Bengaluru; ಲಾರಿ ಚಾಲಕನಿಗೆ ಥಳಿಸಿ ಹಣ ಸುಲಿದ ಅಪ್ರಾಪ್ತ ಸೇರಿ 3 ಸೆರೆ

  • ಲಾರಿ ಚಾಲಕನಿಗೆ ಥಳಿಸಿ ಹಣ ಸುಲಿದ ಅಪ್ರಾಪ್ತ ಸೇರಿ 3 ಸೆರೆ
  • ಲಾರಿಯಲ್ಲೇ ಮಲಗಿದ್ದ ಚಾಲಕ, ಕ್ಲೀನರ್‌
  • ಮಚ್ಚು ತೋರಿಸಿ ಮೊಬೈಲ್‌ ಕಸಿದ ಪುಡಿ ರೌಡಿಗಳು
  • ಕೊರಿಯರ್‌ ಹೆಸರಿನಲ್ಲಿ ಬ್ಯಾಂಕ್‌ ಖಾತೆಗೆ ಕನ್ನ

 

Three arrested for robbing lorry driver in Bengaluru gow

 ಬೆಂಗಳೂರು (ಜು.11): ರಾತ್ರಿ ಮಲಗಿದ್ದ ಲಾರಿ ಚಾಲಕನ ಮೇಲೆ ಹಲ್ಲೆಗೈದು ಸುಲಿಗೆ ಮಾಡಿದ್ದ ಅಪ್ರಾಪ್ತ ಸೇರಿ ಮೂವರನ್ನು ಯಲಹಂಕ ನ್ಯೂ ಟೌನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪುಟ್ಟೇನಹಳ್ಳಿ ನಿವಾಸಿಗಳಾದ ಮಧು(23), ಸುರೇಶ್‌ (24) ಹಾಗೂ ಅಪ್ರಾಪ್ತ ಬಂಧಿತರು. ಜುಲೈ 5ರಂದು ಸಂಜೆ ತುಮಕೂರಿನಿಂದ ಲಾರಿಯಲ್ಲಿ ಸರಕು ತುಂಬಿಕೊಂಡು ಯಲಹಂಕದ ಪುಟ್ಟೇನಹಳ್ಳಿಗೆ ಬಂದಿದ್ದ ಲಾರಿ ಚಾಲಕ ಗೌತಮ್‌ ಮತ್ತು ಕ್ಲಿನರ್‌ ಪ್ರದೀಪ್‌ ಸರಕು ಅನ್‌ಲೋಡ್‌ ಮಾಡಿದ್ದಾರೆ.

ಸಂಜೆಯಾದ ಹಿನ್ನೆಲೆಯಲ್ಲಿ ಪುಟ್ಟೇನಹಳ್ಳಿ ಕೆರೆ ಬಳಿ ಲಾರಿ ನಿಲ್ಲಿಸಿಕೊಂಡು ನಿದ್ರೆಗೆ ಜಾರಿದ್ದಾರೆ. ಜುಲೈ 6ರ ಮುಂಜಾನೆ ಮೂವರು ಅಪರಿಚಿತರು ಲಾರಿ ಬಳಿಗೆ ಬಂದು ಏಕಾಏಕಿ ಲಾರಿಯ ಮುಂಬದಿ ಗಾಜಿನ ಮೇಲೆ ಕಲ್ಲು ಎಸೆದಿದ್ದಾರೆ. ಈ ವೇಳೆ ಚಾಲಕ ಗೌತಮ್‌ ಎಚ್ಚರಕೊಂಡು ಯಾರೆಂದು ಪ್ರಶ್ನಿಸಿದಾಗ, ಏಕಾಏಕಿ ಹಲ್ಲೆಗೈದು .18 ಸಾವಿರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಸ್ಥಳೀಯರಾಗಿದ್ದು, ಯಾವುದೇ ಕೆಲಸ ಮಾಡುವುದಿಲ್ಲ. ರಸ್ತೆಗಳಲ್ಲಿ ರಾತ್ರಿ ವೇಳೆ ಒಡಾಡುವ ವಾಹನಗಳನ್ನು ಅಡ್ಡಗಟ್ಟುವುದು, ಒಂಟಿಯಾಗಿ ಓಡಾಡುವವರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದರು. ಬಂದ ಹಣವನ್ನು ಹಂಚಿಕೊಂಡು ಮೋಜು-ಮಸ್ತಿ ಮಾಡಿ ಕಳೆಯುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯುವತಿಯ ‘ಸಾವಿನ’ ಹೈಡ್ರಾಮಾ, CBI ಹೆಸರಲ್ಲಿ 5.57 ಲಕ್ಷ ಪಂಗನಾಮ!

