗಿದೆ. ‘ಮನೆಯಲ್ಲಿ ಕಾರ್ಬನ್‌ ಮೊನಾಕ್ಸೈಡ್‌ ಇದ್ದು, ಇದು ಮಾರಣಾಂತಿಕವಾಗಿದೆ. ಇದು ಅತ್ಯಂತ ದಹನಶೀಲವೂ ಆಗಿದೆ. ಈ ಗಾಳಿಯನ್ನು ಉಸಿರಾಡಬೇಡಿ. ಮನೆಯ ಕಿಟಕಿ ಹಾಗೂ ಬಾಗಿಲುಗಳನ್ನು ತೆರೆದು, ಫ್ಯಾನ್‌ ಹಚ್ಚಿ ವಿಷಾನಿಲವನ್ನು ಹೊರಹೋಗುವಂತೆ ಮಾಡಿ. ಯಾವುದೇ ಕಾರಣಕ್ಕೂ ಬೆಂಕಿ ಕಡ್ಡಿ ಅಥವಾ ಮೇಣದ ಬತ್ತಿಯನ್ನು ಹಚ್ಚದಿರಿ. ಮನೆಯ ಪರದೆಗಳನ್ನು ಸರಿಸುವಾಗಲೂ ಎಚ್ಚರವಿರಿಲಿ. ಕೋಣೆಯು ಅಪಾಯಕಾರಿ ಅನಿಲದಿಂದ ತುಂಬಿದೆ’ ಎಂದು ಪತ್ರದಲ್ಲೇ ಎಚ್ಚರಿಕೆಯನ್ನು ನೀಡಲಾಗಿದೆ. ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ.