22ನೇ ಮಹಡಿಯಿಂದ ಜಿಗಿದು ಯುವಕ ಯುವತಿ ಆತ್ಮಹತ್ಯೆ

  • ಕಟ್ಟಡದ 22ನೇ ಮಹಡಿಯಿಂದ ಜಿಗಿದು ಯುವಕ ಯುವತಿ ಆತ್ಮಹತ್ಯೆ
  • ಗ್ರೇಟರ್ ನೋಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಘಟನೆ
Man Woman Jump Off 22nd Floor Of Noida Flat Dies akb

ನೋಯ್ಡಾ: ಕಟ್ಟಡದ 22ನೇ ಮಹಡಿಯಿಂದ ಜಿಗಿದು ಯುವಕ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗ್ರೇಟರ್‌ ನೋಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ನಡೆದಿದೆ. ಇಬ್ಬರು ತಮ್ಮ 20ರ ಹರೆಯದಲ್ಲಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಈ ಅನಾಹುತ ಸಂಭವಿಸಿದೆ. ಪಶ್ಚಿಮ ಗ್ರೇಟರ್‌ ನೋಯ್ಡಾದ ಅಥವಾ ನೋಯ್ಡಾ ಎಕ್ಸ್‌ಟೆನ್ಷನ್‌ (Noida Extension) ಎಂದೂ ಕರೆಯಲ್ಪಡುವ  ಬಿಸ್ರಾಕ್‌ ಪೊಲೀಸ್‌ ಸ್ಟೇಷನ್ (Bisrakh police station) ವ್ಯಾಪ್ತಿಯಲ್ಲಿ ಇರುವ ಹೌಸಿಂಗ್ ಸೊಸೈಟಿಯಲ್ಲಿ ಈ ಅವಘಡ ಸಂಭವಿಸಿದೆ.  

ಈ ಯುವಕ ಯುವತಿ ಇಬ್ಬರು ಒಬ್ಬರಿಗೊಬ್ಬರು ತಿಳಿದಿದ್ದರು. ಇನ್ನು ಘಟನೆ ನಡೆದ ಫ್ಲಾಟ್‌ ಯುವಕನಿಗೆ ಸೇರಿದ್ದಾಗಿದ್ದು, ಅಲ್ಲಿಗೆ ಗಾಜಿಯಾಬಾದ್‌ನ ಈ ಯುವತಿ ಮುಂಜಾನೆ ಬಂದಿದ್ದಳು ಎಂದು ಆಡಿಷನಲ್ ಡೆಪ್ಯೂಟಿ ಕಮೀಷನರ್ ಆಫ್ ಪೊಲೀಸ್ (Additional Deputy Commissioner of Police) ಇಲಮಾರನ್ ಜಿ.(Elamaran G ) ಹೇಳಿದ್ದಾರೆ. ಆದರೆ ಹೀಗೆ ಆಘಾತಕಾರಿ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂಬ ಬಗ್ಗೆ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕಳೆದ ಮಂಗಳವಾರವಷ್ಟೇ 32 ವರ್ಷದ ಐಟಿ ಉದ್ಯೋಗಿಯೊಬ್ಬರು ನೋಯ್ಡಾದ 74 ನೇ ಸೆಕ್ಟರ್‌ನ ಗ್ರೂಪ್ ಹೌಸಿಂಗ್ ಸೊಸೈಟಿಯಲ್ಲಿದ್ದ ಪ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. 

ಮುತ್ತೈದೆಯಂತೆ ಅಂತ್ಯಸಂಸ್ಕಾರ ಮಾಡ್ಬೇಡಿ, ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ 25ರ ನವವಿವಾಹಿತೆ!

ಅದಕ್ಕೂ ಮೊದಲು ಮೇ.3 ರಂದು ಇಬ್ಬರು ಯುವತಿಯರು ನೊಯ್ಡಾದ ಸೆಕ್ಟರ್‌  93A ಬಳಿ ಸಾವಿಗೆ ಶರಣಾಗಿದ್ದರು. ಅದರಲ್ಲಿ ಒಬ್ಬಳು ಹುಡುಗಿ ತನ್ನ ರೂಮ್‌ನಲ್ಲಿ ನೇಣಿಗೆ ಶರಣಾಗಿದ್ದರೆ ಮತ್ತೊಬ್ಬಳು ಉದ್ಯಾನವನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದಕ್ಕೂ ಮೊದಲು ಫೆಬ್ರವರಿಯಲ್ಲಿ 19 ವರ್ಷದ ಚಾರ್ಟೆಡ್ ಎಕೌಂಟೆಂಟ್ ಸ್ಟೂಡೆಂಟ್ ಒಬ್ಬಳು ನೋಯ್ಡಾದ ಸೆಕ್ಟರ್ 74 ರಲ್ಲಿ ಇರುವ ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಿಂದ ಕೆಳಗೆ ಹಾರಿ ಸಾವಿಗೆ ಶರಣಾಗಿದ್ದಳು.