ಮಚ್ಚು ತೋರಿಸಿ ಮೊಬೈಲ್‌ ಕಸಿದ ಪುಡಿ ರೌಡಿಗಳು?: ಪುಡಿರೌಡಿಗಳು ಮಾರಕಾಸ್ತ್ರ ತೋರಿಸಿ ಯುವಕನೊಬ್ಬನ ಮೊಬೈಲ್‌ ಕಸಿದುಕೊಂಡು ಹೋಗಿರುವ ಘಟನೆ ಹೊಸಕೆರೆಹಳ್ಳಿಯ ರೋಟಿಲ್ಯಾಂಡ್‌ ಡಾಬಾ ಬಳಿ ನಡೆದಿದೆ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಡಾಬಾ ಬಳಿ ಪುಡಿ ರೌಡಿಗಳ ಗುಂಪೊಂದು ಮಾರಕಾಸ್ತ್ರ ಹಿಡಿದು ಪುಂಡಾಟ ನಡೆಸಿದೆ. ಡಾಬಾ ಬಳಿ ನಿಂತಿದ್ದ ಯುವಕನೊಬ್ಬನಿಗೆ ಮಚ್ಚು ತೋರಿಸಿ ಬೆದರಿಸಿ ಆತನ ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಡಾಬಾ ಪುಡಿ ರೌಡಿಗಳ ತಾಣವಾಗಿದ್ದು, ಅಮಾಯಕರನ್ನು ಹೆದರಿಸಿ ಸುಲಿಗೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಗಿರಿನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

Mysuru: ಸಾಂಸ್ಕೃತಿಕ ನಗರಿಯಲ್ಲಿ ಖತರ್ನಾಕ್ ಮನೆ ಕಳ್ಳಿಯ ಬಂಧನ

ಇನ್‌ಸ್ಟ್ರಾಗ್ರಾಂ ಅಶ್ಲೀಲ ಮೆಸೇಜ್‌: ಇನ್‌ಸ್ಟ್ರಾಗ್ರಾಂ ಖಾತೆಯಿಂದ ಅಶ್ಲೀಲ ಮೆಸೇಜು ಹಾಕಿ ಕಿರುಕುಳ ನೀಡಲಾಗುತ್ತಿದೆ ಎಂದು ನಗರದ 19 ವರ್ಷ ವಯಸ್ಸಿನ ಯುವತಿಯೊಬ್ಬಳು ರಾಮನಗರದ ಸೈಬರ್‌ಕ್ರೆತ್ರೖಂ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದಾರೆ. ಇನ್‌ಸ್ಟ್ರಾಗ್ರಾಂ ಖಾತೆಯಲ್ಲಿ ವ್ಯಕ್ತಿಯೊಬ್ಬ ಅಶ್ಲೀಲ ಮೆಸೇಜು ಪೋಸ್ಟ್‌ ಮಾಡುವ ಜೊತೆಗೆ ನನ್ನ ಫೋಟೋವನ್ನು ಬಳಸಿ ನನ್ನ ಸ್ನೇಹಿತರಿಗೆ ಅಶ್ಲೀಲ್‌ ವಿಡಿಯೋ ಕಳುಹಿಸುತಿದ್ದಾನೆ. ಇದರಿಂದ ನನ್ನ ಚಾರಿತ್ರ್ಯ ವಧೆಯಾಗುತ್ತಿದೆ. ನನಗೆ ಹಣ ನೀಡುವಂತೆ ಪೀಡಿಸುತ್ತಿದ್ದಾರೆ ಎಂದು ದೂರಿನಲ್ಲಿ ಯುವತಿ ಉಲ್ಲೇಖಿಸಿದ್ದಾರೆ.

ಚಿಕಿತ್ಸೆ ಹೆಸರಲ್ಲಿ ಕುಕೃತ್ಯ: 7 ವರ್ಷದ ಮಗನಿಗೆ 40 ಕಡೆ ಬರೆ, ತಂದೆಯ ಅಟ್ಟಹಾಸಕ್ಕೆ ಮಗ ಬಲಿ!

ಕೊರಿಯರ್‌ ಹೆಸರಿನಲ್ಲಿ ಬ್ಯಾಂಕ್‌ ಖಾತೆಗೆ ಕನ್ನ: ಕೊರಿಯರ್‌ ಸಂಸ್ಥೆಯಿಂದ ಕರೆ ಮಾಡುತ್ತಿರುವುದಾಗಿ ನಂಬಿಸಿ ಎಸ್‌ಎಂಎಸ್‌ ಲಿಂಕ್‌ ಕಳುಹಿಸಿ ಎಂಜಿನಿಯರ್‌ ಒಬ್ಬರ ಬ್ಯಾಂಕ್‌ ಖಾತೆಯಿಂದ .99 ಸಾವಿರ ಲಪಟಾಯಿಸಿದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪ್ರಶಾಂತ್‌ ಎಂ.ಜೆ. ಹಣ ಕಳೆದುಕೊಂಡವರು. ಪ್ರಶಾಂತ್‌ ತಮ್ಮ ಮಗನ ಜನ್ಮದಿನದ ಪ್ರಯುಕ್ತ ಆನ್‌ಲೈನ್‌ನಲ್ಲಿ ಫೋಟೋ ಫ್ರೇಮ್‌ ಬುಕ್‌ ಮಾಡಿದ್ದರು. ಬುಕ್‌ ಮಾಡಿದ್ದ ಆನ್‌ಲೈನ್‌ ಪೋರ್ಟಲ್‌ನವರು ಫೋಟೋ ಫ್ರೇಮನ್ನು ಕೊರಿಯರ್‌ ಮಾಡಿರುವುದಾಗಿ ಮೆಸೇಜ್‌ ಕಳುಹಿಸುವ ಜೊತೆಗೆ ಕೊರಿಯರ್‌ ಕಂಪನಿಯ ನಂಬರ್‌ ಕಳುಹಿಸಿದ್ದಾರೆ.

ಪ್ರಶಾಂತ್‌ ತಾವು ಬುಕ್‌ಮಾಡಿದ್ದ ಪ್ರೇಮ್‌ ಯಾವ ಸ್ಥಳದಲ್ಲಿದೆ ಎಂದು ಟ್ರ್ಯಾಕ್‌ ಮಾಡಲು ದೂರವಾಣಿಗೆ ಕರೆ ಮಾಡಿದಾಗ, ಇವರ ಸಂಖ್ಯೆಗೆ ಎಸ್‌ಎಂಎಸ್‌ ಕಳುಹಿಸಿ ಲಿಂಕ್‌ ಮೇಲೆ ಕ್ಲಿಕ್‌ ಮಾಡುತ್ತಿದ್ದಂತೆ ಇವರ ಖಾತೆಯಿಂದ ಹಣ ಲಪಟಾಯಿಸಿದ್ದಾರೆ ಎಂದು ರಾಮನಗರ ಸೈಬರ್‌ ಕ್ರೈಮ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Latest Videos
Follow Us:
Download App:
  • android
  • ios