ವಾಟ್ಸಾಪ್‌ ನಲ್ಲಿ ಬಾಯ್ ಫ್ರೆಂಡ್ ಬ್ಲಾಕ್ ಮಾಡಿದ್ದಕ್ಕೆ ಯುವತಿ ಆತ್ಮಹತ್ಯೆhttps://kannada.asianetnews.com/crime/mumbai-woman-dies-by-suicide-after-boyfriend-blocks-her-on-whatsapp-akb-rc4b9v

ಮಾನಸಿಕ ಆರೋಗ್ಯ ತಜ್ಞರು ಖಿನ್ನತೆಗೆ ಚಿಕಿತ್ಸೆ ನೀಡಬಹುದು ಮತ್ತು ಆತ್ಮಹತ್ಯೆಯನ್ನು ತಡೆಗಟ್ಟಬಹುದು ಎಂದು ನಂಬುತ್ತಾರೆ. ಪೋಷಕರು ಅಥವಾ ಸಂಗಾತಿಯ ಅಥವಾ ಸ್ನೇಹಿತರಂತಹ ಮೊದಲ ವೀಕ್ಷಕರು ಖಿನ್ನತೆಗೊಳಗಾದ ವ್ಯಕ್ತಿಗಳಲ್ಲಿನ ನಡವಳಿಕೆಯ ಬದಲಾವಣೆಗಳನ್ನು ಗುರುತಿಸುತ್ತಾರೆ ಮತ್ತು ಅವರ ಸ್ವಾಭಿಮಾನವನ್ನು ಅವರು ಅನುಮಾನಿಸದಂತೆ ಅವರೊಂದಿಗೆ ಮಾತನಾಡಿ  ಅವರನ್ನು ಸಹಜ ಸ್ಥಿತಿಗೆ ತರಲು ಪ್ರಯತ್ನಿಸುತ್ತಾರೆ. ಸಾವು ಎಲ್ಲ ವಿಚಾರಗಳಿಗೂ ಅಂತಿಮ ಪರಿಹಾರವಲ್ಲ. ಇದ್ದು ಸಾಧಿಸುವಂತದ್ದು ಬೇಕಾದಷ್ಟು ಇದೆ. ಕಷ್ಟವೆಂಬುದು ಬದುಕಿನಲ್ಲಿ ಶಾಶ್ವತವಾಗಿ ಇರುವಂತಹದಲ್ಲ. ಹಾಗಾಗಿ ಕಷ್ಟ ಬಂದಾಗ ಬೆದರದೇ ಅದನ್ನು ಎದುರಿಸುವ ಛಲವನ್ನು ಎಲ್ಲರೂ ಅಳವಡಿಸಬೇಕು. 

ದರೋಡೆಗೆ(Robbery) ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿಯೊಬ್ಬ ಜೈಲಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೆಲ ದಿನಗಳ ಹಿಂದೆ ನಡೆದಿತ್ತು. ಆಜಾದ್‌ ನಗರದ ಮನೋಜ್‌ ಅಲಿಯಾಸ್‌ ಹೂವಾ (22) ಆತ್ಮಹತ್ಯೆ ಮಾಡಿಕೊಂಡವ. ಈತ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ 8ನೇ ಬ್ಯಾರಕ್‌ನ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಚಾಮರಾಜಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇತ್ತೀಚೆಗೆ ದರೋಡೆಗೆ ಯತ್ನ ಪ್ರಕರಣದಲ್ಲಿ ಚಾಮರಾಜಪೇಟೆ ಠಾಣೆ ಪೊಲೀಸರು(Police) ಮನೋಜ್‌ ಸೇರಿದಂತೆ ಐವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. 

Latest Videos
Follow Us:
Download App:
  • android
  • ios